ಉಡುಪಿ: ಭಯ ಹುಟ್ಟಿಸುತ್ತಿದೆ ಹೆಚ್ಚುತ್ತಿರುವ ಸೊಂಕಿತರ ಸಂಖ್ಯೆ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ. ಸೋಮವಾರ 120 ಮಂದಿಗೆ ಸೋಂಕು ದೃಢವಾಗಿದ್ದು, 54 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 932 ಸಕ್ರಿಯ ಪ್ರಕರಣಗಳಿವೆ.

ಬುಧವಾರ 3,842 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಆ ಪೈಕಿ 104 ಮಂದಿಗೆ ಗೃಹ ಚಿಕಿತ್ಸೆಗೆ ಸಲಹೆ ನೀಡಲಾಗಿದೆ ಮತ್ತು 16 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬುಧವಾರ ದೃಢಪಟ್ಟ ಸೋಂಕಿತರಲ್ಲಿ ಉಡುಪಿ 54, ಕುಂದಾಪುರ 18, ಕಾರ್ಕಳ 46 ಮತ್ತು ಹೊರ ಜಿಲ್ಲೆಗಳ 2 ಮಂದಿ ಇದ್ದಾರೆ ಎಂದು ಡಿ.ಎಚ್.ಓ. ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply