ಪಾಹಿ ಎಂದು ಬಂದವರನ್ನು ರಾಮ ಯಾವತ್ತೂ ಕೈಬಿಡುವುದಿಲ್ಲ.

ಜನವರಿ 22, 2024ರ ಇಂದುವಾರ ರೋಹಿಣಿ ನಕ್ಷತ್ರದ ಶುಭ ಘಳಿಗೆಯಲ್ಲಿ ಅಯೋಧ್ಯೆಯಲ್ಲಿ ಇಡೀ ಭೂಮಂಡಲವೇ ಕಾತುರದಿಂದ ಕಾಯುತ್ತಿದ್ದ ಶ್ರೀ ಬಾಲರಾಮನ ಪ್ರಾಣಪ್ರತಿಷ್ಟೆ, ಪಟ್ಟಾಭಿಷೇಕ ನಡೆಯುತ್ತಿರುವಾಗ ನಮ್ಮ ದೇಶದ ಮೂಲೆ ಮೂಲೆಗಳಲ್ಲೂ ಈ ಸಂಭ್ರಮವನ್ನು ಭಕ್ತವೃಂದ ಆಚರಿಸುತ್ತಿತ್ತು.

ಈ ನಿಟ್ಟಿನಲ್ಲಿ ಉಡುಪಿ ಜಿಲ್ಲಾಯುವ ಬ್ರಾಹ್ಮಣ ಪರಿಷತ್ ರಿ. ಮತ್ತು ತುಶಿಮಾಮ ರಿ. ಉಡುಪಿ ಸಂಸ್ಥೆಗಳು ಜಂಟಿಯಾಗಿ ಸಾಯಂಕಾಲ ಶ್ರೀರಾಮ ದೀಪೋತ್ಸವವನ್ನು ಬಹಳ ಭಕ್ತಿ ಶ್ರದ್ದೆಯಿಂದ ಆಚರಿಸಿದವು. ಉಡುಪಿಯ ಹೆಸರಾಂತ ವಿದ್ವಾಂಸರಾದ ವಾಗೀಶ ಆಚಾರ್ಯರು ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜೀವನ ಚರಿತ್ರೆಯ ಬಗ್ಗೆ ಆದರ್ಶಗಳ ಬಗ್ಗೆ ಬಹಳಷ್ಟು ಮಾಹಿತಿ ನೀಡಿದರು. ಪಾಹಿಮಾಂ ಎಂದು ಬಂದವರಿಗೆ ಸದಾ ರಕ್ಷಣೆಯನ್ನು ನೀಡುತ್ತಿದ್ದ ಶ್ರೀರಾಮ ಸುಗ್ರೀವ ವಿಭೀಷಣರನ್ನು ಪೊರೆದ. ವಾಲಿ ಜಟಾಯುವಿಗೆ ಮೋಕ್ಷವನ್ನು ಕರುಣಿಸಿದ.

 

ಹನುಮಂತ ತಂದ ಸಂಜೀವಿನಿ ಪರ್ವತಕ್ಕೆ ಜೀವ ಕಳೆ ತಂದು ಮೂರ್ಚೆ ಹೋಗಿದ್ದ ಅಸಂಖ್ಯ ವಾನರಸೇನೆಗೆ ಮರುಜೀವ ನೀಡಿದ, ಶತ್ರುಗಳನ್ನು ರಾಕ್ಷಸರನ್ನು ನಿಗ್ರಹಿಸಿದ ಶ್ರೀರಾಮ. ಹೀಗೆ ಶ್ರೀರಾಮನ ಲೀಲೆಗಳು ಅಪಾರ. ಅವನೇ ನಮ್ಮೆಲ್ಲರನ್ನು ಸದಾ ಪೊರೆಯುವ ಜಗತ್ ರಕ್ಷಕ ಎಂದು ಬಣ್ಣಿಸಿದರು. ನಂತರ ಉಡುಪಿಯ ಖ್ಯಾತ ಗಾಯಕಿ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪ್ರಶಸ್ತಿ ವಿಜೇತೆ ಶ್ರೀಮತಿ ಉಷಾ ಹೆಬ್ಬಾರ್ ಮತ್ತು ತಂಡದವರಿಂದ ಶ್ರೀರಾಮನ ಭಜನಾ ಕಾರ್ಯಕ್ರಮ ಸುಂದರವಾಗಿ ಮೂಡಿಬಂತು. ಈ ಭಜನೆಗೆ ಭಕ್ತ ವೃಂದ ಹೆಜ್ಜೆ ಹಾಕಿ ನಲಿಯಿತು.

 

ತದ ನಂತರ ಹಣತೆಯ ದೀಪಗಳನ್ನು ಹಚ್ಚುವ ಮೂಲಕ ಶ್ರೀರಾಮ ದೀಪೋತ್ಸವ ದ ದೀಪಾಲಂಕಾರ ಕಾರ್ಯಕ್ರಮದ ಕಳೆ ಹೆಚ್ಚಿಸಿತು. ನಂತರ ಚಂಡೆ ಮತ್ತು ಮಂಗಳವಾದ್ಯಗಳ ಮೂಲಕ ಶ್ರೀ ಸೀತಾರಾಮರಿಗೆ ಋತ್ವಿಜರಾದ ರಮೇಶ್ ಭಟ್ ರವರ ನೇತೃತ್ವದಲ್ಲಿ ಪೂಜಾವಿಧಿ ಮಂಗಳಾರತಿ ಬೆಳಗಲಾಯಿತು. ಈ ಸಂದರ್ಭದಲ್ಲಿ ಸುಡು ಮದ್ದುಗಳನ್ನೂ ಸಿಡಿಸಲಾಯಿತು. ಋತ್ವಿಜರಾದ ಕೊರಂಗ್ರಪಾಡಿ ಕೃಷ್ಣಮೂರ್ತಿ ಆಚಾರ್ಯರು ದೀಪೋತ್ಸವದ ಫಲದ ಬಗ್ಗೆ ಮಂತ್ರಮುಖೇನ ತಿಳಿ ಹೇಳಿದರು. ಈ ಮೂಲಕ ಅಯೋಧ್ಯೆಯ ಮೆರುಗನ್ನು ಸಂಭ್ರಮವನ್ನು ಬ್ರಾಹ್ಮೀ ಸಭಾಭವನದಲ್ಲಿ ನಡೆದ ಈ ಶ್ರೀರಾಮ ದೀಪೋತ್ಸವ ಕಾರ್ಯಕ್ರಮದ ಮೂಲಕ ಜನರು ಕಣ್ಮನಗಳನ್ನು ತುಂಬಿಕೊಂಡರು.

ಈ ಅದ್ದೂರಿಯ ಕಾರ್ಯಕ್ರಮದ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷ ಶ್ರೀ ಚಂದ್ರಕಾಂತ್ ಕೆಎನ್ ಪ್ರಧಾನ ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ ಕೋಶಾಧ್ಯಕ್ಷ ಕುಮಾರಸ್ವಾಮಿ ಉಡುಪ ತುಶಿಮಾಮ ಉಡುಪಿಯ ಅಧ್ಯಕ್ಷ ರವಿಪ್ರಕಾಶ್ ಭಟ್ ಕಾರ್ಯದರ್ಶಿ ಜಯರಾಮ ಆಚಾರ್ಯ ಹಾಗೂ ರಘುಪತಿ ರಾವ್, ವಿಷ್ಣು ಪಾಡಿಗಾರ್, ವಿವೇಕಾನಂದ, ಚೈತನ್ಯ ಎಂ.ಜಿ., ಜನಾರ್ದನ ಕೊಡವೂರು ಮತ್ತು ಸಂಸ್ಥೆಗಳ ಬಹಳಷ್ಟು ಸದಸ್ಯರು ಆಹ್ವಾನಿತರು ಈ ಕಾರ್ಯಕ್ರಮದಲ್ಲಿ ಹಾಜರಿದ್ದು ಸಮಾರಂಭಕ್ಕೆ ಮೆರುಗು ನೀಡಿದರು. ಬಂದ ಎಲ್ಲ ಶ್ರೀರಾಮನ ಭಕ್ತರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

 
 
 
 
 
 
 
 
 
 
 

Leave a Reply