ಕೊಡವೂರು ಬ್ರಾಹ್ಮಣ ಮಹಾಸಭಾದ ಹೊಸ ವರುಷ 2021ರ ದಿನದರ್ಶಿಕೆ ಬಿಡುಗಡೆ

ದಿನದರ್ಶಿಕೆ ಎಂದರೆ ದಿನದ ಕರ್ತೃ ದಿನಕರನ 24 ಗಂಟೆಗಳ ಚಲನೆಯಿಂದ ಆಗುವಂತಹ ವಿಶೇಷತೆಯನ್ನು ತೋರಿಸುವ ಸಾಧನ. ರಾಶಿ, ಮಾಸ, ಸಂವತ್ಸರಗಳಿಗೆ ಕಾರಣನಾದ ಸೂರ್ಯನ ಚಲನೆಯನ್ನು ಮೂಲವಾಗಿಟ್ಟು ಕೊಂಡು ಉತ್ಸವಗಳು, ಪರ್ವಾಕಾಲಗಳು, ಹಬ್ಬಗಳು, ವಿಶೇಷ ದಿನಗಳನ್ನು ನಾವು ಆಚರಿಸುತ್ತಿದ್ದು ಇವೆಲ್ಲವುಗಳ ಸಮಗ್ರ ಮಾಹಿತಿಯನ್ನೊಳಗೊಂಡ ಪಂಚಾಂಗದಂತಹ ಕೈಪಿಡಿಗಳು ದಿನದರ್ಶಿಕೆ ಎಂದು ಕರೆಯಲ್ಪಡುತ್ತದೆ ಎಂದು ಪೂರ್ಣಪ್ರಜ್ಞ ವಿದ್ಯಾಪೀಠದ ಸಂಶೋಧಕ ಶ್ರೀಕಾಂತ ಆಚಾರ್ಯ ಅಭಿಪ್ರಾಯಪಟ್ಟರು.

ಕೊಡವೂರು ಬ್ರಾಹ್ಮಣ ಮಹಾಸಭಾದ ವಿಪ್ರಶ್ರೀ ಸಭಾಂಗಣದಲ್ಲಿ ದಿನದರ್ಶಿಕೆ ಬಿಡುಗಡೆ ಸಂದರ್ಭದಲ್ಲಿ 
ಮಾತನಾಡಿದ ಅವರು ಕಳೆದ ಕೆಲವು ವರ್ಷಗಳಿಂದ ಕೊಡವೂರು ಬ್ರಾಹ್ಮಣ ಮಹಾಸಭಾದಿಂದ ಬಿಡುಗಡೆ ಗೊಳ್ಳುವ ದಿನದರ್ಶಿಕೆ ಕೇವಲ ತಾರೀಕು, ವಾರ, ತಿಂಗಳು ತೋರಿಸುವ ಕ್ಯಾಲೆಂಡರ್ ಆಗದೆ ವಿಶೇಷ ದಿನಗಳ ಸಮಗ್ರ ಮಾಹಿತಿ ಹೊತ್ತ ದಿನದರ್ಶಿಕೆ ಆಗಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮಂಜುನಾಥ ಉಪಾಧ್ಯಾಯರು ದಿನದರ್ಶಿಕೆ ಬಿಡುಗಡೆ ಗೊಳಿಸಿ ಶುಭಹಾರೈಸಿದರು. ದಿನದರ್ಶಿಕೆ ವಿನ್ಯಾಸಗೊಳಿಸಿದ ಪೂರ್ಣಿಮ ಜನಾರ್ಧನ್ ರವರಿಗೆ ಮೊದಲ ಪ್ರತಿ ನೀಡಿ ಗೌರವಿಸಲಾಯಿತು. ಜಾಹೀರಾತು ನೀಡಿ ಸಹಕರಿಸಿದ ವಿಪ್ರ ಸದಸ್ಯರನ್ನು ಅಭಿನಂದಿಸಲಾಯಿತು.

ಕೊಡವೂರು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ನಾರಾಯಣ ಬಲ್ಲಾಳ್ ಸ್ವಾಗತಿಸಿ ಪ್ರಸ್ತಾವನೆಯ ಮಾತು ಗಳನ್ನಾಡಿದರು. ಗೌರವಾಧ್ಯಕ್ಷರಾದ ಗೋವಿಂದ ಐತಾಳ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಶ್ರೀನಿವಾಸ್ ಬಾಯರಿ ಧನ್ಯವಾದವಿತ್ತರು. ಭಾರತಿ ಸುಬ್ರಹ್ಮಣ್ಯ ನಿರೂಪಿಸಿದರು.

 
 
 
 
 
 
 
 
 
 
 

Leave a Reply