ಶೇಖರ ಅಜೆಕಾರು ಅವರಿಗೆ ಮಾಣಿಕ್ಯ ರಾಜ್ಯೋತ್ಸವ ಪ್ರಶಸ್ತಿ

ಶೇಖರ ಅಜೆಕಾರು ಅವರಿಗೆ ಮಾಣಿಕ್ಯ ರಾಜ್ಯೋತ್ಸವ ಪ್ರಶಸ್ತಿಯನ್ನು ಭಾನುವಾರ ಹಾಸನದಲ್ಲಿ ನಡೆಯುವ ಅಂತರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ನೀಡಲಾಗುತ್ತಿದೆ ಎಂದು ಆಯ್ಕೆ ಸಮಿತಿಯ ಸಂಚಾಲಕಿ ಕುವೆಂಪು ವಿಶ್ವವಿದ್ಯಾಲಯ ಪ್ರಾಧ್ಯಾಪಕಿ ಡಾ.ಹಸೀನಾ ತಿಳಿಸಿದ್ದಾರೆ. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಅಧ್ಯಕ್ಷ ಉಪ್ಪಾರ ಅವರ ಮುಂದಾಳುತ್ವದಲ್ಲಿ ನಡೆಯುವ ಬೃಹತ್ ಕಾರ್ಯಕ್ರಮದಲ್ಲಿ ನಾಡು ನುಡಿ ಸಂಘಟನೆಗಳಿಗೆ ಸೇವೆ ಸಲ್ಲಿಸಿದ ರಾಜ್ಯದ ಮತ್ತು ಮುಂಬಯಿಯ 12 ಸಾಧಕರನ್ನು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. 23 ಆದಿಗ್ರಾಮೋತ್ಸವ, 12 ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನಗಳನ್ನು, 8 ಕರ್ನಾಟಕ ಮಿನಿ ಚಲನಚಿತ್ರೋತ್ಸವಗಳನ್ನು, 6 ಅಂಗನವಾಡಿ ಮಕ್ಕಳ ಮೇಳಗಳನ್ನು ಸೇರಿದಂತೆ ಅನೇಕ ವಿಶಿಷ್ಠ ಕಾರ್ಯಕ್ರಮಗಳ ಸಂಘಟಕರಾದ ಡಾ.ಶೇಖರ ಅಜೆಕಾರು ಹಿರಿಯ ಪತ್ರಕರ್ತರು.ಕಳೆದವಾರ ಬೆಳ್ಳಿ ಹಬ್ಬ ಆಚರಿಸಿದ ಮುಂಬಯಿಯ ಕನ್ನಡ ಸೇವಾ ಸಂಘ ಪೊವಾಯಿ ಇದರ ಸಂಸ್ಥಾಪಕರು, ಸ್ಥಾಪಕ ಅಧ್ಯಕ್ಷರು ಆಗಿರುವ ಅವರು ಮುಂಬಯಿಯ ಹೊಸ ತಲೆಮಾರಿನ ಪಾಸ್ ಪೋಲಿಕನ್ನಡ ಶಾಲೆಯ ರೂವಾರಿಗಳಲ್ಲಿ ಒಬ್ಬರು. ವಿಶ್ವ ಮಾಧ್ಯಮ ಚಕ್ರವರ್ತಿ, ತುಳುವ ಮಾಧ್ಯಮ ಸಿರಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ನೂರಾರು ಗೌರವಗಳಿಗೆ ಪಾತ್ರರಾಗಿದ್ದಾರೆ.ಕಂಬಳಕ್ಕೆ ಸಂಬಂಧಿಸಿದ ರಾಜ್ಯೋತ್ಸವ 5 ಪುಸ್ತಕಗಳು ಸಹಿತ 27 ಪುಸ್ತಕಗಳ ಲೇಖಕರಾಗಿದ್ದಾರೆ. ಮಕ್ಕಳ ಪ್ರತಿಭಾ ಪೋಷಕರೆಂದು ಖ್ಯಾತಿ ಪಡೆದ ಅವರು ಛಾಯಾಗ್ರಹಣ, ಪುಸ್ತಕ ಪ್ರಕಟನೆ, ಸಂಘಟನೆ,ಪತ್ರಿಕೋದ್ಯಮ,ಕೃಷಿ,ತರಬೇತಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ

 
 
 
 
 
 
 
 
 
 
 

Leave a Reply