ಪಿ.ಎಫ್ ಹಣವನ್ನು ವಿತ್ ಡ್ರಾ ಮಾಡುವುದು ಹೇಗೆ.?~ಕಿರಣ್ ಪೈ ಮಂಗಳೂರು.

ಉದ್ಯೋಗಿಗಳು, ನೌಕರರು ತಮ್ಮ ಸಂಸ್ಥೆಯ ಸೇವೆಯಲ್ಲಿ ಇದ್ದಾಗ್ಯೂ  ತಮ್ಮ ಇ.ಪಿ.ಎಫ್‌ ಖಾತೆಯಿಂದ ಭಾಗಶಃ ಹಣವನ್ನು ಹಿಂಪಡೆ ಯಲು ಸಾಧ್ಯ.
ಎಂಪ್ಲಾಯಿಸ್‌ ಪ್ರಾವಿಡೆಂಟ್‌ ಫಂಡ್‌ ಆರ್ಗನೈಸೇಶನ್ (Employees provident fund organisation-EPFO) ವೆಬ್ಸೈಟ್ ಮೂಲಕ ನೀವು  ಇ.ಪಿ.ಎಫ್.ಹಣವನ್ನು ಹಿಂಪಡೆಯ ಬಹುದು. ನೌಕರರ ಭವಿಷ್ಯ ನಿಧಿಯನ್ನು ಸಾಮಾನ್ಯವಾಗಿ EPF ಎಂದು ಕರೆಯಲಾಗುತ್ತದೆ.

ಇದು ಭಾರತದಲ್ಲಿ ಉದ್ಯೋಗಿಗಳಿಗೆ ಉಳಿತಾಯ, ಪಿಂಚಣಿ, ಹಾಗೂ ವಿಮಾ ಸೌಲಭ್ಯಗಳನ್ನು ನೀಡುವ ಸಂಸ್ಥೆ. ದೇಶದ ಯಾವುದೇ ಸಂಸ್ಥೆಯಲ್ಲಿ 20 ಕ್ಕೂ ಹೆಚ್ಚು ನೌಕರರು ಕೆಲಸ ಮಾಡುವುದಾದರೆ ಪಿ.ಎಫ್ ಕಡ್ಡಾಯವಾಗಿದೆ.

ಈ ಇ.ಪಿ.ಎಫ್‌ ಸೌಲಭ್ಯ ಹೊಂದಿದ ಸಂಸ್ಥೆಗಳಲ್ಲಿ ಕೆಲಸ ಮಾಡುವ ಎಲ್ಲ ನೌಕರರು ಪ್ರತಿ ತಿಂಗಳು ತಮ್ಮ ಮೂಲವೇತನದ (Basic Salary) ಶೇಕಡಾ 12   ನೌಕರರ ಭವಿಷ್ಯ ನಿಧಿಗೆ ನೀಡುವುದು ಕಡ್ಡಾಯವಾಗಿರುತ್ತದೆ.

ಭವಿಷ್ಯ ನಿಧಿಗೆ ನೀಡಲಾದ ನೌಕರರ ಹಣವು ಇ.ಪಿ.ಎಫ್‌ನ ನೌಕರರ ಖಾತೆಯಲ್ಲಿ ಉಳಿತಾಯ ಗೊಂಡಿರುತ್ತದೆ. ಪಿ.ಎಫ್‌ನ ಖಾತೆಯಲ್ಲಿ ಉಳಿತಾಯ ಗೊಂಡಿರುವ ಹಣವನ್ನು ನೌಕರರು ತಮ್ಮ ನಿವೃತ್ತಿ ಸಮಯದಲ್ಲಿ ಹಿಂಪಡೆಯ ಬಹುದು.
ಆದರೆ ನಿವೃತ್ತಿಗಿಂತ ಮುಂಚೆಯೂ ನೌಕರರು ತಮ್ಮ ಉಳಿತಾಯದ ಹಣವನ್ನು ತೆಗೆದು ಕೊಳ್ಳಲು ಸಾಧ್ಯವಿದೆ. ಎರಡು ವರ್ಷಗಳಿಂದ ಕೊರೋನಾ ಸಂಕಷ್ಟ ನೌಕರರ ಪಾಲಿಗೆ ನುಂಗ ಲಾರದ ತುತ್ತಾಗಿರುವ ಸಂದರ್ಭದಲ್ಲಿ ತಮ್ಮದೇ ಉಳಿತಾಯ ಇ.ಪಿ.ಎಫ್ ತಕ್ಕ ಮಟ್ಟಿಗೆ ಹಣ ಕಾಸಿನ ಬಿಕ್ಕಟ್ಟಿಗೆ ಪರಿಹಾರ ಮಾಡುತ್ತದೆ.
ಕೇವಲ ಆನ್ಲೈನ್ ಮೂಲಕ ವಿತ್ ಡ್ರಾ ಮಾಡಲು ಸಾಧ್ಯ. ಕೇಂದ್ರ ಪಿ.ಎಫ್ ಇಲಾಖೆ ಪಾರದರ್ಶ ಕತೆ ಹಾಗೂ ತ್ವರಿತ ಸೇವೆಗಾಗಿ ಈಗ ಆಫ್ ಲೈನ್ ಅಪ್ಲಿಕೇಶನ್ ವಿತ್ ಡ್ರಾ ಆಧ್ಯತೆ ಕಡಿತಗೊಳಿಸಿದೆ.
ಆನ್ಲೈನ್ ಮೂಲಕ ಡೈರೆಕ್ಟ ಸಂಬಂಧ ಪಟ್ಟ ಬ್ಯಾಂಕ್ ಖಾತೆಗೆ ನೇರ ಜಮಾ ಮಾಡುತ್ತದೆ.

ಇ.ಪಿ.ಎಫ್‌ ಖಾತೆಯಿಂದ ಆನ್‌ಲೈನ್‌ ಮುಖಾಂತರ ಹಣವನ್ನು ಹೇಗೆ ತೆಗೆದುಕೊಳ್ಳುವುದು ?

ಇ.ಪಿ.ಎಫ್  ನಿಮ್ಮ ಖಾತೆಯಿಂದ ಆನ್‌ಲೈನ್ ಮುಖಾಂತರ ಹಣವನ್ನು ತೆಗೆದುಕೊಳ್ಳುವುದು ಹೇಗೆ ಎಂಬುದನ್ನು ತಿಳಿಯುವುದಕ್ಕಿಂತ ಮೊದಲು ಗಮನದಲ್ಲಿರಿಸಿ ಕೊಳ್ಳಬೇಕಾದ ವಿಷಯವೇನೆಂದರೆ, ಇ.ಪಿ.ಎಫ್  ಖಾತೆ ಯಲ್ಲಿರುವ ಸಂಪೂರ್ಣ ಹಣವನ್ನು ಮುಂಚಿತ ವಾಗಿ ಪಡೆಯಲು ಸಾಧ್ಯವಿಲ್ಲ.

ಸಂಪೂರ್ಣ ಹಣವನ್ನು ಪಡೆಯಲು ನೌಕರರು ನಿವೃತ್ತಿ ಹೊಂದಿರಬೇಕು ಅಥವಾ ನೌಕರನು ಕನಿಷ್ಠ ಎರಡು ತಿಂಗಳುಗಳ ಕಾಲ ನಿರುದ್ಯೋಗಿ ಯಾಗಿ ಉಳಿದಿರಬೇಕು. ಇದನ್ನು ಹೊರತು ಪಡಿಸಿದರೆ ಕೆಲವು ಸಂದರ್ಭಗಳಲ್ಲಿ ಮಾತ್ರ ಮುಂಚಿತವಾಗಿ ಇ.ಪಿ.ಎಫ್‌ ಹಣವನ್ನು ಪಡೆಯಬಹುದು.

ಉದಾಹರಣೆಗೆ: ವೈದ್ಯಕೀಯ ಅನಾರೋಗ್ಯ ಸಂದರ್ಭಗಳಲ್ಲಿ, ಮದುವೆ, ಮನೆ ಮರು ನಿರ್ಮಾಣ, ಹಾಗು ಇತರ ವಿಪತ್ತಿನ ಸಮಯ ಗಳಲ್ಲಿ ಮಾತ್ರ ಹಣವನ್ನು ಹಿಂಪಡೆಯಬಹುದು. ಪಿ.ಎಫ್ ವೆಬ್ಸೈಟ್ ನಲ್ಲಿ ಯಾವೆಲ್ಲಾ ನಿರ್ದಿಷ್ಟ ಉದ್ದೇಶ ಕ್ಕಾಗಿ ಭಾಗಶಃ ವಿತ್ ಡ್ರಾ ಮಾಡ ಬಹುದು ಎಂದು ನಮೂದಿಸಲಾಗಿದೆ.

1) ಮೊದಲು ಇ.ಪಿ.ಎಫ್ ಪಾಸ್ ಬುಕ್ ಪೋರ್ಟಲ್ ನಲ್ಲಿ ನಿಮ್ಮ ಬ್ಯಾಲೆನ್ಸ್ ನೋಡಿ ಕೊಳ್ಳಿ. ಪೆನ್ಶನ್ ಮೊತ್ತವನ್ನು ಬಿಟ್ಟು ನಿಮ್ಮ ಹಾಗೂ ನಿಮ್ಮ ಸಂಸ್ಥೆಯ ಷೇರ್ ಮೊತ್ತದ ಶೇಕಡಾ 80 ನೀವು ವಿತ್ ಡ್ರಾ ಮಾಡಬಹುದು. (Passbook.epdindia.gov.in)

2) UAN Member e-Sewa ಪೋರ್ಟಲ್‌ಗೆ ಭೇಟಿ ನೀಡಿ. (unifiedportal-mem.epfindia.gov.in)

3) ನಿಮಗೆ ನೀಡಲಾಗಿರುವ ಯೂನಿವರ್ಸಲ್‌ ಖಾತೆ ಸಂಖ್ಯೆ (Universal Account Number-UAN) ಹಾಕಿ, ಪಾಸ್‌ವರ್ಡ್‌ ಮತ್ತು ಕ್ಯಾಪ್ಚಾ (Captcha) ಅನ್ನು ನಮೂದಿಸಿ, ಸೈನ್‌ಇನ್‌ ಬಟನ್‌ ಅನ್ನು ಕ್ಲಿಕ್‌ ಮಾಡಿ.

4) ONLINE SERVICES ಮೆನು ಮೇಲೆ ಕ್ಲಿಕ್‌ ಮಾಡಿ ಮತ್ತು CLAIM (FORM-31,19,10ಸಿ &10D) ಅನ್ನು ಆಯ್ಕೆ ಮಾಡಿ 

5) ಆನ್‌ಲೈನ್‌ ಕ್ಲೈಮ್‌ ಫಾರ್ಮ್ (ONLINE CLAIM FORM)  ವಿವರಗಳನ್ನು ಪರಿಶೀಲಿಸಿ.

6) ಒಮ್ಮೆ ಪರಿಶೀಲನೆಗೊಳಪಟ್ಟಮೇಲೆ ನಿಮ್ಮ ಬ್ಯಾಂಕ್‌ ಖಾತೆಯ ನಂಬರ್‌ ಅನ್ನು ನಮೂದಿಸಿ.

7) VERIFY ಬಟನ್‌ ಅನ್ನು ಕ್ಲಿಕ್‌ ಮಾಡಿ, ನಂತರ CERTIFICATE OF UNDERTAKING ನಲ್ಲಿ ಲಭ್ಯವಿರುವ ಹೌದು (YES) ಬಟನ್‌ ಮೇಲೆ ಕ್ಲಿಕ್‌ ಮಾಡಿ.

8) ಆನ್‌ಲೈನ್‌ ಕ್ಲೈಮ್‌ಗಾಗಿ ಮುಂದುವರೆ ಯಲು “PROCEED ONLINE” ಬಟನ್‌ ಅನ್ನು ಕ್ಲಿಕ್‌ ಮಾಡಿ.

9) ನಂತರ ನೀವು ಅಡ್ವಾನ್ಸ್ ಪಿ.ಎಫ್ ನ ಹಣವನ್ನು ಪಡೆಯಲ್ಲು ಇಚ್ಚಿಸುತ್ತೀರಿ ಎಂಬು ದನ್ನು ಕೈಮ್‌ ಫಾರ್ಮ್‌ ನಲ್ಲಿ ನಮೂದಿಸ ಬೇಕಾಗುತ್ತದೆ. ನಂತರ ಅದು ಡ್ರಾಪ್‌ ಡೌನ್‌ ಮೆನುವನ್ನು ತೋರಿಸುತ್ತದೆ ಅದರಲ್ಲಿ ಮುಂಚಿತ ವಾಗಿ ಪಿ.ಎಫ್.ನ ಹಣವನ್ನು ಪಡೆಯಲು ಇರಬೇಕಾದ ಕಾರಣಗಳ ಪಟ್ಟಿಯನ್ನು ತೋರಿಸುತ್ತದೆ ಅದರಲ್ಲಿ ಸೂಕ್ತವಾದದನ್ನು ನೀವು ಆರಿಸಿಕೊಂಡು ಕ್ಲಿಕ್‌ ಮಾಡಿ.

10) ನಂತರ ಟೆಕ್ಸ್ಟ್‌ಬಾಕ್ಸ್ ನಲ್ಲಿ ನಿಮಗೆ ಅಗತ್ಯ ವಿರುವ ಹಣದ ಮೊತ್ತವನ್ನು ನಮೂದಿಸಿ. EMPLOYEE ADDRESS SECTION ನಲ್ಲಿ ನಿಮ್ಮ ಇ-ಮೇಲ್ ವಿಳಾಸವನ್ನು ನಮೂದಿಸಿ.

11) ಪ್ರಮಾಣಪತ್ರದ ಮೇಲೆ ಕ್ಲಿಕ್ಕಿಸಿ ನಿಮ್ಮ ವಿನಂತಿಯನ್ನು ಸಲ್ಲಿಸಿ. ನಂತರ ಸ್ವೀಕೃತಿ ಪತ್ರ ಪಿ.ಡಿ.ಎಫ್ ರೂಪದಲ್ಲಿ ಪಡೆಯುವಿರಿ.

ನೀವು ವಿನಂತಿಸಿದ ಹಣದ ಮೊತ್ತವು ನಿಮ್ಮ ಪಿ.ಎಫ್ ಖಾತೆಯಲ್ಲಿ ನಮೂದಿಸಿದ ನಿಮ್ಮ ಬ್ಯಾಂಕ್‌ ಖಾತೆಗೆ ಬರಲು 72 ಗಂಟೆ ರಿಂದ 15 ದಿನಗಳಾಗಬಹುದು.

ಇದನ್ನು ಗಮನಿಸಿ, ಇಲಾಖೆಯ ಹೊಸ ಆದೇಶ ದನಯ್ವ ಪಿ.ಎಫ್ ಖಾತೆಯನ್ನು ನಿಮ್ಮ ಆಧಾರ ಸಂಖ್ಯೆ ಜೊತೆ ಲಿಂಕ್ ಮಾಡಲೇ ಬೇಕು. KYC ಪಾನ ನಂಬರ್ ಕೂಡ ಜೋಡಣೆ ಅಗತ್ಯ. ಇದನ್ನು ನೀವು ಇದೇ ಪೋರ್ಟಲ್ ನ  ಮೇಲಿನ KYC ಮೆನುವಿನಲ್ಲಿ ಮಾಡಬಹುದು.

ಪಿ.ಎಫ್ ಖಾತೆಗೆ ಬ್ಯಾಂಕ್ ಖಾತೆ ಜೋಡಣೆ ಅತ್ಯಗತ್ಯ. ಹೊಸ ಆದೇಶದಂತೆ ಕೇವಲ ರಾಷ್ಟ್ರೀಕೃತ ಬ್ಯಾಂಕ್ ಲಿಂಕ್ ಮಾಡಬಹುದು. ಖಾಸಗಿ, ಸಹಕಾರಿ, ಇತರ ಕೋ ಆಪರೇಟಿವ್ ಬ್ಯಾಂಕ್ ಖಾತೆ ಮಾನ್ಯವಾಗುವುದಿಲ್ಲ.
ರಾಷ್ಟ್ರೀಯ ಬ್ಯಾಂಕ್ ನ ಇತ್ತೀಚಿನ ಅಪ್ಡೇಟ್ ಆಗಿರುವ ಪಾಸ್ ಬುಕ್, ಚೆಕ್ ಬುಕ್ ಬೇಕಾಗುತ್ತದೆ. ವಿತ್ ಡ್ರಾ ಅಪ್ಲೈ ಮಾಡುವ ಸಂದರ್ಭದಲ್ಲಿ ಚೆಕ್ ಅಥವಾ ಪಾಸ್ ಬುಕ್ ಸ್ಕ್ಯಾನ್ ಮಾಡಬೇಕು. ಅದೇ ಖಾತೆಗೆ ನೀವು ವಿನಂತಿಸಿದ ಮೊತ್ತ ಕ್ರೆಡಿಟ್ ಆಗುತ್ತದೆ. ಈ ಮಾಹಿತಿ ತಿಳಿದವರು ನಿಮ್ಮ ಸ್ನೇಹಿತರಿಗೆ ತಿಳಿಸಿ
~ಕಿರಣ್ ಪೈ ಮಂಗಳೂರು .
 
 
 
 
 
 
 
 
 
 
 

Leave a Reply