ಸೈನಿಕನನ್ನು ರಕ್ಷಿಸಿ ಪ್ರಾಣಬಿಟ್ಟ 6 ವರ್ಷದ ಆರ್ಮಿ ಡಾಗ್!

ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಸೈನಿಕರು ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಧಾಳಿ ನಡೆದಿದೆ. ಈ ವೇಳೆ ಸೇನೆಯ ಶ್ವಾನ ಕೆಂಟ್ ಭಾರತೀಯ ಸೇನೆಯ ಯೋಧನ ಜೀವವನ್ನು ಉಳಿಸಿ ತನ್ನ ಪ್ರಾಣ ತ್ಯಾಗ ಮಾಡಿದೆ. ಆರು ವರ್ಷದ ಲ್ಯಾಬ್ರಡಾರ್‍ ಕೆಂಟ್ 21 ಆರ್ಮಿ ಡಾಗ್ ಯೂನಿಟ್ ನ ಸದಸ್ಯಳಾದ ಈ ಕೆಂಟ್ ಇದೀಗ ಸೈನಿಕನನ್ನು ರಕ್ಷಣೆ ಮಾಡಿ ತನ್ನ ಪ್ರಾಣತ್ಯಾಗ ಮಾಡಿದೆ. ದಾಳಿಯ ವೇಳೆ ತನ್ನ ಹ್ಯಾಂಡ್ಲರ್‍ ನನ್ನು ರಕ್ಷಿಸುವ ಸಂದರ್ಭದಲ್ಲಿ ತನ್ನ ಪ್ರಾಣವನ್ನು ಕಳೆದುಕೊಂಡಿದೆ ಎಂದು ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.

ರಾಜೌರಿಯಲ್ಲಿ ಭಯೋತ್ಪಾದಕರನ್ನು ಹುಡುಕುತ್ತಾ ಕೆಂಟ್ ಸೈನಿಕರ ತುಕಡಿಯನ್ನು ಮುನ್ನೆಡೆಸುತ್ತಿತ್ತು. ಈ ಸಮಯದಲ್ಲಿ ಕೆಂಟ್ ಮೇಲೆ ಉಗ್ರರು ಗುಂಡಿನ ಧಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಗುಂಡು ಕೆಂಟ್ ಗೆ ತಗುಲಿದೆ. ಗುಂಡು ತಗುಲಿದ ಕೂಡಲೇ ಕೆಂಟ್ ಕೆಳಗೆ ಬಿದಿದ್ದೆ. ಇನ್ನೂ ಚಿಕಿತ್ಸೆ ಫಲಕಾರಿಯಾಗದೆ ಕೆಂಟ್ ತನ್ನ ಪ್ರಾಣ ಕಳೆದುಕೊಂಡಿದೆ ಎಂದು ಸೇನೆಯ ವಕ್ತಾರರು ತಿಳಿಸಿದ್ದಾರೆ. ಇನ್ನೂ ಕೆಂಟ್ ಗೆ ಆರು ವರ್ಷ ವಯಸ್ಸಾಗಿದೆ. 21 ಆರ್ಮಿ ಡಾಗ್ ಯೂನಿಟ್ ನಿಂದ ಈ ಪ್ರದೇಶದಲ್ಲಿ ಭಾರತೀಯ ಸೇನೆಯ ಭಯೋತ್ಪದಾನಾ ನಿಗ್ರಹ ಘಟಕದಿಂದ ನಿಯೋಜಿಸಲಾಗಿತ್ತು. ಇನ್ನೂ ಕೆಂಟ್ ತನ್ನ ನಾಲ್ಕು ವರ್ಷದ ಸೇವೆಯಲ್ಲಿ ಅನೇಕ ಕಾರ್ಯಾಚರಣೆಗಳಲ್ಲಿ ಯಶಸ್ವಿಯಾಗಿ ಭಾಗವಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ನಾರ್ಲಾ ಎಂಬ ಗ್ರಾಮದಲ್ಲಿ ಭಯೋತ್ಪಾದಕರ ಮೇಲೆ ಸೈನಿಕರು ಗುಂಡಿನ ದಾಳಿ ನಡೆಸಿದ್ದಾರೆ. ಈ ಗುಂಡಿನ ಚಕಮಕಿಯ ವೇಳೆ ಓರ್ವ ಯೋಧ ಹುತಾತ್ಮರಾಗಿದ್ದು, ಎಸ್.ಪಿ.ಒ ಹಾಗೂ ಮೂವರು ಯೋಧರು ಗಾಯಗೊಂಡಿದ್ದಾರೆ. ಗಾಯಗೊಂಡ ಯೋಧರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಗುಂಡಿನ ದಾಳಿಯಲ್ಲಿ ಸೇನೆ ಓರ್ವ ಉಗ್ರನನ್ನು ಹತ್ಯೆ ಮಾಡಿದೆ ಎಂದು ತಿಳಿದುಬಂದಿದೆ.

 
 
 
 
 
 
 
 

Leave a Reply