ಉಡುಪಿ, ಆ. 19: ಜಿಲ್ಲಾ ಲಯನ್ಸ್ 317C ಇದರ ಸಂಪುಟ ಮತ್ತು ಗವರ್ನರ್ ಪದ ಪ್ರಧಾನ ಸಮಾರಂಭ

ಉಡುಪಿ: ಜಿಲ್ಲಾ ಲಯನ್ಸ್ 317C ಇದರ ಸಂಪುಟ ಮತ್ತು ಗವರ್ನರ್ ಪದ ಪ್ರಧಾನ ಸಮಾರಂಭ ಆ.19ರಂದು ಮಧ್ಯಾಾಹ್ನ 3ಕ್ಕೆ ಉಡುಪಿಯ ಅಂಬಾಗಿಲಿನ ಅಮೃತ್ ಗಾರ್ಡನ್‌ನಲ್ಲಿ ಜರಗಲಿದೆ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಲ. ಡಾ. ನೇರಿ ಕರ್ನೇಲಿಯೊ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
 ಉಡುಪಿ ಬಿಷಪ್ ಡಾ ಜೆರಾಲ್ಡ್ ಐಸಾಕ್ ಲೋಬೊ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಲಿದ್ದಾಾರೆ. ಲಯನ್ಸ್ ಕ್ಲಬ್‌ನ ಪ್ರಮುಖರಾದ ರಾಮಕೃಷ್ಣ ಮೂರ್ತಿ, ಕೆ. ವಂಶಿಧರ್ ಬಾಬು, ಜಿ. ಶ್ರೀನಿವಾಸ್ ಮೊದಲಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾಾರೆ. ಸಾಧಕರಿಗೆ ಸಮ್ಮಾಾನ, ವಿದ್ಯಾಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಲಯನ್ಸ್ ಜಿಲ್ಲೆ 317ಸಿ ವ್ಯಾಪ್ತಿಯಲ್ಲಿ  ಉಡುಪಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಕಂದಾಯ ಜಿಲ್ಲೆಗಳಲ್ಲಿ ಒಳಗೊಂಡು 3 ಸಾವಿರ ಸದಸ್ಯರು ಇದ್ದಾರೆ. ಉಡುಪಿ ಜಿಲ್ಲೆಯಲ್ಲಿ ‘ಲೀವ್ ಟೂ ಲೀಡ್’ ಎಂಬ ಘೋಷಣೆಯೊಂದಿಗೆ ‘ಬೆಳಕು’ ಜಿಲ್ಲಾ ಕಾರ್ಯಕ್ರಮದಡಿಯಲ್ಲಿ ಹಲವಾರು ಸೇವಾ ಚಟುವಟಿಕೆಗಳ ಯೋಜನೆ ರೂಪಿಸಲಾಗಿದೆ. ಜಿಲ್ಲೆಗೆ ಈಗಾಗಲೆ ತುರ್ತು ನೆರೆ ಪರಿಹಾರ ನಿಧಿಯನ್ನು ವಿತರಿಸಿದ್ದೇವೆ. ಮುಂದಿನ ದಿನಗಳಲ್ಲಿ ಶಿಕ್ಷಣ, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿ ಸಾಕಷ್ಟು ಯೋಜನೆಗಳನ್ನು ರೂಪಿಸಲಾಗುವುದು. ಸೇವಾ ಮತ್ತು ಸಮಾಜಮುಖಿ ಚಟುವಟಿಕೆ ಕಾರ್ಯಕ್ರಮಗಳನ್ನು ಹೆಚ್ಚು ಹಮ್ಮಿಕೊಳ್ಳಲಾಗುವುದು ಎಂದರು.
 ಈ ಸಂದರ್ಭದಲ್ಲಿ ಜಿಲ್ಲಾ ಲಯನ್ಸ್ ಸಂಪುಟ ಕಾರ್ಯದರ್ಶಿ ಲ. ರವಿರಾಜ ನಾಯಕ್, ಖಜಾಂಚಿ ಲ. ರೀಚರ್ಡ್ ಡಯಾಸ್, ಮಾರ್ಕೇಟಿಂಗ್ ಸಂವಹನ-ಮಾಹಿತಿ ಅಧಿಕಾರಿಗಳಾದ ಲ. ಸಿದ್ಧರಾಜು, ಡಾ ಜಗದೀಶ್ ಹೊಳ್ಳ, ಲ. ಜಾರ್ಜ್ ಡಿ’ಸೋಜಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply