ನಿಟ್ಟೂರು ಪ್ರೌಢಶಾಲೆಯಲ್ಲಿ ಇಂರ‍್ಯಾಕ್ಟ್ ಕ್ಲಬ್ ಪದಗ್ರಹಣ

ಉಡುಪಿ : ನಿಟ್ಟೂರು ಪ್ರೌಢಶಾಲೆಯಲ್ಲಿ ಇಂರ‍್ಯಾಕ್ಟ್ ಕ್ಲಬ್ ಪದಗ್ರಹಣ ಕಾರ್ಯಕ್ರಮ ೧೧-೦೮-೨೦೨೩ರಂದು ಜರಗಿತು. ರೊಟೆರಿಯನ್ ದೀಪಾ ಭಂಡಾರಿ ಪದಗ್ರಹಣ ನೆರವೇರಿಸಿ, ವಿದ್ಯಾರ್ಥಿಗಳು ಇಂರ‍್ಯಾಕ್ಟ್ ಕ್ಲಬ್  ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಭವಿಷ್ಯದಲ್ಲಿ ಉತ್ತಮ ನಾಯಕರಾಗಬಹುದು ಎನ್ನುತ್ತಾ ಶುಭ ಹಾರೈಸಿದರು. ಇಂರ‍್ಯಾಕ್ಟ್ ಸಭಾಪತಿ ರೋ| ಗುರುರಾಜ ಭಟ್, ರೋ| ಹೇಮಂತ್ ಯು. ಕಾಂತ್, ರೋ| ಜನಾರ್ದನ ಭಟ್ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.

ಶಾಲಾ ಮುಖ್ಯೋಪಾಧ್ಯಾಯರಾದ ಅನಸೂಯ ನೂತನ ಪದಾಧಿಕಾರಿಗಳಿಗೆ ಶುಭಕೊರಿದರು. ಶಾಲಾ ಇಂರ‍್ಯಾಕ್ಟ್ ಕ್ಲಬ್ ಸಂಯೋಜಕ ದೇವದಾಸ್ ಶೆಟ್ಟಿ ಉಪಸ್ಥಿತರಿದ್ದರು. ಇಂರ‍್ಯಾಕ್ಟರ್ ವಿಜಯಲಕ್ಷ್ಮಿ ಸ್ವಾಗತಿಸಿದರು, ವೈಷ್ಣವಿ ವಂದಿಸಿದರು. ಯಶಶ್ವಿನಿ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply