ಸಂವಿಧಾನದ ಆಶಯವನ್ನು ಅರಿತು ಬಾಳೋಣ: ಪ್ರವೀಣ್ ಗಂಗೊಳ್ಳಿ

 ಜಗತ್ತಿನಲ್ಲಿಯೇ ಅತಿ ಶ್ರೇಷ್ಠವಾದ ಮತ್ತು ಬ್ರಹತ್ ಗಾತ್ರದ ಸಂವಿಧಾನವನ್ನು ಹೊಂದಿರುವ ದೇಶ ನಮ್ಮದು. ಸಂವಿಧಾನ ರಚನಾ ಸಮಿತಿಯವರು ಬಲಿಷ್ಠ ಭಾರತದ ನಿರ್ಮಾಣದ ಕನಸ್ಸನ್ನು ಹೊತ್ತು 1949 ರ ನವೆಂಬರ್,26 ರಂದು‌ ಸಂವಿಧಾನವನ್ನು ‌ಶಾಸನಬದ್ದವಾಗಿ ದೇಶದ ಜನರ ಹೆಸರಿನಲ್ಲಿ ‌ಅರ್ಪಿಸಿದ್ದಾರೆ. ಆ ನಿಟ್ಟಿನಲ್ಲಿ ಸಂವಿಧಾನದ ಆಶಯಗಳನ್ನು ಅರಿತು ಬಾಳುವುದರೊಂದಿಗೆ ಬಲಿಷ್ಠ ಭಾರತದ ನಿರ್ಮಾಣ ನಮ್ಮ ಜವಾಬ್ದಾರಿಯಾಗಿದೆ ಎಂದು ಕುಂದಾಪುರದ ಡಾ|ಬಿ.ಬಿ.ಹೆಗ್ಡೆ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ‌ ಪ್ರವೀಣ್ ಮೊಗವೀರ ಗಂಗೊಳ್ಳಿ‌ ಹೇಳಿದರು.

ಅವರು ನ.29 ರಂದು ಸರಸ್ವತಿ ವಿದ್ಯಾಲಯ ಗಂಗೊಳ್ಳಿ ಇದರ ಗ್ರಂಥಾಲಯದ ಸಭಾಂಗಣದಲ್ಲಿ ರೋಟರಿ ಕ್ಲಬ್ ಗಂಗೊಳ್ಳಿ ಆಯೋಜಿಸಿದ ಸಂವಿಧಾನ ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು.

ರೋಟರಿ ಕ್ಲಬ್ ಗಂಗೊಳ್ಳಿ ಯ ಅಧ್ಯಕ್ಷರಾದ ಶ್ರೀಮತಿ ಸುಗುಣರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್ ಚೇರ್ಮನ್ ಕ್ರಷ್ಣ ಅತಿಥಿಗಳನ್ನು ಪರಿಚಯಿಸಿದರು
ಕಾರ್ಯದರ್ಶಿ ಶ್ರೀಮತಿ ಚಂದ್ರಕಲಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ರೋಟರಿ ಕ್ಲಬ್ ಗಂಗೊಳ್ಳಿ ಇದರ ಸದಸ್ಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply