ಉಡುಪಿ ಜಿಲ್ಲಾ ಯುವಬ್ರಾಹ್ಮಣ ಪರಿಷತ್ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮ

ಉಡುಪಿ ಜಿಲ್ಲಾ ಯುವಬ್ರಾಹ್ಮಣ ಪರಿಷತ್ ವತಿಯಿಂದ ಪರಮಪೂಜ್ಯ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಆಶ್ರಯ ಮತ್ತು ಮಾರ್ಗದರ್ಶನದಲ್ಲಿ ನಡೆಸಲ್ಪಡುತ್ತಿರುವ ಉಡುಪಿ ಕುಕ್ಕಿಕಟ್ಟೆ ಶ್ರೀ ಕೃಷ್ಣ ಬಾಲನಿಕೇತನದ ಅವಕಾಶ ವಂಚಿತ ಮಕ್ಕಳೊಂದಿಗೆ ರಕ್ಷಾಬಂಧನ ಕಾರ್ಯಕ್ರಮವು ಜರುಗಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಗಣಪತಿ ಪ್ರೌಢಶಾಲೆಯ ಸಂಸ್ಕೃತ ಅಧ್ಯಾಪಕರಾದ ಡಾ.ರಾಘವೇಂದ್ರ ರಾವ್ ಇವರು ಸನಾತನ ಸಂಸ್ಕೃತಿ ಮತ್ತು ರಾಷ್ಟ್ರೋನ್ನತಿಯ ಪರಿಕಲ್ಪನೆ ಬಗ್ಗೆ ಉಪನ್ಯಾಸ ನೀಡಿದರು. ಅವಕಾಶ ವಂಚಿತ ಮಕ್ಕಳಿಗೆ ರಕ್ಷಾಬಂಧನ ನೆರವೇರಿಸಲಾಯಿತು. ಶ್ರೀಕೃಷ್ಣ ಬಾಲನಿಕೇತನದ ದಿನನಿತ್ಯದ ಬಳಕೆಗೆ ಬೇಕಾದ ಸುಮಾರು ರೂ. 8,000 ಮೌಲ್ಯದ ಅವಶ್ಯಕ ವಸ್ತುಗಳನ್ನು ಬಾಲನಿಕೇತನದ ಕಾರ್ಯದರ್ಶಿಗಳಾದ ರಾಮಚಂದ್ರ ಉಪಾಧ್ಯಾಯ ಮತ್ತು ಗುರುರಾಜ ಭಟ್ ಇವರಿಗೆ ಹಸ್ತಾಂತರಿಸಲಾಯಿತು.

ವೈವಾಹಿಕ ರಜತ ಸಂಭ್ರಮದ ಪ್ರಯುಕ್ತ ಮಕ್ಕಳಿಗೆ ಒಂದು ದಿನದ ಭೋಜನವನ್ನು ಪ್ರಾಯೋಜಿಸಿದ ಶ್ರೀ ಚೈತನ್ಯ ಎಂ.ಜಿ.ಮತ್ತು ಶ್ರೀಮತಿ ಸುನಿತಾ ಚೈತನ್ಯ ದಂಪತಿಗಳನ್ನು ಪರಿಷತ್ತಿನ ವತಿಯಿಂದ ಮತ್ತು ಬಾಲನಿಕೇತನದ ವತಿಯಿಂದ ಅಭಿನಂದಿಸಲಾಯಿತು. ಮಕ್ಕಳಿಗಾಗಿ ವಿವಿಧ ಮೋಜಿನ ಆಟಗಳನ್ನು ಆಯೋಜಿಸಲಾಯಿತು. ಪರಿಷತ್ತಿನ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಪರಿಷತ್ತಿನ ಅಧ್ಯಕ್ಷ ಶ್ರೀ ಚೈತನ್ಯ ಎಂ.ಜಿ. ಪ್ರಸ್ತಾವನೆಗೈದು ಸ್ವಾಗತಿಸಿದರು.

ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ, ಮುರಳಿದರ ತಂತ್ರಿ, ಲಕ್ಷ್ಮೀನಾರಾಯಣ, ಚಂದ್ರಕಾಂತ ಕೆ.ಎನ್., ಪ್ರಕಾಶ್ ಹೆಬ್ಬಾರ್, ಪ್ರವೀಣ ಉಪಾಧ್ಯ, ಕೇಶವ ರಾವ್, ರಮೇಶ್ ತೀರ್ಥಹಳ್ಳಿ ಸಹಕರಿಸಿದರು. ಕಾರ್ಯದರ್ಶಿ ವಿವೇಕಾನಂದ ಎನ್. ವಂದನಾರ್ಪಣೆಗೈದರು.

 
 
 
 
 
 
 
 
 
 
 

Leave a Reply