ಉಚ್ಚಿಲ ದಸರಾ: ಪುಟಾಣಿ ಶಾರದಾ ಮಾತೆಯರು

ಪಡುಬಿದ್ರಿ: ಉಚ್ಚಿಲದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಉಚ್ಚಿಲ ದಸರಾ ಉತ್ಸವದಲ್ಲಿ ಶುಕ್ರವಾರ ಮುದ್ದು ಮಕ್ಕಳಿಂದ ನಡೆದ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ ವಿಶೇಷ ಆಕರ್ಷಣೆ ಯಾಗಿತ್ತು.ಶಾಲಿನಿ ಜಿ.ಶಂಕರ್ ವೇದಿಕೆಯಲ್ಲಿ ನಡೆದ ಸ್ಪರ್ಧೆಯಲ್ಲಿ 1 ರಿಂದ 5 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ 32 ಮತ್ತು 6 ರಿಂದ 10 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ 40 ಸ್ಪರ್ಧಾಳುಗಳು ಭಾಗವಹಿಸಿದ್ದರು. ವಿದುಷಿ ಗೀತಾ ಸರಳಾಯ, ವಿದುಷಿ ಪ್ರವಿತಾ ಅಶೋಕ್, ವಿದುಷಿ ಜ್ಞಾನ ಐತಾಳ್ ತೀರ್ಪುಗಾರರಾಗಿ ಸಹಕರಿಸಿದರು.

ಒಂದರಿಂದ ಐದು ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ವೈ.ಆರಾಧ್ಯ ಭಟ್ (ಪ್ರಥಮ), ಶಿವಿಕಾ ಡಿಂಪಲ್ (ದ್ವಿತೀಯ), ಸಾನ್ವಿಕಾ ಎಸ್. ಪೂಜಾರಿ (ತೃತೀಯ) ಹಾಗೂ ಆರರಿಂದ ಹತ್ತು ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ತನಿಶಾ ಕೋಡಿಕಲ್ (ಪ್ರಥಮ), ಸನಿಹಾ ಜೆ.ಕೆ. (ದ್ವಿತೀಯ) ಮತ್ತು ಪ್ರಾಪ್ತಿ ಪಿ.ಶೆಟ್ಟಿ (ತೃತೀಯ) ಬಹುಮಾನ ಪಡೆದುಕೊಂಡರು. ವಿಜೇತರಿಗೆ ಕ್ರಮವಾಗಿ ₹10,000, ₹6,000, ₹3,000 ಹಾಗೂ ಎಲ್ಲ ಸ್ಪರ್ಧಾಳುಗಳಿಗೂ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ತಲಾ ₹1 ಸಾವಿರ ಗೌರವಧನ ನೀಡಲಾಯಿತು.

ಉಚ್ಚಿಲ ದಸರಾ ರೂವಾರಿ ಜಿ.ಶಂಕರ್, ಅವರ ಪತ್ನಿ ಶಾಲಿನಿ ಜಿ. ಶಂಕರ್ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು. ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ. ಅಮೀನ್, ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ಮಹಿಳಾ ಸಂಘದ ಅಧ್ಯಕ್ಷೆ ಉಷಾ ರಾಣಿ, ಕಾಪು ನಾಲ್ಕುಪಟ್ಣ ಮೊಗವೀರ ಮಹಾಸಭಾದ ಅಧ್ಯಕ್ಷ ಮನೋಜ್ ಕಾಂಚನ್, ಮಹಿಳಾ ಸಭಾದ ಅಧ್ಯಕ್ಷೆ ಸುಗುಣ ಕರ್ಕೇರ, ಬಡಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್ ಮೆಂಡನ್ ಇದ್ದರು.

ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿ ಸಂಚಾಲಕ ಸತೀಶ್ ಅಮೀನ್ ಪಡುಕೆರೆ ಸ್ವಾಗತಿಸಿ, ವಂದಿಸಿದರು. ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‌ನ ಸಿಬ್ಬಂದಿ ವಿಜೇತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಸುಮಂಗಲೆಯರಿಗೆ ಪ್ರಸಾದ ರೂಪದಲ್ಲಿ ಸೀರೆ: ಲಲಿತಾ ಪಂಚಮಿಯಂದು ಸಾಮೂಹಿಕ ಕುಂಕುಮಾರ್ಚನೆಯಲ್ಲಿ ಪಾಲ್ಗೊಂಡ ಮತ್ತು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುತ್ತಿರುವ ಐದು ಸಾವಿರಕ್ಕೂ ಅಧಿಕ ಮಂದಿ ಸುಮಂಗಲೆಯರಿಗೆ ಜಿ. ಶಂಕರ್ ಮತ್ತು ಶಾಲಿನಿ ಜಿ. ಶಂಕರ್ ದಂಪತಿಯಿಂದ ಪ್ರಸಾದ ರೂಪದಲ್ಲಿ ಸೀರೆ, ವಸ್ತ್ರದಾನ ಸಹಿತವಾಗಿ ಗೌರವಾರ್ಪಣೆ ಸಲ್ಲಿಸಲಾಯಿತು. ದಾನಿಗಳಾದ ವೇದಪ್ರಕಾಶ್ ಎಂ.ಶ್ರೀಯಾನ್ ಮತ್ತು ಕವಿತಾ ವಿ. ಶ್ರೀಯಾನ್ ದಂಪತಿಯನ್ನು ಗೌರವಿಸಲಾಯಿತು.

 
 
 
 
 
 
 
 
 
 
 

Leave a Reply