ಆಂಧ್ರ ಪ್ರದೇಶ ಫೋಟೋಗ್ರಫಿ ಅಕಾಡೆಮಿ ಹೊರತರಲಿರುವ ದೇಶದ ಪ್ರಸಿದ್ಧ ಛಾಯಾಚಿತ್ರ ಕಲಾವಿದರ ಕೃತಿಗಳಲಲ್ಲಿ “ಆಸ್ಟ್ರಲ್ ಕೊಲಾಜ್ ರೆಸೆಮ್ಬ್ಲಿಂಗ್ ದಿ ಸ್ಟಾರ್ಸ್” ಶೈನಿಂಗ್

ಉಡುಪಿ :ದೇಶದ ಏಕೈಕ ಫೋಟೋಗ್ರಫಿ ಅಕಾಡೆಮಿ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಆಂಧ್ರ ಪ್ರದೇಶ ಫೋಟೋಗ್ರಫಿ ಅಕಾಡೆಮಿ ದೇಶದ ಪ್ರಸಿದ್ಧ ಛಾಯಾಚಿತ್ರ ಕಲಾವಿದರ ಕೃತಿಗಳ        ಪುಸ್ತಕವನ್ನು ತರುತ್ತಿದೆ. 

 ಆ ಸರಣಿಯಲ್ಲಿ ಕರ್ನಾಟಕ ರಾಜ್ಯದ ಏಕೈಕ ಪತ್ರಿಕಾ ಛಾಯಾಗ್ರಾಹಕ  ಉದಯವಾಣಿಯ ಆಸ್ಟ್ರೊ ಮೋಹನ್ ಅವರ ಪುಸ್ತಕ ” ಆಸ್ಟ್ರಲ್ ಕೊಲಾಜ್ ರೆಸೆಮ್ಬ್ಲಿಂಗ್ ದಿ ಸ್ಟಾರ್ಸ್ ” ಪ್ರಕಾಶಿಸಿದೆ. ಆ . 19 ರ ವಿಶ್ವ ಛಾಯಾಗ್ರಹಣ ದಿನದಂದು ಈ ಕೃತಿಗಳನ್ನು ಲೋಕಾರ್ಪಣೆ ಮಾಡಲಿದೆ. 

ಕೆ. ಜಿ. ಮಹೇಶ್ವರಿ ,ಡಾ . ಓ.ಪಿ. ಶರ್ಮಾ , ಶಿವಜೀ , ಮುಖೇಶ್ ಪರ್ಪಿಯಾನಿ ಮೊದಲಾದ ಪ್ರಸಿದ್ಧ ಛಾಯಾಚಿತ್ರ ಕಲಾವಿದರ ಕೃತಿಗಳೂ ಈ ಸರಣಿಯಲ್ಲಿ ಪ್ರಕಟವಾಗುತ್ತಿವೆ. 1965 ರಲ್ಲಿ ಸ್ಥಾಪಿತವಾದ ಆಂಧ್ರ ಪ್ರದೇಶ ಫೋಟೋಗ್ರಫಿ ಅಕಾಡೆಮಿ ಅಂದಿನಿಂದ ಛಾಯಾಚಿತ್ರ ಕಲಾವಿದರ ಒಳಿತಿಗಾಗಿ ಶ್ರಮಿಸುತ್ತಿದೆ.

 
 
 
 
 
 
 
 
 
 
 

Leave a Reply