ಹಿಜಾಬ್ ವಿವಾದದಲ್ಲಿ ಸಿದ್ಧರಾಮಯ್ಯ, ಮೆಹಬೂಬ ಮುಫ್ತಿ ಬಿಟ್ಟಿ ಉಪದೇಶದ ಅಗತ್ಯವಿಲ್ಲ : ಯಶ್ ಪಾಲ್ ಸುವರ್ಣ

ಕರಾವಳಿ ಜಿಲ್ಲೆಯ ಕಾಲೇಜುಗಳಲ್ಲಿ ಮತೀಯವಾದಿ ಸಂಘಟನೆಗಳ ಪ್ರಾಯೋಜಕತ್ವದಲ್ಲಿ ಒಂದು ತಿಂಗಳಿಂದ ಸೃಷಿಯಾಗಿರುವ ಹಿಜಾಬ್ ವಿವಾದದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಮೆಹಬೂಬ್ ಮುಫ್ತಿ ಯವರ ಬಿಟ್ಟಿ ಉಪದೇಶದ ಅಗತ್ಯವಿಲ್ಲ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.
 ಸದಾ ಅಲ್ಪಸಂಖ್ಯಾತರ ಓಲೈಕೆಗಾಗಿ ಹಿಂದುತ್ವ ಹಾಗೂ ಹಿಂದೂ ಕಾರ್ಯಕರ್ತರನ್ನು ಟೀಕಿಸುವುದನ್ನೇ ಚಟವಾಗಿರಿಸಿ ಕೊಂಡಿರುವ ಸಿದ್ದರಾಮಯ್ಯ, ಕಾಶ್ಮೀರದಲ್ಲಿ ಮುಖ್ಯಮಂತ್ರಿಯಾಗಿ ಶರಿಯಾ ಕಾನೂನಿನನಂತೆ ಮಹಿಳೆಯರ ಹಕ್ಕುಗಳನ್ನು ದಮನಗೊಳಿಸಿ ಆಡಳಿತ ನಡೆಸಿದ್ದ ಮೆಹಬೂಬ ಮುಫ್ತಿ ಈ ಹಿಜಾಬ್ ವಿವಾದದ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಲು ಯತ್ನಿಸುತ್ತಿದ್ದಾರೆ.
ತನ್ನ ಅಧಿಕಾರಾವಧಿಯಲ್ಲಿ ಸಾಲು ಸಾಲು ಹಿಂದೂ ಕಾರ್ಯಕರ್ತರ ಕಗ್ಗೊಲೆಯಾದಾಗ ದಿವ್ಯ ಮೌನ ತಾಳಿದ್ದ ಸಿದ್ದ ರಾಮಯ್ಯ ಇದೀಗ ಹಿಜಾಬ್ ಪರ ವಕಾಲತ್ತು ವಹಿಸಿ ಕರಾವಳಿ ಜಿಲ್ಲೆಯಲ್ಲಿ ಉಂಟಾಗಿರುವ ವಿವಾದದ ಬೆಂಕಿಗೆ ತುಪ್ಪ ಸುರಿಯುವಲ್ಲಿ ಮಗ್ನರಾಗಿದ್ದಾರೆ.
 ಇತ್ತೀಚಿಗೆ ಸಮಾರಂಭದಲ್ಲಿ ಕೇಸರಿ ಪೇಟವನ್ನು ಕಿತ್ತೆಸಿದಿದ್ದ ಸಿದ್ದರಾಮಯ್ಯಗೆ ಹಿಜಾಬ್ ಬಗ್ಗೆ ಮಾತ್ರ ಅತೀವ ಮೋಹ ಉಂಟಾಗಿದ್ದು, ಈ ಧೋರಣೆಯಿಂದಲೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರಾವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಿರುವುದನ್ನು ಮರೆತಂತಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯಲ್ಲಿ ಬಹುಮತಗಳಿಸಿ ಚುನಾಯಿತರಾದ ಶಾಸಕರಿಗೆ ಸಮವಸ್ತ್ರ ಕಡ್ಡಾಯ ಮಾಡಲು ಶಾಸಕ ರಘುಪತಿ ಭಟ್ ಯಾರು ಎಂದು ಏಕವಚನದಲ್ಲಿ ಕೇಳುವ ಸಿದ್ದರಾಮಯ್ಯ, ಕಾಲೇಜಿನಲ್ಲಿ ಸಮಾನತೆಯ ದೃಷ್ಟಿಯಿಂದ ಬಡವ ಶ್ರೀಮಂತರೆಂಬ ಭೇದವಿಲ್ಲದೆ ವಿದ್ಯಾರ್ಥಿಗಳು ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸಲು ಪೂರಕ ವಾತಾವರಣ ನಿರ್ಮಿಸಲು ಸಮವಸ್ತ್ರ ಅಗತ್ಯವಿದೆ ಎಂಬ ಸಾಮಾನ್ಯ ಜ್ಞಾನ  ಕೂಡಾ ಮಾಜಿ ಮುಖ್ಯಮಂತ್ರಿಗೆ ಇಲ್ಲದಿರುವುದು  ದುರದೃಷ್ಟಕರ..
ನರೇಂದ್ರ ಮೋದಿಯವರ ಜನಪರ ಆಡಳಿತ, ರಾಷ್ಟ್ರೀಯವಾದಿ ಚಿಂತನೆ, ದೇಶದ ಆರ್ಥಿಕ ವ್ಯವಸ್ಥೆ ಹಾಗೂ ದೇಶದ ಸರ್ವಾಂಗೀಣ ಅಭಿವೃದ್ಧಿಯಿಂದ ಹತಾಶರಾಗಿರುವ ಮತಾಂಧ ರಾಷ್ಟ್ರವಿರೋಧಿ ಶಕ್ತಿಗಳು ದೇಶದಾದ್ಯಂತ ಶಾಂತಿ ಸುವ್ಯವಸ್ಥೆಯನ್ನು ಕದಡಿಸುವ ಹುನ್ನಾರದ ಭಾಗವಾಗಿ ಕರಾವಳಿ ಜಿಲ್ಲೆಗಳಲ್ಲಿ ಹಿಜಾಬ್ ವಿವಾದ ಆರಂಭಗೊಂಡಿದ್ದು, ಕಮ್ಯುನಿಸ್ಟ್ ಸರಕಾರದ ಕೇರಳದಲ್ಲಿ ಹಿಜಾಬ್ ನಿಷೇಧಿಸಿದಾಗ ಮೌನವಾಗಿ ಬಾಲಮುದುರಿಕೊಂಡಿರುವ ಈ  ಸಂಘಟನೆಗಳು ಕರ್ನಾಟಕದಲ್ಲಿ ಮಾತ್ರ ಪೌರುಷ ಪ್ರದರ್ಶನಕ್ಕೆ ಮುಂದಾಗಿರುವ ಹಿಂದಿನ ಷಡ್ಯಂತ್ರ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಬೆರಳೆಣಿಕೆಯ ವಿದ್ಯಾರ್ಥಿಗಳಿಂದ ಸೃಷ್ಟಿಯಾದ ಹಿಜಾಬ್ ವಿವಾದದಲ್ಲಿ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಸಮಸ್ಯೆ ಉದ್ಭವಿಸಿದ್ದು ಶಿಕ್ಷಣ ವಿಚಾರದಲ್ಲಿ ವಿಶ್ವದಲ್ಲೇ ಹೆಸರುವಾಸಿಯಾಗಿರುವ ಕರಾವಳಿ ಜಿಲ್ಲೆಯ ಘನತೆಗೆ ಧಕ್ಕೆ ತರಲು ವ್ಯವಸ್ಥಿತ ಯೋಜನೆ ರೂಪಿಸಿರುವ ಮತೀಯವಾದಿ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವ ಸಿದ್ದರಾಮಯ್ಯಗೆ ಕರಾವಳಿಯ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
 
 
 
 
 
 
 
 
 
 

Leave a Reply