ಪ್ರಿಯಾಂಕಾ ಶೇಟ್ ಗೆ ರಾಷ್ಟ್ರೀಯ ಬಾಲಶ್ರೀ ಗೌರವ

ಮೈಸೂರು : ರಾಷ್ಟ್ರೀಯ ಬಾಲಶ್ರೀ ಗೌರವವು ಭಾರತದ ಮಕ್ಕಳಿಗಾಗಿ ನೀಡಲಾಗುವ ಮೂರು ಅತ್ಯುನ್ನತ ರಾಷ್ಟ್ರೀಯ ಗೌರವಗಳಲ್ಲಿ ಒಂದಾಗಿದೆ, ಇದು ಪ್ರಧಾನ್ ಮಂತ್ರಿ ರಾಷ್ಟ್ರೀಯ ಬಾಲ್ ಪುರಸ್ಕರ್ ನಂತರ 2 ನೇ ಸ್ಥಾನದಲ್ಲಿದೆ.

ದೆಹಲಿಯ ರಾಷ್ಟ್ರೀಯ ಬಾಲಭವನ ʼಬಾಲಶ್ರೀ-2016ʼ ರಾಷ್ಟ್ರೀಯ ಪ್ರಶಸ್ತಿಯನ್ನು ಸೃಜನಾತ್ಮಕ ಕಲೆಗಳು ವಿಭಾಗದಲ್ಲಿ ನೀಡಿ ಪುರಸ್ಕರಿಸಿದೆ. ಈ ಪುರಸ್ಕಾರವು ಪ್ರಶಸ್ತಿ ಪತ್ರ, ಪಾರಿತೋಷಕ,15,000/- ರೂ. ಗಳ ಕಿಸಾನ್‌ ವಿಕಾಸ ಪತ್ರ ಹಾಗೂ ಪುಸ್ತಕಗಳನ್ನು ಒಳಗೊಂಡಿದೆ.

ಸ್ಪರ್ಧೆಯಲ್ಲಿ ಪ್ರಿಯಾಂಕಾ ಶೇಟ್ ಮೈಸೂರು ಜಿಲ್ಲೆಯಿಂದ ಆಯ್ಕೆಯಾಗಿದ್ದಳು, ನಂತರ ರಾಜ್ಯಮಟ್ಟದ ಸ್ಪರ್ಧೆ ಬೆಂಗಳೂರಿನ ಆರ್ಮಿ ಶಾಲೆಯಲ್ಲಿ ನಡೆದಿತ್ತು. ಈ ಸ್ಪರ್ಧೆಯಲ್ಲಿ ಪ್ರಿಯಾಂಕಾ ಶೇಟ್ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಳು. ದೆಹಲಿ ರಾಷ್ಟ್ರೀಯ ಬಾಲಭವನದಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆ ಮತ್ತು ಪರೀಕ್ಷೆ ವಿಭಿನ್ನ ರೀತಿಯಲ್ಲಿ ನಡೆದಿದ್ದವು. ಹಲವು ತಿಂಗಳುಗಳ ನಂತರ ಪ್ರಕಟವಾದ ‘ಬಾಲಶ್ರೀ-2016’ ಪುರಸ್ಕೃತರ ಅಧಿಕೃತ ಪಟ್ಟಿಯಲ್ಲಿ ಪ್ರಿಯಾಂಕಾ ಶೇಟ್ ಸ್ಥಾನ ಪಡೆದಿದ್ದು, ಈಗ ಪ್ರಶಸ್ತಿ ಕೈಸೇರಿದೆ.

ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ರಾಷ್ಟ್ರ ಮಟ್ಟದಲ್ಲಿ ಈ ಹಿಂದೆಯೇ ನಡೆಯಬೇಕಾಗಿತ್ತು. ಆದರೆ ಕಾರಣಾಂತರದಿಂದ ಮುಂದೂಡುತ್ತಾ ಬಂದು ಈಗ ಬೆಂಗಳೂರಿನ ಅನುಭೂತಿ ಬಾಲಭವನದ ಮೂಲಕ ಈ ಪುರಸ್ಕಾರವನ್ನು ನೀಡಲಾಗಿದೆ. 

 

 
 
 
 
 
 
 
 
 
 
 

Leave a Reply