ರೋಟರಿ ಉಡುಪಿಯಿಂದ ಪಾಂಗಾಳ ರವೀಂದ್ರ ನಾಯಕ್ ಸಂಸ್ಮರಣ ಕಾರ್ಯಕ್ರಮ

ಉಡುಪಿ ಯ ಜನಪ್ರಿಯ ಸಾಮಾಜಸೇವಕ, ಕೊಡುಗೈ ದಾನಿ ಪಾಂಗಾಳ ರಬೀಂದ್ರ ನಾಯಕರು ಅಗಲಿ ಒಂದು ವರ್ಷವಾದ ಸಂದರ್ಭದಲ್ಲಿ ರೋಟರಿ ಉಡುಪಿ ಮತ್ತು ಶ್ರೀ ಯು.ಎಸ್. ನಾಯಕ್ ಮೆಮೊರಿಯಲ್ ಟ್ರಸ್ಟ್ ಜಂಟಿಯಾಗಿ ಕಡಿಯಾಳಿಯ ರೋಟರಿ ಸ್ಕೌಟ್ ಹಾಲ್ ನಲ್ಲಿ ಸಂಸ್ಮರಣಾ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿದ ರೋಟರಿ ವಲಯ ನಾಲ್ಕರ ಸಹಾಯಕ ಗವರ್ನರ್ ರೋ.ರಾಮಚಂದ್ರ ಉಪಾಧ್ಯಾಯ ಅವರು ಮಾತಾಡುತ್ತಾ ಪಾಂಗಾಳ ರಬೀಂದ್ರನಾಯಕರ ಕೊಡುಗೆ ಉಡುಪಿ ಪರಿಸರದ ಎಲ್ಲಾ ಸಂಸ್ಥೆ ಗಳಿಗೆ, ಕಾರ್ಯಕ್ರಮ ಗಳಿಗೆ ಇದ್ದು ಪರಿಸರದ ಬಗ್ಗೆ ಅತೀವ ಕಾಳಜಿ ಹೊಂದಿದ್ದು ಆಬಗ್ಗೆ ಅವರ ಕೊಡುಗೆಗಳ ಬಗ್ಗೆ ಹೇಳಿ ಇಂತಹವ್ಯಕ್ತಿಗಳು ಸಮಾಜದಲ್ಲಿ ಮಾದರಿಯಾಗಿ ಇರುವ ರೆಂದು ತಿಳಿಸಿದರು. ಪ್ರಾರಂಭದಲ್ಲಿ ರೋಟರಿ ಅಧ್ಯಕ್ಷ ರೋ.ಸುಬ್ರಹ್ಮಣ್ಯ ಕಾರಂತರು ಸ್ವಾಗತಿಸಿ, ರೋಟರಿ ಉಡುಪಿ ಸಮಾಜಸೇವಾ ನಿರ್ದೇಶಕಿ ರೋ.ದೀಪಾಭಂಡಾರಿಯವರು ವಿವರವಾಗಿ ಅವರ ಜೀವನ ಚರಿತ್ರೆಯನ್ನು ಹೇಳಿ ಸಂಸ್ಮರಣ ಭಾಷಣ ಮಾಡಿದರು. ಟ್ರಸ್ಟ್ ನ ವಿಶ್ಬಸ್ಥರಲ್ಲೊಬ್ಬರಾದ ಸಿ.ಎ.ಸುರೇಶ್ ನಾಯಕರು ಅವರ ಸಾಮಾಜಿಕ ಕಳಕಳಿಯ ಬಗ್ಗೆ ತಮ್ಮ ಅನುಭವ ವನ್ನು ವಿವರಿಸಿದರು. ಈ ಸಂದರ್ಭದಲ್ಲಿ ರೋಟರಿ ಯು ಗುರುತಿಸಿ ದ ಎಂಟು ಜನರಿಗೆ ಧನಸಹಾಯವನ್ನು ವಿತರಿಸಲಾಯಿತು. ಮತ್ತು ಅವರು ನಿರಂತರ ಸಹಾಯನೀಡುತ್ತಿರುವ ಉಡುಪಿ ಯ ಯಕ್ಷಗಾನ ಕಲಾರಂಗ, ಸ್ಪಂದನಾ ವಿಶೇಷ ಮಕ್ಕಳ ಶಾಲೆ ಮತ್ತು
ಗಿಳಿಯಾರಿನ ಆಸ್ಪತ್ರೆ ಗೆ ಸಹಾಯ ಧನ ವಿತರಿಸಲಾಯ್ತು. ಮಾತ್ರವಲ್ಲದೆ ವಿಶ್ವಸ್ಣರೊಲ್ಲಬ್ಬರಾದ ಶ್ರೀ ರವೀಂದ್ರನಾಥ ಶಾನುಬಾಗರು ಗುರುತಿಸಿದ ಕೆಲವು ಫಲಾನುಭವಿಗಳಿಗೆ ಧನಸಹಾಯವನ್ನು ಅವರಿಗೆ ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ರೋಟರಿ ಉಡುಪಿಯಿಂದ ಕಡಿಯಾಳಿ ಕಮಲಾಬಾಯಿ ಹೈಸ್ಕೂಲ್ ನ ಶೌಚಾಲಯ ನವೀಕರಣಕ್ಕಾಗಿ ಧನಸಹಾಯವನ್ನು ನೀಡಲಾಯಿತು. ಕೊನೆಯಲ್ಲಿ ರೋ. ಗೋಪಾಲಕೃಷ್ಣ ಪ್ರಭುಗಳು ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮ ವನ್ನು ರೋಟರಿ ಕಾರ್ಯದರ್ಶಿ ರೋ.ಗುರುರಾಜ ಭಟ್ಟರು ಸಂಯೋಜಿಸಿದ್ದರು. ಸಮಾರಂಭದಲ್ಲಿ ಟ್ರಸ್ಟ್ ನ ವಿಶ್ವಸ್ಥರಾದ ಶ್ರೀ ಗುಜ್ಜಾಡಿ ಪ್ರಭಾಕರ ನಾಯಕ್, ಪಾಂಗಾಳ ನಾಯಕ ಕುಟುಂಬಸ್ಥರು ಮತ್ತು ಅನೇಕ ಅಭಿಮಾನಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply