ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಇಂಟರಾಕ್ಟ್ ಕ್ಲಬ್‌ನ ಪದಗ್ರಹಣ

ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ನಡೆದ ಇಂಟರಾಕ್ಟ್ ಕ್ಲಬ್ 2023-24ರ ಪದಗ್ರಹಣ ಸಮಾರಂಭವನ್ನು ಶಾಲಾ ಸಂಚಾಲಕರಾದ ಶ್ರೀ ಕೆ ಅಣ್ಣಪ್ಪ ಶೆಣೈಯವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಉಡುಪಿ ರೋಟರಿ ಅಧ್ಯಕ್ಷೆ ದೀಪ ಭಂಡಾರಿ ಇಂಟರಾಕ್ಸ್ ಕ್ಲಬ್ ನೂತನ ಅಧ್ಯಕ್ಷ ರಜತ್ ಜಿ ರಾವ್‌ನಿಗೆ ಕಾಲರಿಂಗ್ ಮಾಡಿ ಸುತ್ತಮುತ್ತಲಿನವರಿಗೆ ಸಹಾಯ ಮಾಡುವ ಮನೋಬಾವವನ್ನು ಬೆಳೆಸಿಕೊಳ್ಳಬೇಕು ಇದರಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವು ಬೆಳೆಯುತ್ತದೆ. ಎಂದು ನೂತನ ತಂಡವನ್ನು ಅಭಿನಂದಿಸುತ್ತಾ ಹೇಳಿದರು.

ಉಡುಪಿ ಯೂತ್ ಸರ್ವೀಸ್ ಡೈರೆಕ್ಟರ್ ಆದ ಹೇಮಂತ್ ಯು ಕಾಂತ್ ಉಪಸ್ಥಿತರಿದ್ದು ಜೀವನಕ್ಕೆ ಬೇಕಾದ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ರೋಟರಿಯ ಕಾರ್ಯದರ್ಶಿ ಶ್ರೀಮತಿ ಶುಭ ಬಾಸಿ ರೊ| ದಿನೇಶ್ ಭಂಡಾರಿ ಉಪಸ್ಥಿತರಿದ್ದರು. ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ.ಕೆ.ವಿನಾಯಕ ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಶ್ಯಾ, ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಕೆ. ರತ್ನಾಕರ ಶೆಣೈ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ದಿನೇಶ್ ಹೆಗ್ಡೆ ಆತ್ರಾಡಿ ಹಾಗೂ ಇಂಟರಾಕ್ಸ್ ಕ್ಲಬ್ ಶಾಲಾ ಸಂಯೋಜಕಿ ಶ್ರೀಮತಿ ಶಿಲ್ಪಾ ಕಾಮತ್ ಉಪಸ್ಥಿತರಿದ್ದರು.

ಇಂಟರಾಕ್ಟ್ ಕ್ಲಬ್‌ನ ನಿರ್ಗಮನ ಅಧ್ಯಕ್ಷ ನಮನ್ ಕಾರಂತ್ ಸ್ವಾಗತಿಸಿ, ನೂತನ ಅಧ್ಯಕ್ಷ ರಜತ್ ಜಿ ರಾವ್ ಸದಸ್ಯರನ್ನು ಪರಿಚಯಿಸಿದರು. ಕು.ಧರಿತ್ರಿ ಭಟ್ ವರದಿಯನ್ನು ವಾಚಿಸಿದರು. ಶ್ರಾವ್ಯ ಮತ್ತು ತಂಡ ಪ್ರಾರ್ಥಿಸಿ, ಕು. ದೀಕ್ಷಾ ಕಾರ್ಯಕ್ರಮವನ್ನು ನಿರೂಪಿಸಿ, ಕು. ಧನ್ವಿ ವಂದಿಸಿದರು.

 
 
 
 
 
 
 
 
 
 
 

Leave a Reply