Janardhan Kodavoor/ Team KaravaliXpress
26.6 C
Udupi
Tuesday, January 31, 2023
Sathyanatha Stores Brahmavara

ನೀಲಾವರ: ಮೊದಲ ಪಂಚಮೀ ತೀರ್ಥ ಸ್ನಾನ 

ಶ್ರೀ ಕ್ಷೇತ್ರ ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದ ಸಮೀಪದ ಸೀತಾ ನದಿಯ ತಟದಲ್ಲಿರುವ ಪ್ರಸಿದ್ಧ ಪಂಚಮಿಕಾನದಲ್ಲಿ ಸೋಮವಾರ  ಮೊದಲ ಪಂಚಮೀ ತೀರ್ಥಸ್ನಾನ ನಡೆಯಿತು. ಶ್ರೀ ಸುಬ್ರಹ್ಮಣ್ಯ ದೇವರ ಉತ್ಸವ ಮೂರ್ತಿಯನ್ನು ದೇವಳದಿಂದ ಪಂಚಮಿಕಾನದ ಬಳಿ ಸೀತಾನದಿಯಲ್ಲಿ ಪವಿತ್ರ ಸ್ನಾನ ಮಾಡಿಸಿ, ಪಂಚಮಿಕಾನದ ನಾಗಸನ್ನಿಧಿಯಲ್ಲಿ ಪೂಜಿಸಲಾಯಿತು.
ಕಾರ್ಯಕ್ರಮದಲ್ಲಿ ಊರಪರವೂರ ನೂರಾರು ಭಕ್ತರು ತೀರ್ಥಸ್ನಾನದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ರಘುರಾಮ ಮಧ್ಯಸ್ಥ, ಅರ್ಚಕ ರಾಘವೇಂದ್ರ ಅಡಿಗ, ಮುಖ್ಯ ಕಾರ್ಯ ನಿರ್ವಹಣಾಧಿ ಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳು, ಅರ್ಚಕ ವೃಂದದವರು, ಚಾಕರಿ ವರ್ಗದವರು, ಸಿಬಂದಿ ವರ್ಗದವರು, ಉಪಸ್ಥಿತರಿದ್ದರು. ನಂತರ ಅನ್ನಸಂತರ್ಪಣೆ ನಡೆಯಿತು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!