​ಸೂರಿಲ್ಲದ ಕುಟುಂಬಕ್ಕೆ ಸೂರು~ ಜಮಾಅತೆ ಇಸ್ಲಾಮಿ ಹಿಂದ್ ಹೂಡೆಯ ಕೊಡುಗೆ ​

ಹೂಡೆ: ದಾನಿಗಳ ಸಹಾಯದಿಂದ ಸೂರಿಲ್ಲದ ಕುಟುಂಬಕ್ಕೆ ಸೂರು ಒದಗಿಸುವ ಕಾರ್ಯಕ್ರಮದಡಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ವತಿಯಿಂದ ಇಂದು ಅರ್ಥಿಕವಾಗಿ ಹಿಂದುಳಿದ ಜಫ್ರು ಸಾಹೇಬ್ ಎಂಬುವವರಿಗೆ ಮನೆ ಹಸ್ತಾಂತರಿಸಲಾಯಿತು.

ಜಮಾಅತೆ ಇಸ್ಲಾಮಿ ಹಿಂದ್’ನ ಜಿಲ್ಲಾ ಸಂಚಾಲಕರಾದ ಶಬ್ಬೀರ್ ಮಲ್ಪೆಯವರು ಸಾಂಕೇತಿಕವಾಗಿ ಮನೆ ಮಾಲಿಕ ಜಫ್ರು ಸಾಹೇಬ್ ಅವರಿಗೆ ಮನೆ ಕೀಲಿಗೈ ನೀಡಿ ಹಸ್ತಾಂತರಿಸಿದರು.

ಸಂಘಟನೆಯ ವತಿಯಿಂದ ಜಾತಿ ಮತ ಧರ್ಮದ ಭೇದವಿಲ್ಲದೆ ಹಸ್ತಾಂತರಿಸಲ್ಪಡುತ್ತಿರುವ 26 ನೇ ಮನೆಯಿದಾಗಿದ್ದು ದಾನಿಗಳ ಸಹಾಯದೊಂದಿಗೆ ಈ ಕಾರ್ಯವನ್ನು ನೆರವೇರಿಸಲಾಗುತ್ತಿದೆ. ಅದರೊಂದಿಗೆ ಸಂಘಟನೆಯು ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.

ಪ್ರಮುಖವಾಗಿ ತನ್ನ ಅಂಗ ಸಂಸ್ಥೆ ಎಚ್.ಆರ್.ಎಸ್ ಮುಖಾಂತರ ಕೋವಿಡ್ ಸಂದರ್ಭದಲ್ಲಿ ಜನ ಸೇವೆಯಲ್ಲಿ ತೊಡಗಿಸಿಕೊಂಡು ಸಾವಿರಾರು ಮಂದಿಗೆ ರೇಷನ್ ಕಿಟ್, ಆಕ್ಸಿಜನ್ ವ್ಯವಸ್ಥೆ, ಇನ್ನಿತರ ಸಹಾಯ ಮಾಡಿರುವುದರ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದ ಇದ್ರಿಸ್ ಹೂಡೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಶಬ್ಬೀರ್ ಮಲ್ಪೆ ಮಾತನಾಡಿ ಶುಭ ಹಾರೈಸಿದರು. ಜಮಾಅತೆ ಇಸ್ಲಾಮಿ ಹಿಂದ್ ಹೂಡೆಯ ಅಧ್ಯಕ್ಷರಾದ ಅಬ್ದುಲ್ ಕಾದೀರ್ ಮೊಯ್ದಿನ್ ಮಾತನಾಡಿದರು.

ಈ ಸಂದರ್ಭದಲ್ಲಿ ಮಹೇಶ್ ಹೂಡೆ, ಎಚ್.ಆರ್.ಎಸ್ ಹೂಡೆಯ ಹೊಣೆಗಾರರಾದ ಝೈನುಲ್ಲಾ,ವೆಲ್ಫೇರ್ ಪಾರ್ಟಿಯ ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ ರಝಾಕ್ ನಕ್ವಾ, ಮೌಲನ ತಾರೀಖ್, ಎಸ್.ಐ.ಓನ ಅಫ್ವಾನ್ ಹೂಡೆ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply