ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ​ ಯೋಗ ದಿನಾಚರಣೆ

“ಯೋಗಕ್ಷೇಮಂವಹಾಮ್ಯ​ಹಂ ಎಂದು  ಶ್ರೀ ಕೃಷ್ಣನು ಹೇಳಿದಂತೆ​ ಭಗ​ವಂತನು ಪ್ರತಿಯೊಬ್ಬನಿಗೂ ಯೋಗ-ಕ್ಷೇಮವನ್ನು​ ಕರುಣಿಸುತ್ತಾನೆ. ಭಾರತ ಜಗತ್ತಿಗೆ ಯೋಗವನ್ನು ದಯಪಾಲಿಸಿದೆ.​ ​ಜಾಗತಿಕ ವಾಗಿ ಯೋಗದ ಮಹತ್ವ ಗೊತ್ತಾಗಿದ್ದು,‘​ ​ವಿಶ್ವಯೋಗ​ ದಿನಾಚರಣೆ’ಯಾಗಿ ಆಚರಿಸಲು ಸಾಧ್ಯ ವಾಗಿದ್ದು ಪ್ರಧಾನಿ ನರೇಂದ್ರ​ ಮೋದಿಯವರಿಂದ. 

ಜಗತ್ತು ತನಗೆ ಆರೋಗ್ಯ ಬೇಕು, ಕ್ಷೇಮ ಬೇಕು ಅಂತ​ ಬಯಸಿತೋ ಆಗ ಯೋಗವನ್ನು ಒಪ್ಪಿ ಕೊಂಡಿತು. ಯೋಗದ ಮಹತ್ವದ ಅರಿವು​ ಜನರಿಗೆ ಬರಲು ಈಗಂತೂ ಭಯಾನಕವಾದ ಜಾಗತಿಕ ವಾಗಿ ಎಲ್ಲರನ್ನೂ ಕಾಡಿದ​ ಕೊರೊನ ಕಾರಣವಾಯಿತು. ಎಂದು ಅದಮಾರು ಮಠಾಧೀಶರಾದ​ ​ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ನುಡಿದರು.


ಉಡುಪಿ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ​ ಘಟಕದ ವತಿ ಯಿಂದ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ​ ಭಾಗವಹಿಸಿ ಆಶೀರ್ವದಿಸುತ್ತಾ“ ನಮ್ಮ ದೇಶಕ್ಕೆ ಯೋಗ ಎಂಬ ಔಷಧಿಯನ್ನು​ ಋಷಿಮುನಿಗಳು ಕೊಟ್ಟಿರುತ್ತಾರೆ. ಯೋಗ ಅವಧಿ ಮುಗಿಯದ ಔಷಧಿ;​ ಅನೂರ್ಜಿತಗೊಳ್ಳುವುದಿಲ್ಲ. ಇದನ್ನು ನಮ್ಮ ಜೀವನದಲ್ಲಿ ಬಳಸಿಕೊಂಡು ಅವಧಿ​ ರಹಿತವಾಗಿ ಜೀವಿಸಬೇಕು. 
 
ಈಗಲೂ ನೂರಾರು ವರ್ಷಗಳ ಕಾಲ ಋಷಿಮುನಿಗಳು​ ಜೀವಿಸುತ್ತಿದ್ದಾರೆ ಅಂದರೆ ಅದಕ್ಕೆ ಕಾರಣ ಯೋಗ. ಯಾವ ಯಾವ ಕಾಯಿಲೆಗೆ​ ಯಾವ್ಯಾವ ಆಸನಗಳನ್ನು ಮಾಡಬೇಕು – ಮಾಡಬಾರದು ಎಂಬುದು ಕೂಡ​ ಯೋಗ ವಿದ್ಯೆಯಲ್ಲಿ ಇದೆ. ಆಯುಷ್ಯದ ಯೋಗವನ್ನು ಪಡೆಯಬೇಕು.​ ಭಾರತವು ಯೋಗದಿಂದ ಆರೋಗ್ಯವಂತ ರಾಷ್ಟ್ರವಾಗುವುದು”ಎಂದು ಹೇಳಿದರು.

ಪ್ರಾತ್ಯಕ್ಷಿಕೆ​ಯೊಂದಿಗೆ ಆಶಯ ಮಾತುಗಳನ್ನಾಡಿದ ಯೋಗ ಗುರು​ ನಿವೃತ್ತ ಪ್ರಾಧ್ಯಾಪಕ ಡಾ. ಶ್ರೀಕಾಂತ ಸಿದ್ಧಾಪುರ ರವರು“ ಯೋಗ ಎಂದರೆ​ ಕೇವಲ ಆಸನ, ಪ್ರಾಣಾಯಾಮ ಹಾಗೂ ಧ್ಯಾನಗಳಷ್ಟೇ ಅಲ್ಲ. ಆಧ್ಯಾತ್ಮ​ ಯೋಗದಲ್ಲಿ ಅಷ್ಟಾಂಗಗಳಿವೆ. ಸಮಾಧಿ ಎಂಟನೆಯ ಸ್ಥಿತಿ. ಆದರೆ ಪ್ರಸ್ತುತ​ ಸಮಾಜದ ಆರೋಗ್ಯದ ದೃಷ್ಟಿಯಿಂದ ಆಸನ, ಪ್ರಾಣಯಾಮ ಹಾಗೂ​ ಧ್ಯಾನಗಳಿಗೆ ಪ್ರಾಮುಖ್ಯ ಕೊಡಬೇಕಾಗಿದೆ​. ​ ಆಸನ ಹಾಗೂ​ ಪ್ರಾಣಾಯಾಮಗಳನ್ನು ಹಂತ ಹಂತ ವಾಗಿ ಗುರು ಮುಖೇನ ಅಭ್ಯಸಿಸಬೇಕು.

ದೇಹ ಹಾಗೂ ಶ್ವಾಸಕೋಶಗಳು ಅದಕ್ಕೆ ಹೊಂದಿಕೊಳ್ಳಲು ಸಮಯಾವಕಾಶ​ ಬೇಕಾಗಬಹುದು. ಅಲ್ಲಿಯ ತನಕ ತಾಳ್ಮೆಯಿಂದ ಅಭ್ಯಸಿಸಬೇಕು.​ ಆಸನಗಳನ್ನು ಮಾಡುವಾಗ ಉಸಿರಾಟದ ಕಡೆ ಗಮನವಿರಬೇಕು. ಈ​ ಮೂಲಕ ಮನಸ್ಸಿನ ನಿಯಂತ್ರಣ ಸಾಧ್ಯ.
ದೀರ್ಘ ಉಸಿರಾಟದಿಂದ ಹೆಚ್ಚಿನ ಪ್ರಮಾಣದಲ್ಲಿ​ ಹೊರಗಿನ ಆಮ್ಲಜನಕವನ್ನು ದೇಹದ ವಿವಿಧ ಭಾಗಗಳ ಚಟುವಟಿಕೆಗಳಿಗೆ​ ಪೂರಕವಾಗಿ ಒದಗಿಸಬಹುದು. ಆಸನಗಳು ಶ್ವಾಸಕೋಶವೂ ಹೆಚ್ಚಿನಆಮ್ಲಜನಕವನ್ನು ಸ್ವೀಕರಿಸಲು ಸಹಕರಿಸುತ್ತವೆ. 
 
ಕೊರೊನ ರೋಗದಿಂದ​ ಆಗುವ ಗಂಭೀರ ಪರಿಣಾಮಗಳನ್ನು ಪ್ರಾಣಾಯಾಮದ ಸಮರ್ಪಕ​ ಅಧ್ಯಯನದ ಮೂಲಕ ಎದುರಿಸಬಹುದು” ಎಂದು ಹೇಳಿದರು.​ ಆಡಳಿತ ಮಂಡಳಿಯ​ ​ಕಾರ್ಯದರ್ಶಿ ಖ್ಯಾತ ನ್ಯಾಯವಾದಿ ಶ್ರೀ​ ಪ್ರದೀಪ್ ಕುಮಾರ್ ಶುಭ ಹಾರೈಸಿದರು. ಕಾಲೇಜಿನ ಪ್ರಾಚಾರ್ಯರಾದ ಡಾ.​ ಸುಕನ್ಯಾ ಮೇರಿ ಜೆ. ಅಧ್ಯಕ್ಷತೆ ವಹಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕ ವೃಂದದವರು ಹಾಗೂ ಕಚೇರಿ​ ಸಿಬ್ಬಂದಿಗಳು ಭೌತಿಕವಾಗಿ ಭಾಗವಹಿಸಿದರು. ಆನ್ಲೈನ್‌ನಲ್ಲಿ ಇನ್ನೂರಕ್ಕೂ ಹೆಚ್ಚು​ ಸ್ವಯಂಸೇವಕರು ಪಾಲ್ಗೊಂಡರು.​ ಎನ್.ಎಸ್.ಎಸ್ ಯೋಜನಾಧಿಕಾರಿ ರಮಾನಂದ ರಾವ್ ಕಾರ್ಯಕ್ರಮವನ್ನು​ ಆಯೋಜಿಸಿ ಸ್ವಾಗತಿಸಿದರು. ಸುಧಾಕರ್ ರವರು ತಾಂತ್ರಿಕವಾಗಿ ಸಹಕರಿಸಿದರು.​ ಯೋಜನಾಧಿಕಾರಿ ಶ್ರೀಲತಾ ಆಚಾರ್ಯ ವಂದಿಸಿದರು.
 
 
 
 
 
 
 
 
 
 
 

Leave a Reply