ಉಪ್ಪುಂದ : ವೇದ ಪಾರಾಯಣ ಮತ್ತು ಸೂಕ್ತಗಳ ಪಠಣ

ಸೂರ್ಯ ಸಿದ್ಧಾಂತ ಫೌಂಡೇಶನ್, ಪಂಚಾಂಗ ಮಂದಿರ ಮೊಗೇರಿ,ಕೆರ್ಗಾಲು ಇದರ ಸಂಚಾಲಕರೂ ಪಂಚಾಂಗ ಕರ್ತರೂ ಆದ ಶೀಮತಿ ಅನುಪಮ ಮತ್ತು ಶ್ರೀ ಜನಾರ್ದನ ಅಡಿಗ ಇವರ ಪ್ರಾಯೋಜನೆಯಲ್ಲಿ ಜು.23 ರಂದು ಉಪ್ಪುಂದ ಶಂಕರ ಕಲಾಮಂದಿರದಲ್ಲಿ ವೇದಮೂರ್ತಿ ವಾಸುದೇವ ಐತಾಳ್ ಉಳ್ಳೂರು,ಮತ್ತು ವೇದಮೂರ್ತಿ ಜೋಶಿ ರಾಮಕೃಷ್ಣ ಕಾರಂತ್ ಕಿರಿಮಂಜೇಶ್ವರ ಇವರ ನೇತ್ರತ್ವ ಮತ್ತು ಋತ್ವಿಜರ ಸಮಾಗದಲ್ಲಿ ಪುರಷೋತ್ತಮ (ಅಧಿಕ)ಮಾಸದ ಅಂಗವಾಗಿ ವೇದ ಪಾರಾಯಣ ಮತ್ತು ಸೂಕ್ತಗಳ ಪಠಣ ನಡೆಯಿತು.

ಆರಂಭದಲ್ಲಿ ಸಾಹಿತಿ, ಆಧ್ಯಾತ್ಮಿಕ ಚಿಂತಕರ,ಖ್ಯಾತ ವಾಗ್ಮಿಗಳೂ ಆದ ಉಪ್ಪುಂದ ಚಂದ್ರಶೇಖರ ಹೊಳ್ಳರು

ಕಾರ್ಯಕ್ರವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.ಅವರು ಮಾತನಾಡಿ; ಮೊಗೇರಿ ಜನಾರ್ದನ ಅಡಿಗರು ಈಗಾಗಲೇ ಹಲವಾರು ಸಭೆಗಳನ್ನು ಆಯೋಜಿಸಿ,ಸಂಘ ಸಂಸ್ಥೆಗಳಿಂದ ಗುರತಿಸಲ್ಪಟ್ಟಿದ್ದಾರೆ ಎಂದು ಕಾರ್ಯಕ್ರಮಕ್ಕೆ ಶುಭಕೋರಿದರು.ಜೋಶಿ ರಾಮಕೃಷ್ಣ ಕಾರಂತರು ವೇದ ಪಾರಾಯಣ ಪಠಣ ಮಾಡುವುದರಿಂದ ಹಾಗೂ ಆಲಿಸುವುದರಿಂದ ಆಸ್ತಿಕರಿಗೆ ಆಗಬಹುದಾದ ಸತ್ಫಲಗಳ ಕುರಿತು ಮಾತನಾಡಿದರು.ವೇ.ಮೂ.ವಾಸುದೇವ ಐತಾಳರು ವೇದಪಾರಾಯಣ ಸೂಕ್ತಪಠಣದ ಮಹತ್ವ ಉಲ್ಲೇಖಿಸಿ,

ಅಧಿಕ ಮಾಸದ ವಿವರಣೆ ಮತ್ತು ವಿಷೇಶತೆಯನ್ನು ತಿಳಿಸಿದರು.ಕೊನೆಯಲ್ಲಿ ಮೊಗೆರಿ ಜನಾರ್ದನ ಅಡಿಗರು ವಿಪ್ರವೃಂದದವರಿಗೆ ಗೌರವಿಸಿ, ಎರಡು ಸಂವತ್ಸರ ಗಳನ್ನು ಕ್ರಮಿಸಿ 122 ನೇ ವರುಷದ ಪಂಚಾಂಗ ಪ್ರಕಟಣೆ ಹಾಗೂ 11 ನೇ ವರ್ಷದ ಅಂತರ್ಜಾಲ ಆವೃತ್ತಿಯ ನೆನಪಿಗಾಗಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ,ತನ್ನ ಅಜ್ಜ ದಿ ಪದ್ಮನಾಭ ಅಡಿಗ ,ತಂದೆ ದಿ.ಶಂಕರನಾರಾಯಣ ಅಡಿಗ ಹಾಗೂ ಮೊಗೇರಿ ಅಡಿಗರ ಮನೆತನದ ಪೂರ್ವಜರನ್ನು ಸ್ಮರಿಸಿ, ಅವರ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ಮೊಗೇರಿ ಪಂಚಂಗವು ಕಾಲಕಾಲಕ್ಕೆ ನಾವೀನ್ಯತೆಯೊಂದಿಗೆ ಪ್ರಕಟಗೊಂಡು ಮುಂದುವರಿಯುತ್ತಿದೆ ಎಂದರು.ಕಾರ್ಯಕ್ರಮದ ಕೊನೆಯಲ್ಲಿ ಲಘು ಉಪಹಾರದೊಂದಿಗೆ ಸರ್ವರಿಗೂ ಉಪಚರಿಸಿದರು.

ವರದಿ: ಕೆ.ಪುಂಡಲೀಕ ನಾಯಕ್, ನಾಯ್ಕನಕಟ್ಟೆ

 
 
 
 
 
 
 
 
 
 
 

Leave a Reply