ಸಂಸ್ಕೃತಿ ವಿಶ್ವ ಪ್ರತಿಷ್ಠಾನ ವತಿಯಿಂದ ಆರ್ಥಿಕ ನೆರವು 

ಸಂಸ್ಕೃತಿ ವಿಶ್ವ ಪ್ರತಿಷ್ಠಾನ ( ರಿ) ಉಡುಪಿ ವತಿಯಿಂದ ಆರ್ಥಿಕ ನೆರವು 

ಸಂಸ್ಕೃತಿ ವಿಶ್ವ ಪ್ರತಿಷ್ಠಾನ ( ರಿ) ಉಡುಪಿ ಇದರ ವತಿಯಿಂದ ಉಡುಪಿಯ ರಾಮ ಭವನ ಹೋಟೆಲಿನ ಸಂಕೀರ್ಣದಲ್ಲಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರ ಚಿಕಿತ್ಸೆಗಾಗಿ ಹತ್ತು ಸಾವಿರ ರೂಪಾಯಿ ಮೊತ್ತದ ಆರ್ಥಿಕ ನೆರವನ್ನು ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ ಯವರು ಕಿರಣ ಯು. ಕೆ ಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಶಂಕರ್, ಖಜಾಂಜಿ ರಾಜೇಶ್ ಭಟ್ ಪಣಿಯಾಡಿ , ಪ್ರತಿಷ್ಠಾನದ ಸದಸ್ಯರಾದ ಸುಮಿತ್ರಾ ಕೆರೆಮಠ, ಪದ್ಮಾಸಿನಿ ಉದ್ಯಾವರ, ಗಜಾನನ ಹೆಗಡೆ, ಭಾವನಾ ಕೆರೆಮಠ ಹಾಗು ಸಂಚಾಲಕರಾದ ರವಿರಾಜ್ ಎಚ್.ಪಿ ಉಪಸ್ಥಿತರಿದ್ದರು.

 

 
 
 
 
 
 
 

Leave a Reply