ಅದಾನಿ ಬಂದರು ನಿರ್ಮಾಣಕ್ಕೆ ವಿರೋಧ: ದೋಣಿಗೆ ಬೆಂಕಿ ಹಚ್ಚಿದ ಮೀನುಗಾರರು

ತಿರುವನಂತಪುರಂನಲ್ಲಿ ಗೌತಮ್ ಅದಾನಿ ಸಮೂಹದ ಅಂತಾರಾಷ್ಟ್ರೀಯ ಬಂದರು ನಿರ್ಮಾಣ ಕಾಮಗಾರಿ ಯನ್ನು ಸ್ಥಳೀಯರು ವಿರೋಧಿಸುತ್ತಲೇ ಇದ್ದು, ಇದೀಗ ಪ್ರತಿಭಟನೆ 100ನೇ ದಿನಕ್ಕೆ ಕಾಲಿಟ್ಟಿದೆ.

ಬಂದರು ನಿರ್ಮಾಣ ಕಾಮಗಾರಿ ವಿರುದ್ಧ ಆಕ್ರೋಶ ಹೊರಹಾಕಿದ ಮೀನುಗಾರರು ತಮ್ಮ ದೋಣಿಗಳಿಗೆ ಬೆಂಕಿ ಹಚ್ಚಿದ್ದಾರೆ. ಸಮುದ್ರ ತೀರ ಇಲ್ಲದೆ ನಮ್ಮ ಬದುಕು ಇಲ್ಲ, ಇದೀಗ ಬಂದರು ಬಂದರೆ ನಮ್ಮ ತೀರ ಇರುವುದಿಲ್ಲ, ಶಾಶ್ವತವಾಗಿ ಬದುಕು ಕಳೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ಮೂರು ತಿಂಗಳಿನಿಂದ ಬಂದರು ನಿರ್ಮಾಣ ಕಾಮಗಾರಿ ಸ್ಥಗಿತ ಗೊಂಡಿತ್ತು.

 
 
 
 
 
 
 
 
 
 
 

Leave a Reply