ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಾರ್ಷಿಕ ಮಹಾಸಭೆ, ವಿದ್ಯಾರ್ಥಿ ವೇತನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ

ಕೋಟ: ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮದ ಇದರ ವಾರ್ಷಿಕ ಮಹಾಸಭೆ ಭಾನುವಾರ ಸಾಲಿಗ್ರಾಮದ ಶ್ರೀಗುರುನರಸಿಂಹ ದೇವಳದ ಜ್ಞಾನಮಂದಿರದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ ಅಧ್ಯಕ್ಷ ಎಂ. ಶಿವರಾಮ ಉಡುಪ ವಹಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ವೇ.ಮೂ. ಗುಂಡ್ಮಿ ವೆಂಕಟರಮಣ ನಾವಡ ಬ್ರಾಹ್ಮಣರಲ್ಲಿರುವ ಪೂರ್ವ ಷೋಡಶ ಸಂಸ್ಕಾರಗಳ ಮಹತ್ವದ ಕುರಿತು ಧಾರ್ಮಿಕ ಉಪನ್ಯಾಸ ನೀಡಿದರು.

2019-20ನೆ ಸಾಲಿನ ಉಡುಪಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಅರವಿಂದ ಹೆಬ್ಬಾರ್ ಬಾಳ್ಕುದ್ರು,ಏಷಿಯನ್ ಗಣಿತ ಒಲಿಂಪಿಯಾಡ್‌ನ ಭಾರತೀಯ ಸ್ಪರ್ಧಿಯಾಗಿ ಆಯ್ಕೆಯಾಗಿರುವ ಎಂ.ಎಸ್. ಶ್ರೇಯಸ್ ಅಡಿಗ ಮಣೂರು ಹಾಗೂ ಸುಗಂಧಿ ಚಲನಚಿತ್ರದ ಬಾಲನಟಿ ವೈಷ್ಣವಿ ಅಡಿಗ ಪಾಂಡೇಶ್ವರ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು
೨೦೨೧ನೇ ಸಾಲಿನಲ್ಲಿ ಪಿಯುಸಿ ವಿಭಾಗದಲ್ಲಿ ರಾಜ್ಯಕ್ಕೆ ೧೦ನೇ ರಾಂಕ್ ಪಡೆದ ವೈಭವಿ ಶಾಸ್ತಿç ಗುಂಡ್ಮಿ ಹಾಗೂ ವಲಯದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅಧಿಕ ಅಂಕ ಗಳಿಸಿದ ಅಕ್ಷಯ ಶಾಸ್ತಿç ಮತ್ತು ಶ್ರೀಪ್ರಿಯಾ ಅಡಿಗ ಇವರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ತಾಂತ್ರಿಕ ಶಿಕ್ಷಣ. ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಸಮಾಜದ 65ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸುಮಾರು 2ಲಕ್ಷ ರೂಪಾಯಿಗಿಂತಲೂ ಹೆಚ್ಚು ವಿದ್ಯಾರ್ಥಿವೇತನ ವಿತರಿಸಲಾಯಿತು.

ಮಹಾಸಭಾದ ಚಟುವಟಿಕೆಗಳಿಗೆ ರೂ.5000 ಹಾಗೂ ಹೆಚ್ಚು ಧನಸಹಾಯ ನೀಡಿದ ಸಮಾಜ ಭಾಂದವರನ್ನು ಗೌರವಿಸಲಾಯಿತು.

ಕಳೆದ ಒಂದು ವರ್ಷದಲ್ಲಿ ನಾನಾ ಕಾರಣಗಳಿಂದ ಅಗಲಿದ ಸಮಾಜ ಬಂಧುಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವಾರ್ಷಿಕ ಸಭೆಯ ಪ್ರಯುಕ್ತ ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕೋಶಾಧಿಕಾರಿ ಪಿ. ಸುಬ್ರಹ್ಮಣ್ಯ ಹೇರ್ಳೆ ಆಯವ್ಯಯ ಮಂಡಿಸಿದರು. ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ,ಮAದಾರ್ತಿ ವಲಯ ಬ್ರಾಹ್ಮಣ ಸಭಾದ ಪದಾಧಿಕಾರಿಗಳಾದ ವಿಶ್ವನಾಥ ಉಡುಪ ,ಸಾಲಿಗ್ರಾಮ ವಿಪ್ರ ಮಹಿಳಾ ಬಳಗದ ಉಪಾಧ್ಯಕ್ಷೆ ವನಿತಾ ಉಪಾಧ್ಯ ಉಪಸ್ಥಿತರಿದ್ದರು. ಮಹಾಸಭಾ ಉಪಾಧ್ಯಕ್ಷ ಪಟ್ಟಾಭಿರಾಮ ಸೋಮಯಾಜಿ ಸ್ವಾಗತಿಸಿದರು.

 
 
 
 
 
 
 
 
 
 
 

Leave a Reply