ಯುವ ವಿಚಾರ ವೇದಿಕೆ (ರಿ.) ವತಿಯಿಂದ ಸ್ವಾತಂತ್ರ್ಯೋತ್ಸವ, ಅಮೃತೋತ್ಸವ, ಸಮ್ಮಾನ ಕಾರ್ಯಕ್ರಮ

ಉಪ್ಪೂರು : ಯುವ ವಿಚಾರ ವೇದಿಕೆ (ರಿ.)ಉಪ್ಪೂರು ಕೊಳಲಗಿರಿ, ವತಿಯಿಂದ 75 ನೇ ಸ್ವಾತಂತ್ರೋತ್ಸವ ಧ್ವಜಾರೋಹಣ- ಅಮೃತೋತ್ಸವ ಕಾರ್ಯಕ್ರಮ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯರಿಗೆ ಸಮ್ಮಾನ ಕಾರ್ಯಕ್ರಮ ನಡೆಯಿತು. 

ಧ್ವಜಾರೋಹಣವನ್ನು ಉಪ್ಪೂರು ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ತಮ್ಮ ಸುದೀರ್ಘ ಸೇವೆಯಿಂದ ನಿವೃತ್ತಿ ಹೊಂದಿದ ನಾಗರತ್ನ ಟೀಚರ್ ನೆರವೇರಿಸಿದರು. ತಮ್ಮ ಶಿಸ್ತು ಬದ್ದ ನಿಷ್ಕಳಂಕ ಸುದೀರ್ಘ ಸೇವೆಯಿಂದ ನಿವೃತ್ತಿ ಹೊಂದಿದ ನಾಗರತ್ನ ಟೀಚರ್ ಅವರಿಗೆ ನಮ್ಮ ಯುವ ವಿಚಾರ ವೇದಿಕೆ ವತಿಯಿಂದ ಸಮ್ಮಾನಿಸಿ ಗೌರವ ಪೂರ್ಣ ಗುರು ವಂದನೆ ಸಲ್ಲಿಸಲಾಯಿತು. ಸಮ್ಮಾನ ಸ್ವೀಕರಿಸಿ ವೇದಿಕೆ ನಡೆಸುವ ಕಾರ್ಯಕ್ರಮಗಳಾದ ಕೃಷಿ, ಗ್ರಾಮೀಣ ಕ್ರೀಡಾಕೂಟ, ಶೈಕ್ಷಣಿಕ ತರಬೇತಿ, ಆರೋಗ್ಯ ಶಿಬಿರ, ಶ್ರಮದಾನ ಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಮುಖ್ಯ ಅತಿಥಿಗಳಾಗಿ ನಮ್ಮ ಉಪ್ಪೂರು ಗ್ರಾಮ ಪಂಚಾಯತ್ ಸದಸ್ಯ ಅಶ್ವಿನ್ ರೋಚ್, ಯುವ ಉದ್ಯಮಿ ಪೀಟರ್ ಡಿಸೋಜ, ಸಾಮಾಜಿಕ ಕಾರ್ಯಕರ್ತ ರಮೇಶ್ ಕರ್ಕೇರಾ, ಹಿರಿಯರು, ವೇದಿಕೆಯ ಹಿರಿಯ ಸದಸ್ಯ ಮಾಧವ ಪಾಣ, ವೇದಿಕೆಯ ಅಧ್ಯಕ್ಷ ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು. ಸಾರ್ವಜನಿಕರು, ಮಕ್ಕಳು ವೇದಿಕೆಯ ಸದಸ್ಯರು ಭಾಗವಹಿಸಿದ್ದರು. ಅಂತ್ಯದಲ್ಲಿ ಸರ್ವರಿಗೂ ಸಿಹಿತಿಂಡಿ ವಿತರಿಸಲಾಯಿತು.

ವೇದಿಕೆಯ ಸದಸ್ಯ ಸುಬ್ರಹ್ಮಣ್ಯ ಆಚಾರ್ಯ ಸಮ್ಮಾನಿತರ ಪರಿಚಯ ನೀಡಿದರು ಹಾಗೂ ಶಶಿಕುಮಾರ್ ಸರ್ವರಿಗೂ ಧನ್ಯವಾದ ಸಮರ್ಪಿಸಿದರು. ವೇದಿಕೆಯ ಸದಸ್ಯರಾದ ಸದಾಶಿವ್ ಕುಮಾರ್ ಸರ್ವರನ್ನುಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply