ಕಲ್ಯಾಣ್ಪುರ ಧರ್ಮ ಪ್ರಾಂತ್ಯದ ಮಿಲಾಗ್ರೀಸ್ ಕೆಥೆಡ್ರೆಲ್ ನ ವಾರ್ಷಿಕ ಹಬ್ಬ

ಉಡುಪಿ : ಉಡುಪಿ ಕಲ್ಯಾಣ್ಪುರ ಧರ್ಮ ಪ್ರಾಂತ್ಯದ ಮಿಲಾಗ್ರೀಸ್ ಕೆಥೆಡ್ರೆಲ್ ನ ವಾರ್ಷಿಕ ಹಬ್ಬ ವಿಜ್ರಂಭಣೆಯಿಂದ ಮಂಗಳವಾರ ಮತ್ತು ಬುಧವಾರ ನಡೆಯಿತು.ಮ್ಂಟ್ ರೋಜರಿ ಇಗರ್ಜೆಯ ಸಹಾಯಕ ಧರ್ಮ ಗುರು ವಂದನೀಯ ಸ್ಟೀವನ್ ಫೆರ್ನಾಂಡಿಸ್ ಮತ್ತು ಬುಧವಾರ ಮಂಗಳೂರು  ಧರ್ಮಪ್ರಾಂತ್ಯದ ಬೀಜೈ ಇಗರ್ಜಿಯ ಧರ್ಮಗುರು ವಂದನೀಯ ಜೆ. ಬಿ. ಸಲ್ಡಾನ ರವರ ಸಹಭಾಗಿತ್ವದಲ್ಲಿ ಬಲಿಪೂಜೆಯು ವಿಜ್ರಂಭಣೆಯಿಂದ ನಡೆಯಿತು.

ಮಿಲಾಗ್ರಿಸ್ ಕೆಥೆಡ್ರಾಲ್ ನ ರೆಕ್ಟರ್ ವಂದನೀಯ ಗುರುಗಳು ವಲೇರಿಯನ್ ಮೆಂಡೊನ್ಸಾ, ಉಡುಪಿ ಧರ್ಮ ಪ್ರಾಂತ್ಯದ ಕುಲಪತಿ ವಂದನೀಯ ಸ್ಟೇನಿ ಲೋಬೋ ಹಾಗೂ ಕಲ್ಯಾಣ್ಪುರ ವಿಭಾಗದ ಒಂಬತ್ತು ಇಗರ್ಜಿಗಳ ವಂದನೀಯ ಗುರುಗಳು ಹಾಗೂ ಉಡುಪಿ ಮತ್ತು ಮಂಗಳೂರಿನ ಧರ್ಮ ಗುರುಗಳೊಂದಿಗೆ ಹಬ್ಬದ ಆಚಾರಣೆ ವಿಜ್ರಂಭಣೆಯಿಂದ ನಡೆಯಿತು.

 
 
 
 
 
 
 
 
 
 
 

Leave a Reply