ಯೋಗದ ಸಹಯೋಗ…~ಪೂರ್ಣಿಮಾ ಜನಾರ್ದನ್

ಉತ್ತಮ ಆರೋಗ್ಯಕ್ಕೆ ಬೇಕು ಯೋಗದ ಸಹಯೋಗ..
ಮಾನಸಿಕ ಸ್ಥಿರತೆ, ದೈಹಿಕ ಸಾಮರ್ಥ್ಯಕ್ಕೆ ನೀಡುವುದು ಅದು ಶುಭ ಯೋಗ‌‌‌…

ಬಲ್ಲವರೆನ್ನುವರು ಶ್ರೀ ಮಹಾ ವಿಷ್ಣುವಿಗೆ ಪ್ರಿಯ ವಂತೆ ವಿಧ ವಿಧ ಅಲಂಕಾರ…
ನಿತ್ಯ ಅಭಿಷೇಕದಿಂದ ಅಭೀಷ್ಟ ಪೂರೈಸುವನು ಈಶ್ವರ..

ನಮಿಸಿದರೆ ಸಂತೃಪ್ತ ನಮನ ಪ್ರಿಯ ಭಾಸ್ಕರ..
ಹಾಗೆಂದೇ ನಿತ್ಯ ಮಾಡಬೇಕು ನಾವು ಸೂರ್ಯ ನಮಸ್ಕಾರ..ಆಧ್ಯಾತ್ಮಿಕವಾಗಿ, ವೈಜ್ಞಾನಿಕವಾಗಿ ದೃಢ ಪಟ್ಟಿದೆ ಇದರ ಕಾರ್ಯವಿಧಾನ…
ಋಷಿ‌ಮುನಿಗಳು ವಿದ್ವಾಂಸರು ನಡೆಸಿಹರು ಇದರ ಅನುಸಂಧಾನ…

ಯೋಗವೆಂದರೆ ಶಾಂತಿ ಸಾಮರಸ್ಯ ತುಂಬಿದ ಜೀವನ ವಿಧಾನ‌‌..
ಶಾರೀರಿಕ,ಮಾನಸಿಕ ವ್ಯಾಧಿಗಳಿಗೆ ನೀಡುವುದು ಉಪಶಮನ‌..

ಯೋಗ್ಯತೆ ಇದ್ದಲ್ಲಿ ಯೋಗ ದಿಂದ ಲಭಿಸುವುದು ವಿಶ್ವ ಪ್ರಸಿದ್ದಿ ಯೋಗ…
ವಿಶ್ವದೆಲ್ಲೆಡೆ ಜನರ ಯೋಗ ಕ್ಷೇಮಕ್ಕಿರಲಿ ಕ್ರಮಬದ್ಧ ಯೋಗ…..ಜಗತ್ತಿನೆಲ್ಲೆಡೆ ಅರಿತಿದ್ದಾರೆ ಎಲ್ಲರೂ ಯೋಗದ ಯೋಗ್ಯತೆ…
ಅಂತಾರಾಷ್ಟ್ರೀಯ ಯೋಗದಿನವ ಆಚರಿಸುವುದರೊಂದಿಗೆ ನೀಡೋಣ  ಯೋಗಕ್ಕೆ ಅನುದಿನ ಆದ್ಯತೆ..

ಅಂತರಾಷ್ಟ್ರೀಯ ಯೋಗ ದಿನದ ಶುಭಾಶಯಗಳೊಂದಿಗೆ…

ಅಂಚೆ ಚೀಟಿ ಸಂಗ್ರಹಣಾ ಕೃಪೆ: ಕೃಷ್ಣಯ್ಯ, ಹಿರಿಯ ಅಂಚೆ ಚೀಟಿ ಸಂಗ್ರಹಕಾರರು, ಉಡುಪಿ

 
 
 
 
 
 
 
 
 
 
 

Leave a Reply