ಬ್ರಾಹ್ಮಣ ಮಹಾ ಸಭಾ ಕೊಡವೂರು: ವಿಪ್ರ ಮಹಿಳಾ ದಿನಾಚರಣೆ.

ಮಹಿಳೆ ಮಾನಸಿಕವಾಗಿ, ದೈಹಿಕವಾಗಿ, ಭಾವನಾತ್ಮಕವಾಗಿ , ಆಧ್ಯಾತ್ಮಿಕವಾಗಿ ಸಾಮಾಜಿಕವಾಗಿ, ಸದೃಢಳಾದಾಗ ಮಾತ್ರ ಆಕೆಯ ಅಸ್ತಿತ್ವಕ್ಕೊಂದು ಬೆಲೆ ಎಂದು ಖ್ಯಾತ ಮಧುಮೇಹ ತಜ್ಞೆ ,ಬಿಗ್ ಮೆಡಿಕಲ್ ಸೆಂಟರ್ ನ ಕುಟುಂಬ ವೈದ್ಯೆ ಡಾ. ಶೃತಿ ಬಲ್ಲಾಳ್ ಅಭಿಪ್ರಾಯ ಪಟ್ಟರು .ಕೊಡವೂರು ಬ್ರಾಹ್ಮಣ ಮಹಾ ಸಭಾ, ಆಯೋಜಿಸಿದ ವಿಶ್ವ ಮಹಿಳಾ ದಿನದ ಸಭಾ ಕಾರ್ಯಕ್ರಮ ದಲ್ಲಿ ಮಹಿಳೆಯರು ‍ ನಿತ್ಯ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ದಶ ಸೂತ್ರಗಳನ್ನು ಪಾಲಿಸುವಂತೆ ಮನವಿ ಮಾಡಿದ ಅವರು ಎಲ್ಲರ ಆರೋಗ್ಯದ ಕಾಳಜಿ ವಹಿಸುವ ಮಹಿಳೆ ಮೊದಲು ತನ್ನ ಆರೋಗ್ಯವನ್ನು ನೋಡಿಕೊಳ್ಳಬೇಕು ಎಂದು ಕರೆ ಇತ್ತರು.ಶೋಭಾ ಕಲ್ಕೂರ್ ಮುದ್ರಾಡಿ, ಶಾಂತಾ ಗಣೇಶ್, ಕುಂಬಾಶಿ, ಮುಕ್ತಾ ಶ್ರೀನಿವಾಸ್ ಮೂಡಬೆಟ್ಟು ಇವರನ್ನು ವಿಪ್ರ ಸಾಧಕ‌ ಮಹಿಳೆಯರೆಂದು‌ ಗುರುತಿಸಿ ಗೌರವಿಸಲಾಯಿತು. ವಿಪ್ರ ಮಹಿಳೆಯರಿಗಾಗಿ ವಿವಿಧ ಆಟೋಟ‌ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು. ಕೊಡವೂರು ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಶ್ರೀನಿವಾಸ ಉಪಾಧ್ಯ ಸ್ವಾಗತಿಸಿದರು. ಗೌರವಾಧ್ಯಕ್ಷರಾದ ಪಿ ಗುರುರಾಜ್ ರಾವ್ ಹಾಗೂ ಗೋವಿಂದ ಐತಾಳ್ ,ಕೋಶಾಧಿಕಾರಿಶ್ರೀಧರ ಶರ್ಮ ಉಪಸ್ಥಿತರಿದ್ದರು.

ಜತೆ ಕಾರ್ಯದರ್ಶಿ ರಾಜಶ್ರೀ ಪ್ರಸನ್ನ ಪ್ರಸ್ತಾವಿಸಿದರು. ದೀಪಾ ಶ್ರೀ ರಾವ್ , ಅಂಬಿಕಾ ಕಂಬಳಕಟ್ಟ,ನಿರ್ಮಲಾ ಮಂಜುನಾಥ್ ಸಾಧಕಿಯರನ್ನು ಹಾಗೂ.ಅಶ್ವಿನಿ ಶ್ರೀನಿವಾಸ್ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಸೌಮ್ಯಾ ರಾವ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಪವಿತ್ರಾ ಸಾಮಗ ಸಹಕರಿಸಿದರು. ಉಮಾಶ್ರೀಧರ್ ಧನ್ಯವಾದವಿತ್ತರು. ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply