27 C
Udupi
Sunday, October 25, 2020

ಆಸರೆ ಚಾರಿಟೇಬಲ್ ಟ್ರಸ್ಟ್ ನ ಸಮಾಜಮುಖಿ ಕಾರ್ಯ ರಾಜ್ಯಕ್ಕೆ ಮಾದರಿ: ಜೈಶಂಕರ್

ಆಸರೆ ಚಾರಿಟೇಬಲ್ ಟ್ರಸ್ಟ್ ನ ಸಮಾಜಮುಖಿ ಕಾರ್ಯ ರಾಜ್ಯಕ್ಕೆ ಮಾದರಿ ಎಂದು ಉಡುಪಿ ಜಿಲ್ಲಾ ಪೊಲೀಸ್ ಉಪಾಧೀಕ್ಷಕ  ಜೈಶಂಕರ್ ಹೇಳಿದರು. ಅವರು ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ(ರಿ )ಮತ್ತು ಆಸರೆ ಚಾರಿಟೇಬಲ್ ಟ್ರಸ್ಟ್ (ರಿ) ಸಹಯೋಗದೊಂದಿಗೆ ಅವಕಾಶ ವಂಚಿತ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯದ ಚೆಕ್ ಹಸ್ತಾಂತರಿಸಿ ಕೋವಿಡ್ ನ ಲಾಕ್ ಡೌನ್ ಸಂದರ್ಭದಲ್ಲಿ ಲಕ್ಷಾಂತರ ಅಪೇಕ್ಷಿತ ವರ್ಗದವರಿಗೆ ಊಟ, ಕಿಟ್, ಮಾಸ್ಕ ವಿತರಣೆ,  ಈ ರೀತಿ ಸಾಮಾಜಿಕ ಚಟುವಟಿಕೆಗಳು ಉಡುಪಿ ಜಿಲ್ಲೆಯ ಕೋವಿಡ್ ಎದುರಿ ಸುವಲ್ಲಿ ಬಹಳಷ್ಟು ಸಹಕಾರಿಯಾಗಿತ್ತು ಎಂದರು. 
ಇಂದು ಶೈಕ್ಷಣಿಕ ಧನಸಹಾಯ ಪಡೆದ ವಿದ್ಯಾರ್ಥಿಗಳು ಮುಂದೆ ವಿದ್ಯಾವಂತರಾಗಿ ತಾವು ಕೂಡ ಮುಂದೆ ಸಮಾಜದ ದೀನದಲಿತರಿಗೆ, ಬಡಮಕ್ಕಳಿಗೆ ಸಹಕಾರ ನೀಡು ವಂತಾಗಲಿ ಎಂದು ಆಶಿಸಿದರು. ಈ ಕಾರ್ಯ ಕ್ರಮದಲ್ಲಿ ಉಡುಪಿಯ ಏಕೈಕ ಗೋಲಿಸೋಡ ತಯಾರಕ ಶೀನ ನಾಯ್ಕ ಇವರಿಗೆ ಗೌರವಧನ ನೀಡಿ ಸನ್ಮಾನ ಮಾಡಲಾಯಿತು.
ಸಮಾರಂಭದಲ್ಲಿ ಇತ್ತೀಚಿಗೆ ನೆರೆ ಸಂದರ್ಭದಲ್ಲಿ ಮನೆ ಕಳಕೊಂಡ ಸ್ವಾತಿ ಇವರಿಗೆ ಟ್ರಸ್ಟ್ ವತಿಯಿಂದ ನೀಡಲಾದ ಧನ ಸಹಾಯವನ್ನುದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲಾ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶಪಾಲ ಸುವರ್ಣ ಹಸ್ತಾಂತರಿಸಿದರು. ನಗರಸಭಾ ಸದಸ್ಯರಾದ ಗೀತಾ ದೇವರಾಯ ಶೇಟ್, ರಜನಿ ಹೆಬ್ಬಾರ್ ಉಪಸ್ಥಿತರಿದ್ದರು.
ಆಸರೆ ಚಾರಿಟೇಬಲ್ ಟ್ರಸ್ಟ್ ನ ಪ್. ವಸಂತ ಭಟ್ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿನ ಕೋಶಧಿಕಾರಿ ಸತೀಶ್ ಕುಲಾಲ್ ಸ್ವಾಗತಿಸಿ, ಟ್ರಸ್ಟಿ ಎಂ ವಲ್ಲಭ ಭಟ್ ಧನ್ಯವಾದವಿತ್ತು,  ಪ್ರಧಾನ ಕಾರ್ಯದರ್ಶಿ,ಕೆ. ರಾಘವೇಂದ್ರ ಕಿಣಿ ನಿರೂಪಿಸಿದರು. 
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ರಾಜ್ಯೋತ್ಸವ ಪ್ರಶಸ್ತಿಯ ಅಂತಿಮ ಪಟ್ಟಿ ಅ.27ರಂದು ಪ್ರಕಟ

ಬೆಂಗಳೂರು: ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಸಾಧಕರಿಗೆ ನೀಡುವ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನವೆಂಬರ್ 1ರಂದು ನಡೆಸಲು ಸರ್ಕಾರ ತೀರ್ಮಾನಿಸಿದ್ದು, ಆಯ್ಕೆ ಪಟ್ಟಿ ಮಂಗಳವಾರ ಪ್ರಕಟವಾಗುವ ಸಾಧ್ಯತೆಗಳಿವೆ. ಒಟ್ಟುಈ ವರ್ಷ 65 ಜನರಿಗೆ ಪ್ರಶಸ್ತಿ...

ರಕ್ಷಿತಾ ನಾಯಕ್ ನಿಗೂಢ ಸಾವು,  ಪ್ರಶಾಂತ್  ಪತ್ತೆಗಾಗಿ  ಪೊಲೀಸರು ಶೋಧ

ಉಡುಪಿ: ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿಯನ್ನು ಆಸ್ಪತ್ರೆಗೆ ಸೇರಿಸಿ,  ಪರಿಚಯವಿದ್ದ  ಯುವತಿ ಅಸ್ವಸ್ಥಳಾದ ಕೂಡಲೇ ಯುವಕ ಕೈ ಕೊಟ್ಟ ಘಟನೆ ಉಡುಪಿಯಲ್ಲಿ ನಡೆದಿದೆ. ಯುವಕ ನಾಪತ್ತೆ ಯಾಗಿದ್ದಾನೆ. ದಾಖಲಾದ ಕೆಲವೇ ಹೊತ್ತಿನಲ್ಲಿ ಯುವತಿ  ರಕ್ಷಿತಾ...

ಎಸ್.ಎಲ್.ವಿ.ಟಿ ಯಲ್ಲಿ ವಿಶೇಷ ದೀಪಾರಾಧನೆ ಸೇವೆ   

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಶ್ರೀ ಶಾರದಾ ಮಾತೆ ಸನ್ನಿದಿಯಲ್ಲಿ ಶನಿವಾರ ರಾತ್ರಿ ವಿಸರ್ಜನಾ ಪೂಜಾ ವೇಳೆ  ಸಾವಿರಾರು ಹಣತೆ ದೀಪಗಳ ನ್ನು  ಬೆಳಗಿಸಿ ವಿಶೇಷ ದೀಪಾರಾಧನೆ ಸೇವೆಯನ್ನು ನೆರವೇರಿಸಲಾಯಿತು. ದೇವಳದ...

ಉಡುಪಿ ಸಾರ್ವಜನಿಕ ಶಾರದಾ ಸಮಿತಿಯ ಶಾರದಾ ದೇವಿಯ ಶೋಭಾಯಾತ್ರೆ  

ಉಡುಪಿ ಸಾರ್ವಜನಿಕ ಶಾರದಾ ಸಮಿತಿ ಹಮ್ಮಿಕೊಂಡ 5 ನೇ ವರ್ಷದ ಶಾರದಾ ದೇವಿಯ ಶೋಭಾಯಾತ್ರೆಗೆ ಅರ್ಚಕರಾದ  ಶಶಿಧರ್ ಭಟ್   ಶಾರದಾ ದೇವಿಗೆ ಆರತಿ  ಬೆಳಗಿಸಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ಯಾತ್ರೆಯಲ್ಲಿ  ಮಹಿಳಾ  ಚಂಡೆ...

ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಚಂಡಿಕಾಯಾಗ ಸಂಪನ್ನ

ಇತಿಹಾಸ ಪ್ರಸಿದ್ಧ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ  ಗೋವರ್ಧನ ತಂತ್ರಿಗಳ ತಂತ್ರಿತ್ವದಲ್ಲಿ ಹಾಗೂ ಪ್ರಕಾಶಾಚಾರ್ಯರ ಮಾರ್ಗದರ್ಶನದಲ್ಲಿ  ಪ್ರವೀಣ ಐತಾಳರ ಆಚಾರ್ಯತ್ವದಲ್ಲಿ ಲೋಕ ಕಲ್ಯಾಣಕ್ಕಾಗಿ ಸಮಸ್ತ ಭಕ್ತರ ಸಹಭಾಗಿತ್ವದಲ್ಲಿ ಶ್ರೀ ಚಂಡಿಕಾಯಾಗವು ಸಂಪನ್ನಗೊಂಡಿತು....
error: Content is protected !!