ಶ್ರೀರಾಮಸೇನೆ ಮಂಗಳೂರು ವಿಭಾಗ ಗೌರವಧ್ಯಕ್ಷರಾಗಿ ಶ್ರೀ ಚಂದ್ರಕಾಂತ್ ಶೆಟ್ಟಿ ನೇಮಕ

 ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಪ್ರಮೋದ್ ಮುತಾಲಿಕ್ ರವರ ಸಿಪಾರಿಸಿನಂತೆ ಮುಂಬೈಯ ಖ್ಯಾತ ಉದ್ಯಮಿ ಚಂದ್ರಕಾತ್ ಶೆಟ್ಟಿ ಅವರನ್ನು ಶ್ರೀರಾಮಸೇನೆಯ ಮಂಗಳೂರು ವಿಭಾಗ ಗೌರವಾಧ್ಯಕ್ಷ ಹಾಗೂ ಮಹಾರಾಷ್ಟ್ರದ ಉಸ್ತುವಾರಿಯಾಗಿ ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

 ಮೂಲತಃ ಉಡುಪಿ ಜಿಲ್ಲೆಯ ಕಾಪುವಿನ ಪಾಂಗಳದ ಕೊಟ್ಟಾರಿ ಮನೆಯವರಾದ ಶ್ರೀ ಶೆಟ್ಟಿಯವರು ತನ್ನ 21ನೇ ವಯಸ್ಸಿನಲ್ಲಿ ಶಿವಸೇನೆ ಪಕ್ಷದಿಂದ ಮುಂಬೈಯ ಉಲ್ಲಾಸ ನಗರದ ಬಿರ್ಲ ಗೇಟ್ ನ ಕಾರ್ಪೊರೇಟರ್ ಆಗಿ ಸೇವೆ ಸಲ್ಲಿಸಿದ್ದರು. ಅತಿ ಕಿರಿಯ ವಯಸ್ಸಿನಲ್ಲಿ ಮುಂಬೈ ನಗರ ಶಿವಸೇನೆಯ ಪ್ರಮುಖ ಜವಾಬ್ದಾರಿಯಲ್ಲಿ ಇದ್ದುಕೊಂಡು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಶ್ರೀ ಚಂದ್ರಕಾಂತ್ ಶೆಟ್ಟಿ ಅವರು, ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಮುಂಬೈ ನಗರದಲ್ಲಿ ತನ್ನದೇ ಆದ ಆಸ್ಪತ್ರೆ ಹಾಗೂ ಹೋಟೆಲ್ ಉದ್ಯಮವನ್ನು ಹೊಂದಿರುತ್ತಾರೆ. ಪ್ರಸ್ತುತ ಮುಂಬೈಯ ಬಿರ್ಲಗೇಟ್ ಸಲಾಡ್ ನಲ್ಲಿರುವ ಶ್ರೀ ಮೂಕಾಂಬಿಕಾ ದೇವಸ್ಥಾನದ ಮೊಕ್ತೆಸರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಲಿಷ್ಠ ಹಿಂದೂ ಸಂಘಟನೆಯಾದ ಶ್ರೀರಾಮ ಸೇನೆಯ ಜವಾಬ್ದಾರಿಯನ್ನು ಉಭಯ ರಾಜ್ಯಗಳಲ್ಲಿ ವಹಿಸಿಕೊಂಡಿರುವುದು ಕರಾವಳಿ ಹಾಗೂ ಮುಂಬೈಯ ಹಿಂದೂ ಕಾರ್ಯಕರ್ತರಲ್ಲಿ ಅತೀವ ಸಂತೋಷವನ್ನು ಉಂಟುಮಾಡಿದೆ ಎಂದು ಉಡುಪಿ ಜಿಲ್ಲಾ ಶ್ರೀರಾಮಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply