ಮೊಬೈಲ್ ರಿಪೇರಿ ಮತ್ತು ದ್ವಿ ಚಕ್ರ ವಾಹನ ರಿಪೇರಿ ತರಬೇತಿಯ ಸಮಾರೋಪ ಸಮಾರಂಭ

ಬ್ರಹ್ಮಾವರ : ನಮ್ಮ ದೇಶದ ಶಕ್ತಿ ಯಾವುದೆಂದರೆ ಯುವ ಶಕ್ತಿ ಅದನ್ನು ನಾವು ಸರಿಯಾದ ರೀತಿಯಲ್ಲಿ ಬಳಸಬೇಕಾಗುತ್ತದೆ. ಸ್ವ ಉದ್ಯೋಗ ಮಾಡುವುದರ ಮೂಲಕ ಆರ್ಥಿಕ ಸ್ವಾತಂತ್ರ‍್ಯ ಪಡೆಯಬಹುದು. ನಮ್ಮ ವೃತ್ತಿಯಲ್ಲಿ ಜನರ ಜೊತೆ ವ್ಯವಹಾರ ಮಾಡುವಾಗ ನಮ್ಮ ಮಾತು, ನಮ್ಮ ಕೌಶಲ್ಯ ಉತ್ತಮ ಗುಣಮಟ್ಟದ ಹಾಗೂ ಮೋಸ ರಹಿತವಾಗಿ ನಡೆಸಿದರೆ ವ್ಯವಹಾರ ಅಭಿವೃದ್ಧಿ ಸಾಧ್ಯ ಎಂದು ಬ್ರಹ್ಮಾವರದ ಖ್ಯಾತ ವಕೀಲರು ಹಾಗೂ ರೋಟರಿ ಕ್ಲಬ್ ನ ಮಾಜಿ ಸಹಾಯಕ ಗೌರರ್ವನರ್ ಶ್ರೀಯುತ ಅಶೋಕ ಶೆಟ್ಟಿ ಅಭಿಪ್ರಾಯ ಪಟ್ಟರು. 

ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯಲ್ಲಿ ೩೦ ದಿನಗಳ ಕಾಲ ನಡೆದೆ ಮೊಬೈಲ್ ರಿಪೇರಿ ಮತ್ತು ದ್ವಿ ಚಕ್ರ ವಾಹನ ರಿಪೇರಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತ್ತರಿಸಿ ಮಾತನಾಡಿದರು. ಸ್ವ ಉದ್ಯೋಗ ನಮ್ಮ ಹೆಮ್ಮೆಯ ವೃತ್ತಿ ಯಾಗಬೇಕು. ಪಡೆದ ತರಬೇತಿಯನ್ನು ಉಪಯೋಗಿಸಿಕೊಂಡು ಯಶಸ್ವಿಯಾಗಿ ಉದ್ಯಮ ನಡೆಸಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ನಿರ್ದೇಶಕರಾದ ಲಕ್ಷ್ಮೀಶ ಎ.ಜಿ ಮಾತನಾಡಿ ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಹೆಚ್ವಿನ ಕಲಿಕೆ ಪಡೆದುಕೊಂಡಿದ್ದೀರಿ. ವ್ಯವಹಾರಿಕವಾಗಿ ಇನ್ನು ಹೆಚ್ವಿನ ರೀತಿಯಲ್ಲಿ ಮುಂದುವರೆಯಿರಿ, ಸಂಸ್ಥೆ ಸದಾ ನಿಮ್ಮ ಜೊತೆಗೆ ಇರುತ್ತದೆ ಎಂದರು. 

ಕಾರ್ಯಕ್ರಮದ ಅತಿಥಿಗಳನ್ನು ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ಸ್ವಾಗತಿಸಿ, ತರಬೇತಿಯ ಹಿನ್ನೋಟ ವನ್ನು ನೀಡಿ, ಉಪನ್ಯಾಸಕರಾದ ಸಂತೋಷ ಶೆಟ್ಟಿ ವಂದಿಸಿದರು. 

ಉಪನ್ಯಾಸಕಿಯಾದ ಶ್ರೀಮತಿ ಚೈತ್ರ ನಿರೂಪಿಸಿದರು. ಪ್ರಾರ್ಥನೆಯನ್ನು ಕಛೇರಿ ಸಹಾಯಕರಾದ ಶ್ರೀ ಶಾಂತಪ್ಪ ನೆರವೇರಿಸಿದರು. ಶ್ರೀ ಮೀಥೇಶ್ ಶೆಟ್ಟಿಗಾರ್ ಶ್ರೀ ಭಾಗ್ಯರಾಜ್ ತಮ್ಮ ತರಬೇತಿ ಅನುಭವ ಹಂಚಿಕೊoಡರು.

 
 
 
 
 
 
 
 
 
 
 

Leave a Reply