ನಾಳಿನ ಹುಣ್ಣಿಮೆಯ ವಿಶೇಷ – ಡಾ ಎ ಪಿ ಭಟ್, ಉಡುಪಿ

ನಾಳೆ ಹುಣ್ಣಿಮೆ,ಅದೇ ದಿನ ಚಂದ್ರ ಭೂಮಿಗೆ,(ಪೆರಿಜಿಗೆ) ಪುರ ಭೂ ಗೆ ಬರುವುದರಿಂದ ಸೂಪರ್ ಮೂನ್.ಅದೇ ದಿನ ಪೂರ್ವ ಕರಾವಳಿಗೆ “ಯಾಸ್ “ಚಂಡ ಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. 

ಅಷ್ಟೂ ಅಲ್ಲದೇ,ಅದೇ ದಿನ, ನಮ್ಮ ಭಾರತದ ಹೆಚ್ಚಿನ ಭಾಗಗಳಿಗೆ ಗೋಚರ ವಾಗದೇ ಇರುವ ಚಂದ್ರ ಗ್ರಹಣವೂ ಸಂಭವಿಸಲಿದೆ.ಇವುಗಳೆಲ್ಲದರ ಪರಿಣಾಮವಾಗಿ ನಮ್ಮ ಪಶ್ಚಿಮ ಕರಾವಳಿಯಲ್ಲಿ ಸಮುದ್ರದ ತೆರೆಗಳ (ಭರತ ಇಳಿತಗಳ) ಅಬ್ಬರ ಜೋರಿರಬಹುದು .

ಪ್ರತೀ ಹುಣ್ಣಿಮೆ ಹಾಗೂ ಅಮಾವಾಸ್ಯೆಗಳಲ್ಲಿ ಸೂರ್ಯ, ಚಂದ್ರ, ಭೂಮಿ ಇವುಗಳು , ಸರಿ ಸುಮಾರು ನೇರವಿರುವುದರಿಂದ ಸಮುದ್ರದ ನೀರಿನ ಮೇಲೆ ಮಾಮೂಲಿಗಿಂತ ಹೆಚ್ಚಿನ ಗುರುತ್ವ ಬಲವುಂಟಾಗಿ ಭರತ ಇಳಿತಗಳು ಜೋರಾಗಿರುತ್ತವೆ. 26 ರಂದು ಹುಣ್ಣಿಮೆ. ಮಾಮೂಲಿ ಹುಣ್ಣಿಮೆ ಗಳಿಗಿಂತ ಗ್ರಹಣದ ಹುಣ್ಣಿಮೆ ದಿನ ಭೂಮಿ,ಚಂದ್ರ ಹಾಗೂ ಸೂರ್ಯ, ಮೂರು ನೇರವೇ ಇರುವುದರಿಂದ , ಭರತ ಇಳಿತಗಳ ವ್ಯತ್ಯಾಸ ಸ್ವಲ್ಪ ಹೆಚ್ಚೇ ಇರುತ್ತದೆ.

ಇನ್ನು ಆ ದಿನ ಸೂಪರ್ ಮೂನ್ :

ಈಸೂಪರ್ ಮೂನ್, ಈ ವರ್ಷದ ಅತೀ ಸಮೀಪದ ಸೂಪರ್ ಮೂನ್. ಈ ದಿನ ಚಂದ್ರ ,ಭೂಮಿಗೆ ಸುಮಾರು 3 ಲಕ್ಷದ 57 ಸಾವಿರದ 462 ಕೀಮೀಯ ಪೆರಿಜಿಗೆ ಬರಲಿದೆ. ( ಸರಾಸರಿ ದೂರ 3, 84, 000 ಕೀಮಿ.)ಇವುಗಳೆಲ್ಲದರ ಜೊತೆಗೆ ಆ ಕಡೆ ಪೂರ್ವ ಕರಾವಳಿಯಲ್ಲಿ ಪ್ರಬಲ ಯಾಸ್ ಚಂಡ ಮಾರುತವೂ ಅದೇ ದಿನ ಕಾಣಿಸಿಕೊಳ್ಳುತ್ತಿದೆ.ಸೂಪರ್ ಮೂನ್, ಗ್ರಹಣ, ಯಾಸ್ ಚಂಡಮಾರುತ ಹೀಗೆ, ಇವೆಲ್ಲದರ ಒಟ್ಟು ಪರಿಣಾಮದಿಂದಾಗಿ ನಮ್ಮ ಪಶ್ಚಿಮ ಕರಾವಳಿಯಲ್ಲಿ ಸಮುದ್ರದ ತೆರೆಗಳು ಹಾಗೂ ಭರತ ಇಳಿತಗಳು ಹೆಚ್ಚಿರಬಹುದು.

ಇದು ಆ ದಿನವೇ ಇರಬಹುದು, ಅಥವಾ ಆಸುಪಾಸಿನ ದಿನಗಳಲ್ಲೂ ಸಂಭವಿಸಬಹುದು.ನಮ್ಮ ಪಶ್ಚಿಮ ಸಮುದ್ರ ತೀರದಲ್ಲೂ ಎಚ್ಚರಿಕೆ ಅಗತ್ಯ.ಹಾಗೆ ಈ ದಿನ ಸೂಪರ್ ಮೂನ್ ನ ಹುಣ್ಣಿಮೆಯ ಚಂದ್ರ ನೋಡಲು ಬಲು ಚೆಂದ. 

 

 
 
 
 
 
 
 
 
 
 
 

Leave a Reply