ಪತ್ರಿಕಾ ವಿತರಕರಿಗೆ ಕಾರ್ಮಿಕ ಇಲಾಖೆಯಲ್ಲಿ ಯೋಜನೆ ಜಾರಿ; ಮುಖ್ಯಮಂತ್ರಿಗೆ ಕೆಯುಡಬ್ಲ್ಯೂಜೆ, ವಿತರಕರ ಒಕ್ಕೂಟ ಕೃತಜ್ಞತೆ

ಅಪಘಾತದಲ್ಲಿ ಮೃತಪಟ್ಟ ಪತ್ರಿಕಾ ವಿತರಕರಿಗೆ 2 ಲಕ್ಷ ವೈದ್ಯಕೀಯ ನೆರವಿಗೆ 1 ಲಕ್ಷ ರೂ ನೆರವಿನ ಯೋಜನೆಯನ್ನು ರಾಜ್ಯ ಸರ್ಕಾರ, ಕಾರ್ಮಿಕ ಇಲಾಖೆ ಮೂಲಕ ಜಾರಿ ಮಾಡಿದ್ದಕ್ಕಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಅಧ್ಯಕ್ಷರಾದ ಶಿವಾನಂದ ತಗಡೂರು ನೇತೃತ್ವದ ನಿಯೋಗವು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿತು.

ಸುದ್ದಿಮನೆಯಲ್ಲಿ ಮಹತ್ವದ ಕೊಂಡಿಯಾಗಿ ಕೆಲಸ ಮಾಡುವ ವಿತರಕರು ಅಪಘಾತ ಮತ್ತಿತರ ಸಂಕಷ್ಟಕ್ಕೆ ಒಳಗಾದ ಸಂದರ್ಭದಲ್ಲಿ ನೆರವಾಗಲು ಯಾವುದೇ ಯೋಜನೆಗಳು ಇರಲಿಲ್ಲ. ಕಾರ್ಮಿಕ ಇಲಾಖೆ ಯೋಜನೆ ವ್ಯಾಪ್ತಿಗೆ ತರುವ ಮೂಲಕ ಅವರಿಗೆ ಸಾಮಾಜಿಕ ಭದ್ರತೆ ಒದಗಿಸುವ ಕೆಲಸವನ್ನು ಮಾಡಿರುವುದು ಮಹತ್ವದ ತೀರ್ಮಾನ ಮತ್ತು ಶ್ಲಾಘನೀಯವಾಗಿದೆ ಎಂದು ತಿಳಿಸಿದ ನಿಯೋಗ, ಸಮಸ್ತ ವಿತರಕರ ಪರವಾಗಿ ಸಿಎಂಗೆ ಧನ್ಯವಾದ ಸಲ್ಲಿಸಿತು.

ಪತ್ರಿಕಾವಿತರಕರಿಗಾಗಿ ಯಾವ ರಾಜ್ಯದಲ್ಲಿಯೂ ಈ ರೀತಿ ಯೋಜನೆ ಜಾರಿ ಇರಲಿಲ್ಲ. ತಾವು ಮುಖ್ಯಮಂತ್ರಿಯಾಗಿ ವಿತರಕರ ಸ್ಪಂದಿಸಿದ್ದೀರಿ ಎಂದಾಗ ತಕ್ಷಣವೇ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನಿಮಗೆಲ್ಲ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಪತ್ರಿಕಾ ವಿತರಕರಿಗಾಗಿ ಯೋಜನೆ ಜಾರಿಗೆ ಸಹಕಾರ ನೀಡಿದ ಸಿಎಂ ಮಾಧ್ಯಮ ಸಂಯೋಜಕ ಕೆ.ವಿ.ಪ್ರಭಾಕರ್ ಅವರನ್ನು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ ಅವರು ಗೌರವಿಸಿದರು.

ನಿಯೋಗದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್, ಮಾಜಿ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪದಾಧಿಕಾರಿಗಳಾದ ಸುಬ್ರಹ್ಮಣ್ಯ, ಧರ್ಮಾಪುರ ನಾರಾಯಣ್, ರಾಘವೇಂದ್ರ, ಮಹದೇವು, ಶ್ರೀನಿವಾಸ್, ಗಣೇಶ್, ಮಹೇಶ್ ಮತ್ತಿತರರು ಹಾಜರಿದ್ದರು.

 
 
 
 
 
 
 
 
 
 
 

Leave a Reply