ಫೋಕಸ್ ರಾಘು ಅವರಿಗೆ ಅಂತಾರಾಷ್ಟ್ರೀಯ ಗೌರವ

ಕಲಾತ್ಮಕ ಛಾಯಾಗ್ರಹಣ ಕ್ಷೇತ್ರದಲ್ಲಿ 85ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಅಂಗ ಸಂಸ್ಥೆಯನ್ನು ಹೊಂದಿರುವ UNESCO ಮಾನ್ಯತೆ ಪಡೆದ ವಿಶ್ವದ ಏಕೈಕ ಸಂಸ್ಥೆಯಾದ   FIAP  (Federation International de l’Art Photographique) ವತಿಯಿಂದ ಉಡುಪಿಯ ಖ್ಯಾತ ಛಾಯಾಗ್ರಾಹಕ ಫೋಕಸ್ ರಾಘು ಅವರಿಗೆ ಅಂತಾರಾಷ್ಟ್ರೀಯ EFIAP  Distinction  ಗೌರವ ಲಭಿಸಿದೆ.
(Excellence Federation Internationale de l’Art Photographique.) ಈ ಗೌರವ ಲಭಿಸಲು 20ಕ್ಕೂ ಅಧಿಕ ದೇಶಗಳಲ್ಲಿ  ಚಿತ್ರಗಳು ಪ್ರದರ್ಶನಗೊಂಡಿರಬೇಕು. ಕನಿಷ್ಠ ಹೊರಗಿನ 2 ದೇಶ ಗಳಲ್ಲಾದರೂ ಪ್ರಶಸ್ತಿ ಬಂದಿರಬೇಕು ಮತ್ತು ಕನಿಷ್ಠ 250  ಚಿತ್ರಗಳು ಆಯ್ಕೆಗೊಂಡಿರಬೇಕು.
ರಾಘು ಅವರು 25ಕ್ಕೂ ಅಧಿಕ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ.​ ಕರಾವಳಿ ಭಾಗದಲ್ಲಿ ಈ ಗೌರವ ಪಡೆದ ಮೊದಲಿಗರಾಗಿರುವ ರಾಘು ಖ್ಯಾತ ಛಾಯಾಚಿತ್ರಗ್ರಾಹಕ ಗುರುದತ್ ಕಾಮತ್ ಅವರ ಶಿಷ್ಯ.​ 
Nikon ಕ್ಯಾಮೆರಾ ಕಂಪನಿಯು ನಿಕೋನ್ Infulencer  ಆಗಿ ನೇಮಕ ಮಾಡಿ ಹಳ್ಳಿಯ ಪ್ರತಿಭೆಗೆ ಗೌರವ ಕೊಟ್ಟಿದೆ.

​​
 
 
 
 
 
 
 
 
 
 
 

Leave a Reply