ಆಸರೆ ಚಾರಿಟೇಬಲ್ ಟ್ರಸ್ಟ್( ರಿ) ಕಡಿಯಾಳಿ 101ನೇ ಮನೆ ಉಚಿತ ವಿದ್ಯುತ್ ಸಂಪರ್ಕ

ಉಡುಪಿ: ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸೇವಾ ಪ್ರಕಲ್ಪ ವಾದ ಆಸರೆ ಚಾರಿಟೇಬಲ್ ಟ್ರಸ್ಟ್( ರಿ) ಕಡಿಯಾಳಿ ಇವರ ವತಿಯಿಂದ 101 ನೇ ಬಡವರ ಮನೆಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟಿನ ಪ್ರಧಾನಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ 2022 ರೊಳಗೆ ಇಡೀ ಉಡುಪಿ ನಗರದ ಎಲ್ಲಾ ಬಡವರ ಮನೆಗೆ ಉಚಿತ ವಿದ್ಯುತ್ ನೀಡುವುದರ ಮುಖೇನ 100 ಶೇಕಡ ವಿದ್ಯುತ್ ಹೊಂದಿದ ದೇಶದ ಮೊತ್ತಮೊದಲ ನಗರವನ್ನಾಗಿಸುವ ಪ್ರಯತ್ನ ಯಶಸ್ಸಿನತ್ತ ಸಾಗುತ್ತಿದೆ ಎಂದರು. ಅಲ್ಲದೆ ವಿದ್ಯುತ್ ಸಂಪರ್ಕವಿಲ್ಲದ ಉಡುಪಿ ನಗರದ ಮನೆ ಗಳಿದ್ದಲ್ಲಿ ಕೂಡಲೇ ಸಾರ್ವಜನಿಕರು ಸಂಪರ್ಕಿಸಿ ಸಹಕರಿಸುವಂತೆ ವಿನಂತಿಸಿದರು.

ಈ ಸಂದರ್ಭದಲ್ಲಿ ಗೋಪಾಲಪುರ ವಾರ್ಡಿನ ಶ್ರೀಮತಿ ಗಿರಿಜಾ ಆಚಾರ್ತಿ ಮನೆಗೆ ಉಚಿತ ವಿದ್ಯುತ್ ಸಂಪರ್ಕ ನೀಡಿದ ದಾನಿಗಳಾದ ಎನ್. ವಿಶ್ವನಾಥ ಕಾಮತ್ ರವರು ಸ್ವಿಚ್ ಆನ್ ಮಾಡಿ ಉದ್ಘಾಟಿಸಿದರು. ಆಸರೆ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾದ ಪ. ವಸಂತ ಭಟ್ ಅಧ್ಯಕ್ಷತೆ ವಹಿಸಿದ್ದರು. ಗಣೇಶೋತ್ಸವ ಸಮಿತಿ ಸದಸ್ಯರಾದ ರಾಕೇಶ್ ಜೋಗಿ ,ನಗರಸಭಾ ಸದಸ್ಯರಾದ ಶ್ರೀಮತಿ ಮಂಜುಳ ನಾಯಕ್, ಮಡಿಮಲ್ಲಿಕಾರ್ಜುನ ದೇವಸ್ಥಾನದ ಅಧ್ಯಕ್ಷರಾದ ಗಣೇಶ್ ಕೋಟ್ಯಾನ್, ಕರಾವಳಿ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾದ ಉಮೇಶ್ ಶೆಟ್ಟಿ, ಚಿನ್ಮಯ ಮೂರ್ತಿ,ಯಾದವ ನಯಂಪಳ್ಳಿ, ದಿನಕರ್ ನಯಂಪಳ್ಳಿ, ಅಮಿತ್ ಪೂಜಾರಿ, ಉದಯ ನಯಂಪಳ್ಳಿ, ಪ್ರತಾಪ್ ಪೂಜಾರಿ ನವೀನ ನಾಯಕ, ಶಾಮರಾಯ ಆಚಾರ್ಯ, ಪ್ರಕಾಶ್ ಆಚಾರ್ಯ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply