Janardhan Kodavoor/ Team KaravaliXpress
23.4 C
Udupi
Saturday, February 4, 2023
Sathyanatha Stores Brahmavara

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಜೆಮ್ಸ್ ಸ್ಟೋನ್ ಜುವೆಲ್ಲರಿ ಅನಾವರಣ

ಉಡುಪಿ: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಜೆಮ್ಸ್ ಸ್ಟೋನ್ ಜುವೆಲ್ಲರಿ ಫೆಸ್ಟಿವಲ್ ಉದ್ಘಾಟನಾ ಸಮಾರಂಭ ಉಡುಪಿ ಶಾಖೆಯಲ್ಲಿ ಶನಿವಾರ ನಡೆಯಿತು.ಅನ್ಕಟ್ ಅಭರಣವನ್ನು ಸಮೃದ್ಧಿ ಶೆಟ್ಟಿ ,ಪ್ರೇಶಿಯ ಅಭರಣವನ್ನು ಅಂಜಲಿ ಶಾನ್ಭೋಗ್, ಜೆಮ್ಸ್ ಸೆಟ್ ನಿಶಾ ಸಾಜಿದ್ ಅಭರಣಗಳನ್ನು ಅನಾವರಣಗೊಳಿಸಿದರು.

 

ವಿಶ್ವದ ಅತಿದೊಡ್ಡ ಆಭರಣಗಳ ರೀಟೇಲರ್‌ಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ದೇಶಾದ್ಯಂತ ಇರುವ ತನ್ನೆಲ್ಲಾ ಶೋರೂಂಗಳಲ್ಲಿ ಜೆಮ್‌ಸ್ಟೋನ್ ಜ್ಯುವೆಲ್ಲರಿ ಉತ್ಸವವನ್ನು ಆರಂಭಿಸಿದೆ . ಬೆಲೆಬಾಳುವ ಜೆಮ್‌ಸ್ಟೋನ್‌ಗಳು ಮತ್ತು ಅನ್‌ಕಟ್ ವಜ್ರಗಳೊಂದಿಗೆ ಅತ್ಯಾಕರ್ಷಕ ಮತ್ತು ಸುಂದರವಾದ ಆಭರಣಗಳು ಗ್ರಾಹಕರ ಮನಸೆಳೆಯುತ್ತಿದೆ . ಈ ಜೆಮ್‌ಸ್ಟೋನ್ ಆಭರಣ ಉತ್ಸವವು ಫೆಬ್ರವರಿ 18 , 2021 ರವರೆಗೆ ನಡೆಯಲಿದ್ದು , ನಮ್ಮ ಸಬ್ ಬ್ರಾಂಡ್ ಸಂಗ್ರಹಗಳನ್ನು ಪ್ರದರ್ಶಿಸಿ ಪ್ರೀಶಿಯಾ , ಜೆಮ್ ಆಭರಣ ಮತ್ತು ಆನ್‌ಕಟ್ ವಜ್ರಾಭರಣಗಳನ್ನು ಉತ್ತಮ ಚಿನ್ನದಲ್ಲಿ ಹೆಣೆದ ಮತ್ತು ಅಮೂಲ್ಯವಾದ ಸ್ಟೋನ್ ಗಳಿಂದ ಕೂಡಿದೆ.ಎಮರಾಲ್, ರೂಬಿ , ಸಫೈರ್ ಮತ್ತು ಅತ್ಯಾಕರ್ಷಕವಾದ ಅನ್‌ಕಟ್‌ ಡೈಮಂಡ್‌ಗಳಂತಹ ಅತ್ಯಮೂಲ್ಯ ಸ್ಟೋನ್ ಗಳಿಂದ ಅತ್ಯುತ್ಕೃಷ್ಟವಾದ ಚಿನ್ನದಿಂದ ತಯಾರಿಸಲಾದ ಆಭರಣಗಳು ಇಲ್ಲಿವೆ. ಆಭರಣಗಳ ವಿನ್ಯಾಸದ ತಂಡವು ರಚಿಸಿರುವ ಆಕರ್ಷಕ ವಿನ್ಯಾಸಗಳೊಂದಿಗೆ ಉತ್ಸವವು ಅದ್ಭುತವಾದ ರತ್ನದ ಆಭರಣಗಳನ್ನು ಸಂತೋಷಕರ ಮಾಲೀಕತ್ವದ ಭರವಸೆಯೊಂದಿಗೆ ಹೊಂದಲು ಅತ್ಯುತ್ತಮ ಅವಕಾಶವನ್ನು ನೀಡುತ್ತದೆ . ಇದರೊಂದಿಗೆ ಜೀವನಪರಿರ್ಯಂತ ಉಚಿತ ನಿರ್ವಹಣೆ , ಒಂದು ವರ್ಷದ ವಿಮೆ , ಬೈಬ್ಯಾಕ್ ಗ್ಯಾರಂಟಿ ಹಾಗೂ ವಿವರಗಳೊಂದಿಗೆ ಪಾರದರ್ಶಕ ಬೆಲೆಯನ್ನು ನೀಡುತ್ತದೆ .

 

ಮಲಬಾರ್ ಗೋಲ್ಡ್ & ಡೈಮಂಡ್ಸ್ ಎಲ್ಲಾ ಶ್ರೇಣಿಯ ಆಭರಣಗಳನ್ನು ಹೊರ ತಂದಿದೆ . ಇದು ಎಲ್ಲಾ ವಯಸ್ಸಿನವರ ಅಭಿರುಚಿಯನ್ನು ಪೂರೈಸುತ್ತದೆ ಮತ್ತು ಇದು ದೇಶದ ಆದ್ಯತೆಯ ಆಭರಣ ಬ್ರಾಂಡ್‌ಗಳಲ್ಲಿ ಒಂದಾಗಿದೆ . ಕಂಪನಿಯು ಇತ್ತೀಚೆಗೆ ‘ ಒನ್ ಇಂಡಿಯಾ ಒನ್ ಗೋಲ್ಡ್ ರೇಟ್ ‘ ಯೋಜನೆಯನ್ನು ಪ್ರಾರಂಭಿಸಿದ್ದು , ಇದರಡಿಯಲ್ಲಿ ಚಿನ್ನದ ಆಭರಣಗಳನ್ನು ದೇಶದಲ್ಲಿ ಎಲ್ಲಿಯಾದರೂ ಏಕರೂಪದ ಬೆಲೆಗೆ ಮಾರಾಟ ಮಾಡಲಾಗುತ್ತದೆ . ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ ಬದ್ಧತೆಯ ಭಾಗವಾಗಿ ತನ್ನ ಗ್ರಾಹಕರಿಗೆ 10 ಭರವಸೆಗಳನ್ನು ನೀಡುತ್ತದೆ . ಈ ಬದ್ಧತೆಗಳಲ್ಲಿ ನಿಖರವಾದ ಉತ್ಪಾದನಾ ವೆಚ್ಚ , ಸ್ಟೋನ್ ತೂಕ , ನಿವ್ವಳ ತೂಕ ಮತ್ತು ಆಭರಣಗಳ ಸ್ಫೋನ್‌ನ ಶುಲ್ಕ , ಆಭರಣಗಳ ಸಂಪೂರ್ಣ ಪಾರದರ್ಶಕತೆ , ಜೀವನಪರ್ಯಂತ ಖಚಿತ ಮೇಯಿಂಟೆನೆನ್ಸ್ , ಚಿನ್ನ ವಿನಿಮಯದಲ್ಲಿ ಶೂನ್ಯ ಕಡಿತ , 100 % BIS 916 ಹಾಲ್‌ಮಾರ್ಕ್ ಶುದ್ಧ ಚಿನ್ನ , ಪರೀಕ್ಷಿಸಲಾಗಿರುವ ಮತ್ತು ಪ್ರಮಾಣೀಕೃತ ವಜ್ರಗಳು , ಗ್ಯಾರಂಟೀಡ್ ಪೇಬ್ಯಾಕ್ , ನಿಮ್ಮ ಆಭರಣವು ವಿಮೆಗೆ ಒಳಪಡುತ್ತದೆ , ಕ್ಯಾರೆಟ್ ವಿಶ್ಲೇಷಕ ಸೌಲಭ್ಯ , ಪ್ರತಿ ವಜ್ರ 28 ಆಂತರಿಕ ಗುಣಮಟ್ಟ ಪರೀಕ್ಷೆಗಳಿಗೆ ಒಳಗಾಗುತ್ತದೆಯಲ್ಲದೆ , ಐಜಿಐ – ಜಿಐಎ ಪ್ರಾಮಾಣೀಕರಣ ಹೊಂದಿರುತ್ತದೆ , ಜವಾಬ್ದಾರಿಯುತ ಮೂಲದ ಚಿನ್ನದಂತಹ ಹಲವಾರು ಪ್ರಯೋಜನಗಳನ್ನು ಈ ಮಲಬಾರ್ ಭರವಸೆಗಳು ಗ್ರಾಹಕರಿಗೆ ನೀಡುತ್ತವೆ .

ಕವಿತಾ ಸ್ವಾಗತಿಸಿ ವಂದಿಸಿದರು. ಜಿ.ಆರ್.ಎಂ ರಾಘವೇಂದ್ರ ನಾಯಕ್,ಪುರಂದರ ತಿಂಗಲಾಯ, ಮುಸ್ತಫಾ ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!