Janardhan Kodavoor/ Team KaravaliXpress
29.6 C
Udupi
Thursday, January 20, 2022
Sathyanatha Stores Brahmavara

ಮಠಾಧೀಶರುಗಳಿಂದ ಸಂಕಲ್ಪ ಪೂರ್ವಕ ಸಮುದ್ರ ಸ್ನಾನ

ಕಟಪಾಡಿ: ಎಳ್ಳಮಾವಾಸ್ಯೆ ಪ್ರಯುಕ್ತ ಸಮುದ್ರ ಸ್ನಾನಕ್ಕಾಗಿ ಮಟ್ಟು ಕಡಲಕಿನಾರೆಗೆ, ಪಲಿಮಾರು ಹಿರಿಯ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ  ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಸೋದೆ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಆಗಮಿಸಿ ಸಂಕಲ್ಪಪೂರ್ವಕ  ಸಮುದ್ರ ಸ್ನಾನ ಮಾಡಿ ದಂಡೋಧಕ ಹಾಗೂ  ತರ್ಪಣ ನೀಡಿದರು.  
ಆಗಮಿಸಿದ ಸ್ವಾಮೀಜಿಯವರಿಗೆ ಮಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ತಂತ್ರಿಗಳಾದ ಪ್ರವೀಣ ತಂತ್ರಿ,  ಲಕ್ಷ್ಮೀನಾರಾಯಣ ರಾವ್ ಮಟ್ಟು ದೇವಳದ ಅರ್ಚಕರಾದ ಶ್ರೀಕಾಂತ ಅಚಾರ್ಯ, ಚಂದಪ್ಪ ಕೋಟ್ಯಾನ್ ಹಾಗೂ  ಊರಿನ ಗಣ್ಯರು  ಸ್ವಾಗತಿಸಿ ಫಲಪುಷ್ಪದೊಂದಿಗೆ ಮಟ್ಟು ಗುಳ್ಳವನ್ನು ನೀಡಿದರು. ಸ್ಥಳೀಯ ಭಕ್ತರ ಕೋರಿಕೆಯ ಮೇರೆಗೆ ಸ್ವಾಮೀಜಿಯವರು ದೋಣಿಯಲ್ಲಿ  ಕುಳಿತು ವಿಹಾರ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ  ನಯನ ಗಣೇಶ್, ಕೋಟೆ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ  ಗಣೇಶ ಕುಮಾರ್ ಮಟ್ಟು, ಕೋಟೆ ಪಂಚಾಯತ್ ಸದಸ್ಯ ನಾಗರಾಜ್ ಮಟ್ಟು, ರಮೇಶ್ ಪೂಜರಿ, ಪ್ರೇಮ ಕುಂದರ್, ರತ್ನಾಕರ್, ಹಿರಿಯರಾದ ಸದರಾಮ ಮೆಂಡನ್, ಕೇಶವ ಸುವರ್ಣ ಮಟ್ಟು, ಹರ್ಷ ಮಟ್ಟು, ಕರಾವಳಿ ಮಟ್ಟು ವ್ಯಾಪ್ತಿಯ ಭಜನಾ  ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು , ಊರ ಪರಊರಿಂದ ಆಗಮಿಸಿದ  ಭಕ್ತಾಧಿಗಳು ಉಪಸ್ಥಿತರಿದ್ದು  ಈ ಪವಿತ್ರ ಕಾರ್ಯದಲ್ಲಿ ಭಾಗವಹಿಸಿದ್ದರು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!