ದೇಶದಲ್ಲಿ ಕರೊನಾ ಸೋಂಕು ಹೆಚ್ಚಾಗುತ್ತಿರುವ ನಡುವೆಯೇ ಕೇಂದ್ರ ಸರ್ಕಾರ ಸಪ್ಟೆಂಬರ್ 1ರಿಂದ ಹೊಸ ಅನ್ಲಾಕ್ 4.0 ಘೋಷಿಸಲಿದೆ. ಮೆಟ್ರೋಗೆ ಹಸಿರು ನಿಶಾನೆ ಸಿಗುವ ಸಾಧ್ಯತೆಗಳಿದ್ದು, ಶಾಲಾ- ಕಾಲೇಜುಗಳ ಪುನರಾರಂಭದ ಬಗ್ಗೆ ತೀರ್ಮಾನ ಪ್ರಕಟಿಸುವ ನಿರೀಕ್ಷೆ ಇದೆ. ಜಗತ್ತಿನ ಹಲವೆಡೆ ಕೆಲ ನಿರ್ಬಂಧಗಳೊಂದಿಗೆ ಶಿಕ್ಷಣ ಸಂಸ್ಥೆಗಳ ಪುನಾರಂಭಕ್ಕೆ ಅವಕಾಶ ನೀಡಲಾಗಿದೆ.
ಕರ್ನಾಟಕದಲ್ಲೂ ಪದವಿ ಕೋರ್ಸ್ಗಳ ಆನ್ಲೈನ್ ಕ್ಲಾಸ್ ಮಂಗಳವಾರದಿಂದ ಆರಂಭವಾಗಲಿದೆ, ಅಕ್ಟೋಬರ್ನಲ್ಲಿ ಭೌತಿಕ ತರಗತಿಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ವಿದೇಶಿ ವಿದ್ಯಾರ್ಥಿಗಳು ಹಾಗೂ ಬೋಧಕರು ಆಯಾ ಸಂಸ್ಥೆಗಳಿಂದ ಸೂಚನೆ ದೊರೆಯದಿದ್ದಲ್ಲಿ ಆಗಮಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆಯಂತೆ