ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದಲ್ಲಿ ಅಪರೂಪದ ಗರ್ಭಾಶಯ ಮತ್ತು ಅಂಡಾಶಯದ ಗೆಡ್ಡೆಗಳ ಪ್ರಕರಣಗಳ ಯಶಸ್ಸಿ ನಿರ್ವಹಣೆ

ಮಣಿಪಾಲ:ಇತ್ತೀಚೆಗೆ ಅಪರೂಪದ 2 ಗೆಡ್ಡೆಗಳ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸ ಲಾಯಿತು., ಒಂದು ಗರ್ಭಾಶಯ ಗೆಡ್ಡೆ ಮತ್ತು ಇನ್ನೊಂದು ಅಂಡಾಶಯದ ಗೆಡ್ಡೆಯನ್ನು ಡಾ. ಮುರಳೀಧರ್ ವಿ ಪೈ, ಡಾ. ರೇಖಾ ಉಪಾಧ್ಯಾಯ ಮತ್ತು ತಂಡವು ಯಶಸ್ವಿಯಾಗಿ ನಿರ್ವಹಿಸಿತು.

ಗರ್ಭಾಶಯದ ಗೆಡ್ಡೆ: ಉಂಡು ಮಗುವಿರುವ 42 ವರ್ಷದ ಮಹಿಳೆ ಕಳೆದ 4 ತಿಂಗಳಿಂದ ಹೊಟ್ಟೆ ನೋವು ಮತ್ತು ಹಠಾತ್ ಊತದೊಂದಿಗೆ ವೈದ್ಯರನ್ನು ಬೇಟಿಯಾಗಿದ್ದಳು. ಅವಳು 8 ತಿಂಗಳ ಗರ್ಭಿಣಿಯಾಗಿದ್ದು ಗರ್ಭಾಶಯದ ಗಾತ್ರಕ್ಕೆ ಅನುಗುಣವಾಗಿ ದೊಡ್ಡ ಗರ್ಭಾಶಯದ ಗೆಡ್ಡೆಯನ್ನು ಹೊಂದಿದ್ದಳು.

ಗೆಡ್ಡೆಯ ಬೆಳವಣಿಗೆಯ ವೇಗದಿಂದಾಗಿ ಸರ್ಕೋಮಾ (ಅಪರೂಪದ ಗರ್ಭಾಶಯದ ಕ್ಯಾನ್ಸರ್) ಎಂದು ಶಂಕಿಸಿ ಹೆಚ್ಚಿನ ತಪಾಸಣೆಗೆ ಒಳಪಡಿಸಲಾಯಿತು. ಎಂ ಆರ್ ಐ ಸ್ಕ್ಯಾನ್ ಕ್ಷೀಣಗೊಳ್ಳುವ ಬದಲಾವಣೆಗಳೊಂದಿಗೆ ದೊಡ್ಡ ಗೆಡ್ಡೆ ಇರುವುದನ್ನು ಖಾತ್ರಿಪಡಿಸಿತು. ಸಮಾಲೋಚನೆ ಮತ್ತು ರೋಗಿಯ ಒಪ್ಪಿಗೆಯ ನಂತರ, ಡಾ. ರೇಖಾ ಉಪಾಧ್ಯಾಯ ಅವರು ಕ್ಷೀಣಗೊಳ್ಳುವ ಮತ್ತು ಸಂಭವನೀಯ ಕ್ಯಾನ್ಸರ್ ವಸ್ತುಗಳ ಸೋರಿಕೆ ತಪ್ಪಿಸಲು ಗರ್ಭಾಶಯವನ್ನು ಗೆಡ್ಡೆಯೊಂದಿಗೆ ಹಾಗೆಯೇ ತೆಗೆದುಹಾಕಲಾಯಿತು. ಗೆಡ್ಡೆಯ ತೂಕ 3.1 ಕೆ.ಜಿ. ಇತ್ತು.

ಅಂಡಾಶಯದ ಗೆಡ್ಡೆ: 23 ವರ್ಷದ ಅವಿವಾಹಿತ ಯುವತಿಯು ದೊಡ್ಡ ಅಂಡಾಶಯದ ಗೆಡ್ಡೆಯ ತೊಂದರೆಯೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿದ್ದಳು. ಅವಳ ಚಿಕ್ಕ ವಯಸ್ಸಿನಿಂದಾಗಿ, ಅಪರೂಪದ ಜರ್ಮ್ ಸೆಲ್ ಟ್ಯೂಮರ್ ಇರುವುದನ್ನು ಶಂಕಿಸಲಾಯಿತು ಮತ್ತು ಅದಕ್ಕಾಗಿ ಹೆಚ್ಚಿನ ತಪಾಸಣೆಗೆ ಒಳಪಡಿಸಲಾಯಿತು. ಇತರ ಸ್ಥಳಗಳಿಗೆ ಹರಡದೆ ಒಂದು ಅಂಡಾಶಯಕ್ಕೆ ಸೀಮಿತವಾದ ಘನ ಅಂಡಾಶಯದ ಗೆಡ್ಡೆಯನ್ನು ಎಂ ಆರ್ ಐ ಸ್ಕ್ಯಾನ್ ನಲ್ಲಿ ಪತ್ತೆಹಚ್ಚಲಾಯಿತು.

ಆದ್ದರಿಂದ ಗೆಡ್ಡೆಯೊಂದಿಗಿನ ಒಂದು ಬದಿಯ ಅಂಡಾಶಯವನ್ನು ಡಾ. ರೇಖಾ ಉಪಾಧ್ಯಾಯ ಅವರು ತೆಗೆದು ಹಾಕಿದರು. ಯುವತಿ ಅವಿವಾಹಿತರಾಗಿದ್ದರಿಂದ ಗರ್ಭಾಶಯ ಮತ್ತು ಇತರ ಭಾಗದ ಅಂಡಾಶಯವನ್ನು ಉಳಿಸಿದ್ದಾರೆ. ಇದರಿಂದ ಅವಳು ಮದುವೆಯಾಗಲು ಮತ್ತು ತನ್ನ ಸ್ವಂತ ಮಕ್ಕಳನ್ನು ಹೊಂದಲು ಸಾಧ್ಯವಾಗಲಿದೆ .

ಡಾ. ರೇಖಾ ಉಪಾಧ್ಯಾಯ, ಮುಂಬೈನ ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಸ್ತ್ರೀರೋಗ ಕ್ಯಾನ್ಸರ್ ನಿರ್ವಹಣೆಯ ಬಗ್ಗೆ ತರಬೇತಿ ಪಡೆದಿದ್ದಾರೆ.

ಇದರಿಂದಾಗಿ ಮಹಿಳಾ ಮತ್ತು ಸ್ತ್ರೀ ರೋಗ ವಿಭಾಗದಲ್ಲಿ ಸ್ತ್ರೀರೋಗ ಕ್ಯಾನ್ಸರ್ ಸಂಬಂಧಿತ ಶಸ್ತ್ರ ಚಿಕಿತ್ಸೆಗೆ ಮತ್ತು ನಿರ್ವಹಣೆಗೆ ಉತ್ತಮ ಸೌಲಭ್ಯ ದೊರೆತಂತಾಗಿದೆ. ಅಲ್ಲದೆ ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದಲ್ಲಿ ಮಹಿಳೆಯರ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ ಮತ್ತು ಆರೈಕೆ ನಿರ್ವಹಿಸುವ ತಂಡದ ಸದಸ್ಯೆಯೂ ಆಗಿದ್ದಾಳೆ ಎಂದು ಡಾ. ಮುರಲೀಧರ್ ವಿ ಪೈ, ಪ್ರೊಫೆಸರ್ ಮತ್ತು ಮುಖ್ಯಸ್ಥರು, ಹೆರಿಗೆ ಮತ್ತು ಪ್ರಸೂತಿ ವಿಭಾಗ ಹೇಳಿದರು.

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಪರಿಚಯಿಸಿ ಮತ್ತು ನಿರ್ವಹಿಸಿದ್ದಕ್ಕಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಅವರು ಅಭಿನಂದನೆ ಸಲ್ಲಿಸಿದರು ಮತ್ತು ಇದು ಉಡುಪಿ ಮತ್ತು ನೆರೆಯ ಜಿಲ್ಲೆಗಳಿಗೆ ಹೆಚ್ಚಿನ ಭರವಸೆ ನೀಡುತ್ತದೆ ಎಂದು ಹೇಳಿದರು.

 
 
 
 
 
 
 
 
 
 
 

Leave a Reply