ಕೊಡವೂರು ಬ್ರಾಹ್ಮಣ ಮಹಾಸಭಾದ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

ಮಲ್ಪೆ: ಕೊಡವೂರು ಬ್ರಾಹ್ಮಣ ಮಹಾಸಭಾದ ರಜತೋತ್ಸವದ ಸರಣಿ ಕಾರ್ಯಕ್ರಮಗಳಲ್ಲಿ 12 ನೇ ಕಾರ್ಯಕ್ರಮವಾಗಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ  ಸಮಿತಿಯ ವತಿಯಿಂದ ರಾಷ್ಟ್ರ ಧ್ವಜಕ್ಕೆ ವಂದದನೆ ಸಲ್ಲಿಸಲಾಯಿತು. ರಜತೋತ್ಸವದ ಕಾರ್ಯಾಧ್ಯಕ್ಷ ಶ್ರೀ ಮಂಜುನಾಥ ಭಟ್ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದೇಶ ನೀಡಿದರು. ತದನಂತರ, ರಜತೋತ್ಸವದ ಸವಿನೆನಪಿಗಾಗಿ ಸಂಸ್ಥೆಯ ಸ್ವಂತ ಕಟ್ಟಡ “ವಿಪ್ರಶ್ರೀ”ಯ ಸುತ್ತ ಮುತ್ತ 25 ಉತ್ತಮ ಜಾತಿಯ ಗಿಡ ನೆಡುವ ವನಮಹೋತ್ಸವ  ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಸ್ಥೆಯ ಹಿರಿಯರು ಹಾಗೂ ಗೌರವಧ್ಯಕ್ಷರಾದ ಶ್ರೀ ಗುರುರಾಜ ರಾವ್ ಗಿಡ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು.  ಮುಂದೆ ಅಧ್ಯಕ್ಷ ಶ್ರೀ ನಾರಾಯಣ ಬಲ್ಲಾಳ್, ಹಿರಿಯರಾದ ಶ್ರೀ ಲಕ್ಷ್ಮೀನಾರಾಯಣ ಭಟ್, ಶ್ರೀ ವಸಂತ ರಾವ್, ಶ್ರೀಮತಿ ರತ್ನ ಬಾಯರಿ ಹಾಗೂ ಶ್ರೀಮತಿ ಪ್ರೇಮಾ ಬಾಯರಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟರು.

  ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಮಕ್ಕಳಿಗೆ ಆನ್ ಲೈನ್ ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಛದ್ಮವೇಷ ಸ್ಪರ್ಧೆ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಭಾಷಣ ಸ್ಪರ್ಧೆ ಮತ್ತು ವಯಸ್ಕರಿಗೆ ಆನ್ ಲೈನ್ ನಲ್ಲಿ ದೇಶಭಕ್ತಿ ಗೀತೆ ಸ್ಪರ್ಧೆ ನಡೆಯಿತು. ಈ ಸಂದರ್ಭದಲ್ಲಿ ರಜತೋತ್ಸವ ಸಮಿತಿಯ ಉಪಾಧ್ಯಕ್ಷ ಶ್ರೀ ಶ್ರೀನಿವಾಸ ಉಪಾಧ್ಯ, ಪ್ರಧಾನ ಕಾರ್ಯದರ್ಶಿ ಶ್ರೀ ಚಂದ್ರಶೇಖರ್ ರಾವ್, ಸಂಚಾಲಕರಾದ ಶ್ರೀ ಸುಧೀರ್ ರಾವ್, ಕೋಶಾಧಿಕಾರಿ ಶ್ರೀ ಶ್ರೀಧರ ಶರ್ಮ, ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಬಾಯರಿ.

ಶ್ರೀ ಮುರಳೀಧರ್ ಭಟ್, ಶ್ರೀಮತಿ ವಿಜಯಾ ದಿನೇಶ್, ಶ್ರೀಮತಿ ಭಾರತಿ ಸುಬ್ರಹ್ಮಣ್ಯ, ಶ್ರೀಮತಿ ನಿರ್ಮಲ ಎಮ್ ಭಟ್, ಹರಿಣಿ ಕೃಷ್ಣ ಮೂರ್ತಿ, ಭಾರತಿ ಪ್ರಸಾದ್, ವಿದ್ಯಾ ಶ್ರೀಪತಿ ಬಾಯರಿ, ಶ್ರೀ ಶುಭಕರ, ಕಿರಣ್ ರಾವ್, ಚಂದನ್ ಹಾಗೂ ವನಮಹೋತ್ಸವ ಕಾರ್ಯಕ್ರಮದ ಸಂಚಾಲಕರಾದ ಶ್ರೀ ಸುಧರ್ಶನ್ ರಾವ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply