ಶ್ರೀರಾಮ : ಕುಶಲ ಸಂಘಟನೆಯ ಆದರ್ಶ !

ಈ ಭೂಮಿಯಲ್ಲಿ ಪ್ರಭು ಶ್ರೀರಾಮನಂತೆ ಯತಾರ್ಥ ಆದರ್ಶ ಎಂದರೆ ಸ್ವತಃ ಅವರೊಬ್ಬರೇ ! ಶ್ರೀರಾಮನು ಆದರ್ಶ ಪುತ್ರ, ಆದರ್ಶ ಸಹೋದರ, ಆದರ್ಶ ಸ್ನೇಹಿತ, ಆದರ್ಶ ರಾಜ ಮುಂತಾದ ಅನೇಕ ಆದರ್ಶಗಳನ್ನು ನಮ್ಮ ಮುಂದಿಟ್ಟಿದ್ದಾರೆ; ಆದರೆ ಅದರೊಂದಿಗೆ ಶ್ರೀ ರಾಮನ ಕುಶಲ ಸಂಘಟನಾ ಕಾರ್ಯವೂ ಅಷ್ಟೇ ಮಹತ್ವಪೂರ್ಣವಾಗಿದೆ.
ಅನಿರೀಕ್ಷಿತವಾಗಿ ಬಂದ ವನವಾಸದ ಕಾಲದಲ್ಲಿ ಕಠಿಣ ಪ್ರಸಂಗಗಳಲ್ಲಿಯೂ ಅಯೋಧ್ಯೆಯ ಯಾವುದೇ ಸಹಾಯವಿಲ್ಲದೆ ಸ್ವತಹ ವನದಲ್ಲಿ ವಾಸಿಸಿ ಇತರ ವೀರರ ಸಂಘಟನೆ ಮಾಡಿ, ಅಸುರರ ಸಂಹಾರ ಮಾಡಿ ಆ ಸಮಸ್ಯೆಗಳಿಗೆ ಪರಿಹಾರ ನೀಡಿದರು. ವನವಾಸಕ್ಕೆ ಹೋಗುವಾಗ ಶ್ರೀರಾಮ, ಸೀತಾಮಾತೆ ಮತ್ತು ಲಕ್ಷ್ಮಣ ಕೇವಲ ಈ ಮೂರೇ ಜನರಿದ್ದರು; ಆದರೆ ರಾವಣನನ್ನು ವಧಿಸಿ ಅಯೋಧ್ಯೆಗೆ ಹಿಂತಿರುಗುವಾಗ ಅವರ ಜೊತೆಗೆ ಲಂಕಾವಿಜಯದಲ್ಲಿ ಸಹಾಯ ಮಾಡಿದ್ದ ಸೇನೆಯ ಜೊತೆಗೆ ಬಂದಿದ್ದರು. ಆದ್ದರಿಂದ ಹಿಂದೂ ಸಮಾಜವು ಪ್ರಭು ಶ್ರೀರಾಮನ ಈ ಸಂಘಟನಾ ಕಾರ್ಯದ ಅಧ್ಯಯನ ಮಾಡಿ ಅದನ್ನು ಆಚರಣೆಯಲ್ಲಿ ತರುವುದು ಆವಶ್ಯಕವಾಗಿದೆ.
500 ವರ್ಷಗಳ ಪ್ರತೀಕ್ಷೆಯ ನಂತರ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಮಂದಿರ ನಿರ್ಮಾಣವಾಗುತ್ತಿದೆ. ಇಂತಹ ಸುವರ್ಣ ಕ್ಷಣದ ಸಮಯದಲ್ಲಿ ಹಿಂದೂಗಳು ಶ್ರೀರಾಮನ ಸಂಘಟನಾ ಕಾರ್ಯದ ಆದರ್ಶ ಇಟ್ಟುಕೊಂಡರೆ, ಸಂಪೂರ್ಣ ಭಾರತದ ಇತರ ಆಕ್ರಮಿತ ಮಂದಿರಗಳಲ್ಲಿ ಹಿಂದೂಗಳನ್ನು ಒಗ್ಗೂಡಿಸಲು ಸಮಯ ತಗಲುವುದಿಲ್ಲ.

ವನವಾಸದಲ್ಲಿ ಮಿತ್ರ ನಿಷಾದರಾಜನ ಸಹಾಯ ಮತ್ತು ಅವರ ಕುರಿತು ಕೃತಜ್ಞತಾ ಭಾವ :ಮಾತೆ ಕೈಕೇಯಿಯಿಂದ ಪಡೆದ ಎರಡು ವರಗಳ ಪ್ರಕಾರ ಶ್ರೀ ರಾಮನು ವನವಾಸಕ್ಕೆ ಹೋಗಲು ಸಿದ್ಧತೆ ಮಾಡಿದನು. ಮಹರ್ಷಿ ವಸಿಷ್ಠರ ಗುರುಕುಲದಲ್ಲಿರುವಾಗ ಶೃಂಗವೇರಪುರದ ಆದಿವಾಸಿ ನಿಷಾದರಾಜ ಗುಹನ ಜೊತೆಗೆ ಶ್ರೀರಾಮನ ಅತ್ಯಂತ ಆತ್ಮೀಯ ಸ್ನೇಹವಿತ್ತು. ಅಯೋಧ್ಯೆಯಿಂದ ಹೊರಗೆ ಬಂದ ನಂತರ ನಿಷಾದ ರಾಜನಿಗೆ  ಶ್ರೀರಾಮ ವನವಾಸಕ್ಕೆ ಹೋಗುವ ವಿಷಯ ತಿಳಿದ ಕೂಡಲೇ ಅವನು ಶ್ರೀರಾಮನಿಗೆ ತನ್ನ ರಾಜ್ಯ ಒಪ್ಪಿಸಿ ಅಲ್ಲೇ ಇರಲು ವಿನಂತಿಸಿದನು;

ಆದರೆ ಶ್ರೀ ರಾಮನು ವನವಾಸದ ಧರ್ಮ ಪಾಲನೆಯ ಕರ್ತವ್ಯ ಎಂದು ಹೇಳಿ ಯಾವುದೇ ನಗರದಲ್ಲಿ ಪ್ರವೇಶಿಸಲು ಸಾಧ್ಯವಿಲ್ಲ ಎಂದು ತನ್ನ ಅಸಹಾಯಕತೆ ಅರ್ಥೈಸಿದನು ಹಾಗೂ ಅವನ ರಾಜ್ಯವನ್ನು ಸ್ವೀಕರಿಸಲು ನಿರಾಕರಿಸಿದನು. ಆ ವನದಲ್ಲಿನ ವೃಕ್ಷದ ಕೆಳಗೆ ಎಲೆಗಳ ಹಾಸಿಗೆ ತಯಾರಿಸಿ ಶ್ರೀರಾಮನು ವನವಾಸದ ತನ್ನ ಮೊದಲ ರಾತ್ರಿ ಕಳೆದನು. ಜೊತೆಗೆ ಇದೇ ಸ್ಥಾನದಲ್ಲಿ ಪ್ರಭು ಶ್ರೀ ರಾಮನು ರಾಜವಂಶದ ವಸ್ತ್ರಗಳನ್ನು ತ್ಯಜಿಸಿ ವನವಾಸದ ವಸ್ತ್ರಗಳನ್ನು ಧರಿಸಿದನು. ನಿಷಾಧರಾಜನು ಮಾಂಝಿ ರಾಜವಂಶದ ಕೆವಟರಾಜನನ್ನು ಕರೆದು ಅವನ ದೋಣಿಯಿಂದ ಶ್ರೀರಾಮ ಸೀತಾ ಮತ್ತು ಲಕ್ಷ್ಮಣರನ್ನು ಗಂಗಾ ನದಿ ದಾಟಿಸಿದನು, ಜೊತೆಗೆ ಅವರ ವನವಾಸದಲ್ಲಿನ ವ್ಯವಸ್ಥೆ ಮಾಡಲು ಅವರ ಜೊತೆಗೆ ಹೋದನು.
ಶ್ರೀರಾಮನು ಅಲ್ಲಿಂದ ಪ್ರಯಾಗರಾಜದಲ್ಲಿರುವ ಭಾರದ್ವಾಜ ಮುನಿಯ ಆಶ್ರಮಕ್ಕೆ ಹೋಗಿ ಅವರಿಗೆ ವನವಾಸ ಕಾಲದಲ್ಲಿನ ನಿವಾಸದ ಬಗ್ಗೆ ಕೇಳಿದನು, ಆಗ ಭಾರದ್ವಾಜ ಮುನಿಗಳು ಯಮುನಾ ನದಿಯ ತೀರದಲ್ಲಿ ಇರುವ ಚಿತ್ರಕೂಟ ಪರ್ವತದಲ್ಲಿ ವನವಾಸ ಕಾಲ ಕಳೆಯಲು ಹೇಳಿದರು. ಅದರ ಪ್ರಕಾರ ನಿಷಾದರಾಜ ಈ ಆಜ್ಞೆಯನ್ನು ಪಾಲಿಸಿದನು. ವನವಾಸದಲ್ಲಿ ನಿಷಾದರಾಜನಿಂದ ದೊರೆತ ಸಹಾಯ ಶ್ರೀರಾಮ ಮರೆಯಲಿಲ್ಲ, ಲಂಕಾ ವಿಜಯ ಪಡೆದ ನಂತರ ಹಿಂತಿರುಗುವಾಗ ಪ್ರಭು ಶ್ರೀರಾಮನು ತನ್ನ ಪುಷ್ಪಕ ವಿಮಾನ ನಿಲ್ಲಿಸಿ ನಿಷಾದರಾಜನನ್ನು ತನ್ನ ರಾಜ್ಯಾಭಿಷೇಕ ಸಮಾರಂಭದಲ್ಲಿ ಸಹಭಾಗಿ ಆಗಲು ತಮ್ಮ ಜೊತೆಗೆ ಕರೆದುಕೊಂಡು ಹೋದರು.
ಅದರ ನಂತರವೂ ಅಶ್ವಮೇಧ ಯಜ್ಞದ ಸಮಯದಲ್ಲಿ ನಿಷಾಧರಾಜನಿಗೆ ಆಮಂತ್ರಣ ನೀಡಿ ಗೌರವದ ಸ್ಥಾನ ನೀಡಿದನು. ಇದರಿಂದ ತಮಗೆ ಸಹಾಯ ಮಾಡುವವರ ಕುರಿತು ಕೃತಜ್ಞತಾ ಭಾವ ಹೇಗಿರಬೇಕು, ಇದರ ಆದರ್ಶವನ್ನು ಪ್ರಭು ಶ್ರೀರಾಮ ತೋರಿಸಿದ್ದಾರೆ.

ಶ್ರೀರಾಮನ ವನವಾಸ ಸಮಯದಲ್ಲಿನ ಕಾರ್ಯ : ವನವಾಸದ ಸಮಯದಲ್ಲಿ ಶ್ರೀ ರಾಮನು ವಿಶ್ವಾಮಿತ್ರ, ಅತ್ರಿ, ಅಗಸ್ತ್ಯ ಮುಂತಾದ ಋಷಿಮುನಿಗಳ ಆಶ್ರಮಗಳನ್ನು ರಾಕ್ಷಸರ ಉಪಟಳದಿಂದ ಶಾಶ್ವತವಾಗಿ ಮುಕ್ತಗೊಳಿಸಿದನು. ಇದೇ ಸಮಯದಲ್ಲಿ ಶ್ರೀರಾಮ-ಲಕ್ಷ್ಮಣರು ಅನೇಕ ರಾಕ್ಷಸರನ್ನು ವಧಿಸಿ  ವನದಲ್ಲಿ ವಾಸಿಸುವ ಸಾಮಾನ್ಯ ಜನರನ್ನು ರಾಕ್ಷಸರ ಭಯದಿಂದ ಮುಕ್ತಗೊಳಿಸಿದರು. ಸುಮಾರು 12 ವರ್ಷದವರೆಗೆ ಪ್ರಭು ಶ್ರೀರಾಮ ವನವಾಸದಲ್ಲಿ ಈ ಕಾರ್ಯ ಮಾಡುತ್ತಿದ್ದರು.

ಇದೇ ಸಮಯದಲ್ಲಿ ಅತ್ಯಾಚಾರಿ ರಾಕ್ಷಸರನ್ನು ವಧಿಸಿದ ನಂತರ ಅವರು ವನವಾಸಿ ಜನಾಂಗದವರಿಗೆ ಬಿಲ್ವಿದ್ಯೆಯ ಪ್ರಶಿಕ್ಷಣ ನೀಡಿ ಶಸ್ತ್ರ ವಿದ್ಯೆ ಕಲಿಸಿದರು. ಆದಕಾರಣ ಇಂದು ಕೂಡ ಬಹಳಷ್ಟು ವನವಾಸಿ ಜನರು ಬಿಲ್ಲು ಬಾಣದ ಪ್ರಯೋಗ ಮಾಡುವುದು ಕಂಡು ಬರುತ್ತದೆ. ಶ್ರೀರಾಮನು ಅವರಿಗೆ ಧರ್ಮ ಪರಂಪರೆ ಕಲಿಸಿದನು, ಆದಕಾರಣ ನಮ್ಮಲ್ಲಿ  ವನಗಳಲ್ಲಿ ಕೂಡ ರಾಜ ಪರಂಪರೆ ಕಂಡು ಬರುತ್ತದೆ, ಜೊತೆಗೆ ಅವರ ರೀತಿ-ಪರಂಪರೆಗಳಲ್ಲಿ ಸಮಾನತೆ ಕಂಡು ಬರುತ್ತದೆ. ಇದರಿಂದಾಗಿ ಶ್ರೀರಾಮನಿಗೆ ರಾವಣನ ವಿರುದ್ಧದ ಯುದ್ಧದಲ್ಲಿ ವನವಾಸಿ ಸೇನೆಯ ಸಹಾಯ ಸುಲಭವಾಗಿ ದೊರೆಯಿತು.

ಸುಗ್ರೀವನಿಗೆ ಸಹಾಯ ಮಾಡುವುದು : ಕಿಷ್ಕಿಂಧಾನಗರದ ರಾಜ ವಾಲಿ ಬಹಳ ಪರಾಕ್ರಮಿ ಆಗಿದ್ದನು. ಹಾಗೂ ಒಂದು ವರದಾನದಿಂದ ಅವನ ವಿರುದ್ಧ ಹೋರಾಡುವ ಶತ್ರುವಿನ ಅರ್ಧಬಲ ಅವನಿಗೆ ದೊರೆಯುತ್ತಿತ್ತು. ಆದಕಾರಣ ಯಾವುದೇ ಯುದ್ಧದಲ್ಲಿ ಅವನು ಸುಲಭವಾಗಿ ಗೆಲುವು ಸಾಧಿಸುತ್ತಿದ್ದನು.  ಅವನು ದೇವತೆಗಳನ್ನು ಸೋಲಿಸಿದ ಮಹಾಪರಾಕ್ರಮಿ ರಾವಣನ ಕತ್ತನ್ನು ತನ್ನ ಕಂಕಳಲ್ಲಿ ಒತ್ತಿ ಸಂಪೂರ್ಣ ವಿಶ್ವದ ಪ್ರದಕ್ಷಿಣೆ ಮಾಡಿದ್ದನು.

ಆದ ಕಾರಣ ರಾವಣ ಅವನ ಎದುರು ಸೋಲೊಪ್ಪಿದ್ದನು. ಇದೇ ವಾಲಿಯು ಒಂದು ಪ್ರಸಂಗದಲ್ಲಿ ಘಟಿಸಿರುವ ತಪ್ಪು ಪರಿಕಲ್ಪನೆಯ ಕಾರಣ ತನ್ನ ಸಹೋದರ ಸುಗ್ರೀವನನ್ನು ರಾಜ್ಯದಿಂದ ಹೊರ ಅಟ್ಟಿದನು ಹಾಗೂ ಅವನ ಪತ್ನಿಯ ರೂಮಾಳನ್ನು ಬಲವಂತವಾಗಿ ತನ್ನ ಹತ್ತಿರ ಉಳಿಸಿಕೊಂಡನು. ಇದರಿಂದ ಸುಗ್ರೀವನು ಋಷ್ಯಮುಖ ಪರ್ವತದಲ್ಲಿ ಆಶ್ರಯ ಪಡೆದನು.
ಇಲ್ಲಿ ಯುದ್ಧ ನೀತಿಯಿಂದ ನೋಡಿದರೆ, ಯಾವ ರಾವಣನು ಸೀತೆಯನ್ನು ಅಪಹರಿಸಿದ್ದನೋ, ಅದೇ ರಾವಣನನ್ನು ವಾಲಿಯು ಸುಲಭವಾಗಿ ಸೋಲಿಸಿದ್ದನು; ಆದಕಾರಣ ಶ್ರೀರಾಮನು ವಾಲಿಯ ಸಹಾಯ ಪಡೆದಿದ್ದರೆ, ರಾವಣನು ಭಯಭೀತನಾಗಿ ಸೀತಾಮಾತೆಯನ್ನು ಸುಲಭವಾಗಿ ಹಿಂತಿರುಗಿಸುತ್ತಿದ್ದನು, ಆದರೆ ಇಂತಹ ಪರಿಸ್ಥಿತಿಯಲ್ಲಿಯೂ ಪ್ರಭು ಶ್ರೀರಾಮನು ದುರಾಚಾರಿ ವಾಲಿಯ ಸಹಾಯ ಪಡೆಯಲಿಲ್ಲ, ಅವನು ಸುಗ್ರೀವನ ಪತ್ನಿಯನ್ನು ಬಲವಂತವಾಗಿ ತನ್ನ ಹತ್ತಿರ ಇರಿಸಿದ್ದರಿಂದ ಅನ್ಯಾಯಕ್ಕೊಳಗಾದ ಸುಗ್ರೀವನಿಗೆ ಸಹಾಯ ಮಾಡಲು ನಿಶ್ಚಯಿಸಿದ.
ಪ್ರಭು ಶ್ರೀರಾಮನು ದುರಾಚಾರಿ  ವಾಲಿಯನ್ನು ವಧಿಸಿ ಸುಗ್ರೀವನಿಗೆ ರಾಜ್ಯಾಭಿಷೇಕ ಮಾಡಿದನು ಹಾಗೂ ಅವನಿಗೆ ಅವನ ಪತ್ನಿಯನ್ನು ಮತ್ತೆ ದೊರಕಿಸಿಕೊಟ್ಟನು; ಆದರೆ ಅದೇ ಸಮಯದಲ್ಲಿ ಕಿಷ್ಕಿಂದೆಯ ರಾಜಕುಮಾರ, ಪರಾಕ್ರಮಿ ವಾಲಿಯ ಪುತ್ರ ಅಂಗದನ ನೇಮಕ ಮಾಡಿ ಅವನನ್ನೂ  ತಮ್ಮ ಜೊತೆಗೆ ಜೋಡಿಸಿಕೊಂಡನು.

ಅಂಗದನ ಬುದ್ಧಿ ಕೌಶಲ್ಯದ ಉಪಯೋಗ ಪಡೆಯುವುದು : ರಾಜಕುಮಾರ ಅಂಗದನು ಸೀತಾಮಾತೆಯ ಹುಡುಕಾಟದಲ್ಲಿ ವಾನರಸೇನೆಯ ನೇತೃತ್ವ ವಹಿಸಿದ್ದನು. ಜಟಾಯುವಿನ ಸಹೋದರ ಸಂಪಾತಿ ಇಂದ ಸೀತಾಮಾತೆ ಲಂಕೆಯಲ್ಲಿ ಇರುವ ಮಾಹಿತಿ ಪಡೆದು ಅಂಗದ ಸಮುದ್ರ ದಾಟಲು ಸಿದ್ದನಾದನು; ಆದರೆ ಅದೇ ಸಮಯದಲ್ಲಿ ಅವರ ಸಮೂಹದ ನಾಯಕನಾಗಿರುವ ಜಾಂಬವಂತನು ಅವನಿಗೆ ಲಂಕೆಗೆ ಹೋಗಲು ಬಿಡಲಿಲ್ಲ ಆಗ, ಮಹಾಬಲಿ ಹನುಮಂತ ಲಂಕೆಗೆ ಹೋದನು. ಆ ಸಮಯದಲ್ಲಿ ಮಹಾಬಲಿ ಹನುಮಂತನನ್ನು ಲಂಕೆಗೆ ಕಳಿಸಿದ ಕಾರಣ, ಮಹಾಬಲಿ ಹನುಮಂತನು ಲಂಕೆಯಲ್ಲಿನ ಅಸುರರ ನಾಶ ಮಾಡಿ ಸೀತಾಮಾತೆಗೆ ಶ್ರೀರಾಮನ ಸಂದೇಶ ತಲುಪಿಸುವ ಕಾರ್ಯ ಮಾಡಿದನು.

ಜೊತೆಗೆ ಲಂಕಾದಹನ ಮಾಡಿ ಅಸುರ ಸೇನೆಯ ಮನಸ್ಸಿನಲ್ಲಿ ಆತಂಕ ನಿರ್ಮಾಣ ಮಾಡಿದನು. ಅದರಿಂದ ಅನೇಕ ಲಾಭಗಳು ಆದವು. ಭಗವಂತ ಶ್ರೀರಾಮ ಅಂಗದನ ಶೌರ್ಯ ಮತ್ತು ಬುದ್ಧಿಯ ಮೇಲೆ ವಿಶ್ವಾಸ ಇಟ್ಟಿದ್ದನು. ಆದಕಾರಣ ಅವನು ರಾಜಕುಮಾರ ಅಂಗದನನ್ನು ತನ್ನ ಧೂತನಾಗಿ ರಾವಣನ ಭೇಟಿಗೆ ಕಳುಹಿಸಿ ಹೇಳಿದನು, ರಾವಣನು ಸೀತಾಮಾತೆಯನ್ನು ಗೌರವದಿಂದ ಹಿಂತಿರುಗಿಸಿದರೆ, ಅವನು ರಾವಣನ ಜೊತೆಗೆ ಯುದ್ಧ ಮಾಡುವುದಿಲ್ಲ. ಆದರೆ ಅಲ್ಲಿ ಹೋದ ನಂತರ ರಾವಣನು ಭೇದ ನೀತಿಯನ್ನು ಉಪಯೋಗಿಸಿ ಅಂಗದನಿಗೆ ‘ವಾಲಿ ನನ್ನ ಸ್ನೇಹಿತನಾಗಿದ್ದನು, ಇದೇ ರಾಮನು ನಿನ್ನ ತಂದೆ ವಾಲಿಯನ್ನು ವಧಿಸಿದ್ದಾನೆ, ನೀನು ಅವನ ಸಂದೇಶ ವಾಹಕನಾಗಿ ಬಂದಿರುವೆ, ಇದು ನಿನಗೆ ನಾಚಿಗೇಡು’ ಎಂದನು. ಅದಕ್ಕೆ ಅಂಗದನು ರಾವಣನಿಗೆ ಕಠೋರ ಪದಗಳಲ್ಲಿ ಹೇ ಮೂರ್ಖ ರಾವಣ, ನಿನ್ನ ಈ ಶಬ್ದಗಳಿಂದ ಶ್ರೀರಾಮನ ಮೇಲೆ ಭಕ್ತಿ ಇಲ್ಲದವರ ಮನಸ್ಸಿನಲ್ಲೂ ಅಪನಂಬಿಕೆ ಉತ್ಪನ್ನವಾಗುತ್ತದೆ.
ವಾಲಿ ಮಾಡಿದ ಅನ್ಯಾಯದ ಫಲ ಅವನಿಗೆ ದೊರೆಯಿತು. ಕೆಲವು ಸಮಯದ ನಂತರ ನೀನು ಕೂಡ ಅಲ್ಲಿಗೆ ಹೋಗಿ ಯಮಲೋಕದಲ್ಲಿ ನಿನ್ನ ಸ್ನೇಹಿತನ ಕುಶಲೋಪರಿ ವಿಚಾರಿಸು ಎಂದು ಉತ್ತರಿಸುತ್ತಾನೆ. ಶ್ರೀರಾಮನ ದೂತನ ರೂಪದಲ್ಲಿ ಇರುವ ಮಹಾಬಲಿ ಅಂಗದನು ರಾವಣನಿಗೆ ತಿಳಿಸಿ ಹೇಳುವ ಪ್ರಯತ್ನ ಮಾಡಿದನು; ಆದರೆ ಅದು ಸಫಲವಾಗಲಿಲ್ಲ. ಅವನು ರಾವಣನ ಅಹಂಕಾರ ದೂರ ಮಾಡಲು ಅವನಿಗೆ ನೆನಪಿಸಿದನು, ಪಾತಾಳದಲ್ಲಿ ಬಲಿರಾಜನ ಮೇಲೆ ವಿಜಯ ಸಾಧಿಸಲು ಹೋಗಿದ್ದ ರಾವಣನನ್ನು ಅಲ್ಲಿ ಬಂಧಿಸಲಾಗಿತ್ತು, ಜೊತೆಗೆ ವಾಲಿ ಕೂಡ ರಾವಣನನ್ನು ತನ್ನ ಕಂಕಳದಲ್ಲಿ ಒತ್ತಿ ಹಿಡಿದಿದ್ದನು.
ಆದ್ದರಿಂದ ನಿನ್ನನ್ನು ಸೋಲಿಸುವುದು ಕಷ್ಟದ ಮಾತಲ್ಲ. ಈಗಂತೂ ಸಾಕ್ಷಾತ್ ಶ್ರೀ ವಿಷ್ಣುವಿನ ಅವತಾರ ಸ್ವಯಂ ರಾವಣನ ಜೊತೆಗೆ ಯುದ್ಧ ಮಾಡಲು ಸಮುದ್ರ ತೀರದಲ್ಲಿ ಕಾದು ಕುಳಿತಿದ್ದಾನೆ. ನಿನ್ನ ಅಹಂಕಾರವೇ ನಿನ್ನ ನಾಶ ಮಾಡುವುದು, ಜೊತೆಗೆ ರಾಜ್ಯಸಭೆಯಲ್ಲಿ ಕುಳಿತಿರುವ ಎಲ್ಲರ ನಾಶವೂ ಆಗುವುದು, ಮತ್ತು ಅವರ ಪತ್ನಿಯರು ಮಕ್ಕಳು ಅನಾಥರಾಗುವರು. ಆದ್ದರಿಂದ ಈಗಲಾದರೂ ರಾವಣನ ಪಕ್ಷ ಬಿಟ್ಟು ನೀವೆಲ್ಲರೂ ಶ್ರೀರಾಮನಿಗೆ ಶರಣಾಗಿ ಎನ್ನುತ್ತಾನೆ. ಇದನ್ನು ಕೇಳಿ ಕ್ರೋಧಿತನಾದ ರಾವಣನು ಅಂಗಧನ ಶಿರಚ್ಛೇದ ಮಾಡುವ ಆದೇಶ ನೀಡಿದನು. ಆಗ ಅಂಗದನು ಪ್ರಾಣವಿದ್ಯೆಯ ಉಪಯೋಗ ಮಾಡಿ ತನ್ನ ಕಾಲನ್ನು ರಾಜಸಭೆಯ ಭೂಮಿಯಲ್ಲಿ ಊರಿದನು ಮತ್ತು ರಾವಣನಿಗೆ ಸವಾಲು ಹಾಕಿದನು, ನಿನ್ನ ರಾಜ್ಯಸಭೆಯಲ್ಲಿ ಕುಳಿತಿರುವವರಲ್ಲಿ ಶೂರ ಮತ್ತು ಶಕ್ತಿಶಾಲಿ ಯೋಧನು ಈ ಭೂಮಿಯಿಂದ ನನ್ನ ಕಾಲನ್ನು ಅಲುಗಾಡಿಸಿದರೆ ನಾನು ನನ್ನ ಸೋಲನ್ನು ಸ್ವೀಕರಿಸುವೆ ಹಾಗೂ ಶ್ರೀರಾಮನು ಯುದ್ಧ ಮಾಡದೆ ಇಲ್ಲಿಂದ ಹಿಂತಿರುಗುವನು.
ಮೇಘನಾದ ಮತ್ತು ಕುಂಭಕರ್ಣ ಸಹಿತ ರಾವಣನ ಅನೇಕ ಮಹಾನ್ ಯೋಧರು ಈ ಸವಾಲನ್ನು ಸ್ವೀಕರಿಸಿದರು; ಆದರೆ ಅದರಲ್ಲಿ ಯಾರಿಗೂ ಅಂಗದನ ಕಾಲು ಅಲುಗಾಡಿಸಲು ಸಾಧ್ಯವಾಗಲಿಲ್ಲ. ಕೊನೆಗೆ ರಾವಣ ಸ್ವತಃ ಅಂಗದನ ಕಾಲು ಅಲುಗಾಡಿಸಲು ಬಂದನು. ಅವನು ಅಂಗದನ ಕಾಲು ಹಿಡಿದನು; ಆದರೆ ಅಂಗದನು ತನ್ನ ಕಾಲು ಬಿಡಿಸಿಕೊಂಡು ರಾವಣನಿಗೆ ಹೇಳಿದನು. ಹೇ ರಾವಣ, ಈಗ ನೀನು  ನನ್ನ ಕಾಲು ಹಿಡಿದಂತೆ ರಾಮನ ಕಾಲು ಹಿಡಿದಿದ್ದರೆ ಬಹಳ ಒಳ್ಳೆಯದಾಗುತ್ತಿತ್ತು. ಇದರಿಂದ ಅಂಗದನ ವಿದ್ವತ್ತು, ಶತ್ರುವಿನ ರಾಜ್ಯ ಸಭೆಗೆ ಹೋಗಿ ಅವರನ್ನು ಭಯಭೀತಗೊಳಿಸುವ ಅವನ ಕೌಶಲ್ಯ, ಜೊತೆಗೆ ಅವನ ಮನಸ್ಸಿನಲ್ಲಿ ಶ್ರೀರಾಮನ ಕುರಿತಾದ ಅಪಾರ ಭಕ್ತಿ ಭಾವ ತಿಳಿದು ಬರುತ್ತದೆ.
ಆದ್ದರಿಂದಲೇ ಶ್ರೀರಾಮನು ಅವನನ್ನು ತನ್ನ ಧೂತನೆಂದು ಆಯ್ಕೆ ಮಾಡಿದ್ದನು. ಈ ರೀತಿ ಶ್ರೀರಾಮನು ಸೀತಾಮಾತೆಯ ಹುಡುಕಾಟದಲ್ಲಿ ಮಹಾಬಲಿ ಹನುಮಂತ, ಜಾಂಬವಂತ, ನಲ-ನೀಲರ ಸಹಾಯ ಪಡೆದನು, ಹಾಗೂ ಅವರ ಗುಣಗಳ ಯೋಗ್ಯ ಉಪಯೋಗ ಮಾಡಿಕೊಂಡನು. ವಿಶ್ವಕರ್ಮರ ಮಕ್ಕಳಾದ ನಲ-ನೀಲರಿಗೆ ದೊರೆತಿದ್ದ ವರದಾನದಿಂದ ಅವರು ಲಂಕೆ ಪ್ರವೇಶ ಮಾಡಲು ಸಮುದ್ರದ ಮೇಲೆ ಸೇತುವೆ ಕಟ್ಟಲು ಶ್ರೀರಾಮನಿಗೆ ಸಹಾಯ ಮಾಡಿದರು.

ರಾವಣನ ಸಹೋದರ ವಿಭೀಷಣನಿಗೆ ಆಶ್ರಯ ನೀಡುವುದು ಮತ್ತು ಯುದ್ಧದಲ್ಲಿ ಅವನ ಸಹಾಯ ಪಡೆಯುವುದು :
ವಿಭೀಷಣ ರಾವಣನ ಎಲ್ಲಕ್ಕಿಂತ ಕಿರಿಯ ಸಹೋದರನಾಗಿದ್ದನು. ಅವನು ರಾಕ್ಷಸ ಕುಲದಲ್ಲಿ ಜನಿಸಿದ್ದರೂ ಶ್ರೀ ವಿಷ್ಣುವಿನ ಪರಮ ಭಕ್ತನಾಗಿದ್ದನು. ರಾಜ ಸಭೆಯಲ್ಲಿ ನಡೆದಿರುವ ಚರ್ಚೆಯಲ್ಲಿ ಅವನು ರಾವಣನಿಗೆ, ‘ಶ್ರೀರಾಮನಿಗೆ ಶರಣಾಗು, ಸೀತಾಮಾತೆಯನ್ನು ಶ್ರೀರಾಮನಿಗೆ ಒಪ್ಪಿಸುವುದು ನಿನಗೆ ಒಳಿತು’ ಎಂದಿದ್ದನು. ಆದಕಾರಣ ರಾವಣನು ವಿಭೀಷಣನ ಮೇಲೆ ಸಿಟ್ಟಾಗಿ ಅವನನ್ನು ರಾಜ್ಯದಿಂದ ಹೊರತಳ್ಳಿದನು. ಆಗ ವಿಭೀಷಣನು ಆಶ್ರಯಕ್ಕಾಗಿ ಶರಣಾಗಿ ಶ್ರೀರಾಮನ ಬಳಿ ಬಂದನು. ಶತ್ರುವಿನ ಸಹೋದರ ಶರಣಾಗಿದ್ದಾನೆ, ಆದರೆ ಅವನ ನಿಜವಾದ ಉದ್ದೇಶವನ್ನು ತಿಳಿಯುವುದು ಆವಶ್ಯಕವಾಗಿತ್ತು.

ಆಗ ಶ್ರೀ ರಾಮನು ಮೊದಲು ಹನುಮಂತನ ಅಭಿಪ್ರಾಯ ಕೇಳಿದನು. ಆಗ ಹನುಮಂತನ ಲಂಕೆಯಲ್ಲಿ ವಿಭೀಷಣನ ಜೊತೆಗೆ ಆಗಿದ್ದ ಭೇಟಿ ಹಾಗೂ ಶ್ರೀರಾಮನಿಗೆ ವಿಭೀಷಣನ ಭಗವದ್ಭಕ್ತಿಯ ಮಾಹಿತಿ ನೀಡಿ ಅವನಿಗೆ ಆಶ್ರಯ ನೀಡಲು ಹೇಳಿದನು; ಆದರೆ ಜಾಂಬವಂತ, ನಲ-ನೀಲ ಮುಂತಾದ ಮಂತ್ರಿಗಳ ಮನಸ್ಸಿನ ಸಂದೇಹ ಹಾಗೆಯೇ ಇತ್ತು, ಆದ್ದರಿಂದ ಶ್ರೀರಾಮನು ಅವರ ಸಂದೇಹ ದೂರಗೊಳಿಸುವ ನಿರ್ಣಯ ತೆಗೆದುಕೊಂಡನು. ಅದಕ್ಕಾಗಿ ಶ್ರೀ ರಾಮನು ಅವರಿಗೆ ಇತಿಹಾಸದ ಉದಾಹರಣೆಗಳನ್ನು ಹೇಳಿ ಶರಣಾಗಿರುವ ವ್ಯಕ್ತಿಗೆ ಸಹಾಯ ಮಾಡುವ ಕರ್ತವ್ಯ ತಿಳಿಸಿ ಹೇಳಿದನು.
ಶ್ರೀರಾಮನ ಈ ನಿರ್ಣಯದ ಕಾರಣ ವಿಭೀಷಣ, ಶತ್ರುಪಕ್ಷದ ಸಂಪೂರ್ಣ ಪ್ರದೇಶದ, ಶಸ್ತ್ರಾಸ್ತ್ರಗಳ, ಅಸುರರ ಸೇನೆಯ ಹಾಗೂ ಶಕ್ತಿಯ ರಹಸ್ಯ ತಿಳಿದಿರುವ ಸಹಾಯಕನಾದನು. ಆದಕಾರಣ ಯುದ್ಧದಲ್ಲಿ ಅವನು ಪ್ರಭು ರಾಮನಿಗೆ ಯೋಗ್ಯವಾದ ಸಹಾಯ ಮಾಡಿ ಅವನ ವಿಜಯದ ಮಾರ್ಗ ಸುಲಭಗೊಳಿಸಿದನು.
ರಾವಣ ವಧೆಯ ನಂತರ ಲಂಕೆ ರಾಜವಿಹೀನವಾಯಿತು. ಆಗ ಅಲ್ಲಿ ಯೋಗ್ಯವಾದ  ರಾಜನ ಆವಶ್ಯಕತೆ ಇತ್ತು . ಇದನ್ನು ತಿಳಿದು ಶ್ರೀರಾಮನು ಲಂಕೆಯ ಮುಂದಿನ ರಾಜನಾಗಿ ವಿಭೀಷಣನನ್ನು ಆಯ್ಕೆ ಮಾಡಿದನು. ಕೇವಲ ಇಷ್ಟೇ ಅಲ್ಲ, ‘ಮರಣಾಂತಿ ವೈರಾನಿ—’ (ಅರ್ಥ : ಮೃತ್ಯುವಿನ ನಂತರ ಶತ್ರುತ್ವ ಸಮಾಪ್ತವಾಗುತ್ತದೆ) ಈ ವಚನದ ಸ್ಮರಣೆ ಮಾಡಿಕೊಂಡು ಸ್ವಯಂ ರಾವಣನ ಅಂತ್ಯಸಂಸ್ಕಾರ ಮಾಡಿದ. ಇದರಿಂದಾಗಿ ಶ್ರೀರಾಮನು ಲಂಕೆಯ ಪ್ರಜೆಗಳ ಮನಗೆದ್ದನು.
ಪ್ರಭು ಶ್ರೀರಾಮನಿಗೆ ಲಂಕೆಯ ಅಧಿಕಾರ ಬೇಕಿರಲಿಲ್ಲ; ಹಾಗಾಗಿ ಲಕ್ಷ್ಮಣನಿಗೆ ಚಿನ್ನದ ಲಂಕೆಯ ಮೋಹವುಂಟಾದಾಗ ಶ್ರೀರಾಮನು, ‘ಜನನೀ ಜನ್ಮಭೂಮಿಶ್ಚ ಸ್ವರ್ಗದಪೀ ಗರೀಯಸಿ’ (ಅರ್ಥ : ಸ್ವರ್ಗಕ್ಕಿಂತಲೂ ಜನ್ಮಭೂಮಿ ಶ್ರೇಷ್ಠವಾಗಿದೆ) ಈ ವಚನವನ್ನು ನೆನಪಿಸಿ ಮಾತೃಭೂಮಿಯ ಮಹತ್ವ ತಿಳಿಸಿದನು. ಇದರಿಂದಲೂ ಶ್ರೀರಾಮನ ಅದ್ಭುತ ಸಂಘಟನಾ ಕೌಶಲ್ಯ ತಿಳಿಯುತ್ತದೆ.

ವನವಾಸಕ್ಕೆ ಹೋಗುವ ತಂದೆಯ ಆಜ್ಞಾಪಾಲನೆ ಮಾಡುತ್ತಾ ಲಂಕಾ ವಿಜಯಕ್ಕಾಗಿ ಶ್ರೀರಾಮನ ಸಂಘಟನೆ :
ವಾಸ್ತವದಲ್ಲಿ ನೋಡಿದರೆ, ರಾವಣನು ಸೀತಾಪಹರಣ ಮಾಡಿದಾಗ ಶ್ರೀರಾಮ ಅಯೋಧ್ಯೆಯ ಸೇನೆ ಹಾಗೂ ತನ್ನ ಸಹೋದರರ ಸಹಾಯ ಕೇಳಿದ್ದರೆ, ಅವನಿಗೆ ಸುಲಭವಾಗಿ ಸಹಾಯ ಸಿಗುತ್ತಿತ್ತು; ಆದರೆ ವನವಾಸದಲ್ಲಿ ಧನಸಂಗ್ರಹ ವರ್ಜಿತವಾಗಿರುವ ಕಾರಣ ಸೇನೆಯ ವೇತನ, ಯುದ್ಧ ಸಾಮಗ್ರಿಯ ಮೇಲೆ ಆಗುವ ಖರ್ಚು ಹಾಗೂ ಸೇನೆಗಾಗಿ ಅವಶ್ಯಕ ಇರುವ ಆಹಾರ ಧಾನ್ಯದ ಪೂರೈಕೆ ಮಾಡಲು ಸಾಧ್ಯವಿರಲಿಲ್ಲ.

ಜೊತೆಗೆ ಅವನು ತಂದೆಗೆ ನೀಡಿರುವ ವನವಾಸದ ವಚನ ಭಂಗವಾಗುತ್ತಿತ್ತು. ಆದ್ದರಿಂದ ಪ್ರಭು ಶ್ರೀರಾಮನು ವನವಾಸಿಗಳು, ವಾನರರು ಮುಂತಾದ ಸಮುದಾಯದ ಸಾಮಿಪ್ಯ ಬೆಳೆಸಿ ಅವರ ಸಹಾಯ ಪಡೆದನು ಹಾಗೂ ಅವರ ಸೇನೆ ನಿರ್ಮಿಸಿದನು. ಈ ಸೇನೆಗೆ ವನದಲ್ಲಿ ದೊರೆಯುವ ಹಣ್ಣುಗಳನ್ನು ತಿನ್ನುವ ರೂಡಿ ಇರುವುದರಿಂದ ಹಾಗೂ ಅವರು ವನದಲ್ಲಿರುವ ವೃಕ್ಷಗಳು ಬಂಡೆ ಗಲ್ಲುಗಳು ಮುಂತಾದವುಗಳನ್ನು ಶಸ್ತ್ರಗಳನ್ನಾಗಿ ಪ್ರಯೋಗಿಸಿ ರಾವಣನ ಸೇನೆಯ ಜೊತೆಗೆ ಯುದ್ಧ ಮಾಡಲು ಸಾಧ್ಯವಾಯಿತು. ಹೀಗೆ ಶ್ರೀರಾಮನು ಸೀತಾಮಾತೆಯನ್ನು ಬಿಡಿಸಲು ಆದರ್ಶ ಪತಿಧರ್ಮದ ಪಾಲನೆ ಮಾಡಿದನು;
ಅದರ ಜೊತೆಗೆ ತಂದೆಗೆ ನೀಡಿರುವ ವನವಾಸದ ವಚನವೂ ಭಂಗವಾಗದಿರುವಂತೆ ಆದರ್ಶ ಪುತ್ರಧರ್ಮವನ್ನು ಹಾಗೂ ಆಚಾರಧರ್ಮವನ್ನು ಪಾಲಿಸಿದನು. ಹೀಗೆ ಪ್ರಭು ಶ್ರೀರಾಮನು ವನವಾಸದಲ್ಲಿಯೂ ಕುಶಲ ಸಂಘಟನೆಯ ಆದರ್ಶ ಸ್ಥಾಪಿಸಿದನು. ನಾವು ಕೂಡ ಇದೇ ರೀತಿ ಸಂಘಟನೆ ಮಾಡುವುದು ಹಾಗೂ ಸಂಘಟನೆಯಲ್ಲಿರುವ ಪ್ರತಿ ವ್ಯಕ್ತಿಯ ಕೌಶಲ್ಯವನ್ನು ಯೋಗ್ಯವಾಗಿ ಬಳಸಿದರೆ ರಾಮರಾಜ್ಯರೂಪಿ ಹಿಂದೂ ರಾಷ್ಟ್ರ ಮತ್ತೆ ಸಾಕಾರ ಮಾಡಲು ಕಠಿಣವಾಗುವುದಿಲ್ಲ.

– ಸಂಕಲನ: ಶ್ರೀ. ರಮೇಶ ಶಿಂದೆ , ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

 
 
 
 
 
 
 
 
 
 
 

Leave a Reply