ನರೇಂದ್ರ ಮೋದಿ ಜನ್ಮದಿನದ ನಿಮಿತ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ 

ಮೋದಿ ಉತ್ಸವ ಸಮಿತಿ ಉಡುಪಿ ಜಿಲ್ಲೆ, ಮೋದಿ ಬ್ರಿಗೇಡ್ ಉಡುಪಿ ಜಿಲ್ಲೆ, ಎ.ಪಿ.ಎಂ.ಸಿ ರಕ್ಷಣಾ ಸಮಿತಿ ಉಡುಪಿ ಮತ್ತು ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಮತ್ತು ದ.ಕ ಜಿಲ್ಲಾ ವತಿಯಿಂದ  ಪ್ರಧಾನ ಮಂತ್ರಿ, ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ಉಡುಪಿಯ ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಇಲ್ಲಿನ ರೋಗಿಗಳಿಗೆ ಹಣ್ಣು ಹಂಪಲು ನೀಡಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭಾ ಸದಸ್ಯ ವಿಜಯ್ ಕೊಡವೂರು ವಹಿಸಿದ್ದರು,   ಜಿಲ್ಲಾ ಆಸ್ಪತ್ರೆಯ RMO ಡಾ. ನಿತ್ಯಾನಂದ ನಾಯಕ್ ರೋಗಿಗಳಿಗೆ ಹಣ್ಣು ವಿತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮೋದಿ ಬ್ರಿಗೇಡ್ ನ ಜಿಲ್ಲಾ ಅಧ್ಯಕ್ಷ ಸುಭಾಷಿತ ಕುಮಾರ್, ಎ.ಪಿ.ಎಂ.ಸಿ ರಕ್ಷಣಾ ಸಮಿತಿಯ ಕಾರ್ಯದಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಕುಮಾರ್ ಪ್ರಸಾದ್, ಮೋದಿ ಬ್ರಿಗೇಡ್ ನ ಪ್ರಮುಖರಾದ ಚಿನ್ಮಯ್ ಮೂರ್ತಿ, ವಿನೋದ್ ಕುಮಾರ್,ಸುರೇಶ್ ಆರ್. ಪಿ ಮತ್ತು ದೀರಜ್ ಕೆ.ಎಸ್, ಪದಾಧಿಕಾರಿಗಳಾದ ಫಯಾಜ್, ಪ್ರಭುಗೌಡ ಪಾಟೀಲ,ಲಕ್ಷ್ಮಣ್, ಬಸಯ್ಯ ಹಿರೇಮಠ, ಪoಪೇಶ್ , ಸಂಗೀತಾ , ವಿದ್ಯಾ, ಆದಿತ್ಯ, ಅಭಿಷೇಕ, ಪೃಥ್ವಿ, ಸುಬ್ರಮಣ್ಯ, ವಿಠ್ಠಲ್ ಗೌಡರ್, ಈರಪ್ಪ ಗೌಂಡಿ, ಸೈಯ್ಯದ್, ಹನುಮಂತ , ಮುಂತಾದವರು ಭಾಗವಹಿಸಿದ್ದರು

Leave a Reply