ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕಿನ 2020-21ನೇ ಸಾಲಿನಲ್ಲಿ 2227.65 ಕೋಟಿ ವ್ಯವಹಾರ

????????????????????????????????????
ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕಿನ 109ನೇ ವಾರ್ಷಿಕ ಸಾಮಾನ್ಯ ಮಹಾಸಭೆಯು  ಉಡುಪಿ ಕುಂಜಿಬೆಟ್ಟಿನಲ್ಲಿರುವ ಶಾರದಾ ಕಲ್ಯಾಣ ಮಂಟಪದಲ್ಲಿ  ಜರಗಿತು. ಬ್ಯಾಂಕಿನ ವಾರ್ಷಿಕ ಸಾಮಾನ್ಯ ಮಹಾಸಭೆಗೆ ಅಧ್ಯಕ್ಷರಾದ ಶ್ರೀ ಎಚ್. ಜಯಪ್ರಕಾಶ್ ಕೆದ್ಲಾಯರವರು ಅಧ್ಯಕ್ಷತೆ ವಹಿಸಿ ಸದಸ್ಯರನ್ನು ಸ್ವಾಗತಿಸಿ ಬ್ಯಾಂಕಿನ ಪ್ರಗತಿಯ ಬಗ್ಗೆ ಪ್ರಸ್ತಾವನೆಗೈದು ವರದಿ ವಾಚಿಸಿದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಎಸ್.  ಕುಮಾರಸ್ವಾಮಿ ಉಡುಪರವರು ಸಾಮಾನ್ಯ ಮಹಾಸಭೆಯ ನಡವಳಿಯನ್ನು ಮಂಡಿಸಿದರು.

2020- 21ನೇ ಸಾಲಿನಲ್ಲಿ ಬ್ಯಾಂಕ್ `2227.65 ಕೋಟಿ ವ್ಯವಹಾರ ಮಾಡಿದ್ದು ಕಳೆದ ಸಾಲಿಗೆ ಹೋಲಿಸಿ ದಲ್ಲಿ ವ್ಯವಹಾರದಲ್ಲಿ ಶೇ.6.68 ಹೆಚ್ಚಳ ವಾಗಿರುತ್ತದೆ. ವರದಿ ಸಾಲಿನಲ್ಲಿ ಬ್ಯಾಂಕಿನ ಒಟ್ಟು ಠೇವಣಿ ಸಂಗ್ರ ಹಣೆಯ ಮೊತ್ತ 236.59 ಕೋಟಿ ಆಗಿದ್ದು ಒಟ್ಟು `167.10 ಕೋಟಿ ಸಾಲ ಹೊರ ಬಾಕಿ ಇರುತ್ತದೆ. 
85.86 ಕೋಟಿ ಹೂಡಿಕೆಗಳಲ್ಲಿ ತೊಡಗಿಸಿದ್ದು 268.36 ಕೋಟಿ ದುಡಿಯುವ ಬಂಡವಾಳ ಹೊಂದಿರುತ್ತದೆ. 202-2021ನೇ ಸಾಲಿನಲ್ಲಿ ಬ್ಯಾಂಕು ಕಾನೂನು ಬದ್ಧ ತೆರಿಗೆ ಪಾವತಿಯ ನಂತರ 2.82 ಕೋಟಿ ಲಾಭಗಳಿಸಿ ಸನ್ನದು ಲೆಕ್ಕಪರಿಶೋಧಕರಿಂದ “ಎ” ಶ್ರೇಣಿ ಪಡೆದಿರುತ್ತದೆ.
ಬ್ಯಾಂಕ್ ಪಟ್ಟಣ ಸಹಕಾರ ಬ್ಯಾಂಕ್ ವಿಭಾಗದಲ್ಲಿದ್ದು ಭಾರತೀಯ ರಿಸರ್ವ್ ಬ್ಯಾಂಕಿನ ಅಧಿಕಾರದ ವ್ಯಾಪ್ತಿಗೆ ಒಳಪಟ್ಟಿದ್ದು ಗ್ರಾಹಕರಿಗೆ 5.00 ಲಕ್ಷದವರೆಗಿನ ಠೇವಣಿಗಳಿಗೆ ವಿಮಾ ಭದ್ರತೆಯನ್ನು ಕಲ್ಪಿಸಿದೆ ಹಾಗೂ ಕೋವಿಡ್-61ನ ಸವಲತ್ತುಗಳನ್ನು ಗ್ರಾಹಕರಿಗೆ ನೀಡಲಾಗಿದೆ. ಬ್ಯಾಂಕಿನ ಗ್ರಾಹಕರು ಮತ್ತು ಸದಸ್ಯರ ಪೂರ್ಣ ಸಹಕಾರದಿಂದ ಉತ್ತಮ ಪ್ರಗತಿಯನ್ನು ಸಾಧಿಸಿದೆ ಎಂದು ಅಧ್ಯಕ್ಷರು ಸಭೆಯಲ್ಲಿ ವಿವರಿಸಿದರು.
ಪ್ರಸ್ತುತ ಬ್ಯಾಂಕ್ ಸದಸ್ಯರು ಮತ್ತು ಗ್ರಾಹಕರಿಗೆ ಇ-ಸ್ಟಾಂಪಿoಗ್, PAN ಕಾರ್ಡ್ ಸೌಲಭ್ಯ,RTGS ಮತ್ತು NEFT, ಮೊಬೈಲ್ ಬ್ಯಾಂಕಿ0ಗ್ (IMPS), ATM ಸೌಲಭ್ಯ, SMS Alert, Swiping Machine ಸೌಲಭ್ಯ, ಠೇವಣಿಗಳಿಗೆ ವಿಮಾ ಭದ್ರತೆ,  IFFCO TOKIO ವಾಹನ ವಿಮೆ, ಸೇಫ್ ಡೆಪಾಸಿಟ್ ಲಾಕರ್ ವ್ಯವಸ್ಥೆ, ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನಾ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭಿಮಾ ಯೋಜನಾ, ಹಿರಿಯ ನಾಗರಿಕರಿಗೆ ಶೇ:೦.೫೦ ಅಧಿಕ ಬಡ್ಡಿ ಹಾಗೂ ಕಡಿಮೆ ಬಡ್ಡಿ THE UDUPI CO-OP. TOWN BANK LTD., UDUPI, UಆUPIಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕ್ ಲಿ., ಉಡುಪಿ. RBI Licence No. KA-1043P Baliga Arcade, V S T Road, Udupi-576 101; Ph :0820-2523506e-mail:[email protected],website:www.udupicoop town bank.com. 
ಕಡಿಮೆ  ದರದಲ್ಲಿ ಸಾಲ ಸೌಲಭ್ಯಗಳನ್ನು ನೀಡುತ್ತಲಿದೆ ಹಾಗೂ ಸದ್ಯದಲ್ಲಿಯೇ UPI ಆಧಾರಿತ ಪಾವತಿಯ ಸೇವೆಯನ್ನು ಪ್ರಾರಂಭಿಸಲಿದೆ. ಬ್ಯಾoಕಿನ ಉಪಾಧ್ಯಕ್ಷರಾದ ಶ್ರೀ ಪಿ. ರಾಘವೇಂದ್ರ ಭಟ್, ನಿರ್ದೇಶಕರುಗಳಾದ ಶ್ರೀ ಪಿ.ಎನ್.ರವೀಂದ್ರ ರಾವ್, ಶ್ರೀ ಜಗನ್ನಾಥ್ ಜಿ, ಶ್ರೀ ಜಯಪ್ರಕಾಶ್ ಭಂಡಾರಿ, ಶ್ರೀ ದೇವದಾಸ್, ಶ್ರೀ ಭಾಸ್ಕರ  ರಾವ್ ಕಿದಿಯೂರು, ಶ್ರೀ ಸೂರ್ಯಪ್ರಕಾಶ್ ರಾವ್ ಎನ್., ಶ್ರೀ ಎನ್. ಪ್ರಹ್ಲಾದ್ ಬಲ್ಲಾಳ್, ಶ್ರೀಮತಿ ಮನೋರಮಾ ಎಸ್. ಮತ್ತು ಶ್ರೀಮತಿ ರೂಪಾ ಮೋಹನ್ ಉಪಸ್ಥಿತರಿದ್ದರು.
ಉತ್ತಮವಾಗಿ ಕಾರ್ಯನಿರ್ವಹಿಸಿದ ಶಾಖೆಗಳಿಗೆ ಪ್ರಶಸ್ತಿ ನೀಡಲಾಯಿತು. ಸಹಾಯಕ ಮುಖಯ ಕಾರ್ಯ ನಿರ್ವಹಣಾಧಿಕಾರಿಯಾದ ಶ್ರೀ ಪಿ. ವಿಷ್ಣುಮೂರ್ತಿ ಆಚಾರ್ಯರವರು ವಂದನಾರ್ಪಣೆ ಮಾಡಿದರು. ಶ್ರೀ ಬಿ.ವಿ.ಲಕ್ಷ್ಮೀನಾರಾಯಣರವರು ಕಾರ್ಯಕ್ರಮವನ್ನು ನಿರೂಪಿಸಿದರು.
 
 
 
 
 
 
 
 
 
 
 

Leave a Reply