ಮೂಡುಬಿದಿರೆ : ಕಂಬಳ ಶಿಸ್ತು ಪಾಲನಾ ಸಮಿತಿ ಸಭೆ – ಕೆಲವು ನೀತಿ ನಿಯಮಗಳ ಬದಲಾವಣೆ ಕುರಿತು ಚರ್ಚೆ

ಮೂಡುಬಿದಿರೆ: ಶಿಸ್ತು ಪಾಲನಾ ಸಮಿತಿಯ ಅಧ್ಯಕ್ಷ ಭಾಸ್ಕರ್ ಎಸ್.ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆದ ಸಭೆಯಲ್ಲಿ ಕಂಬಳದಲ್ಲಿನ ಕೆಲವು ನೀತಿ ನಿಯಮಗಳ ಬದಲಾವಣೆಗಳ ಕುರಿತು ಚರ್ಚಿಸಲಾಯಿತು.

ಸಾಂಪ್ರಾದಾಯಿಕ ಕಂಬಳಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಕಂಬಳಗಳಲ್ಲಿ ಬೆಳಗ್ಗೆ 9.00ಗಂಟೆಗೆ ಕೋಣಗಳನ್ನು ಕರೆಗೆ ಇಳಿಸಿ 24 ಗಂಟೆಗಳೊಳಗೆ ಮುಗಿಸುವ ಸಂಪೂರ್ಣ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ಆಯಾಯ ಸ್ಥಳಿಯ ಕಂಬಳದ ವ್ಯವಸ್ಥಾಪಕರು ಶಿಸ್ತನ್ನು ಕೈಗೊಳ್ಳುವ ಬಗ್ಗೆ ಹಾಗೂ ಕಂಬಳದ ಪ್ರತಿ ಓಟಗಾರರು ಮೂರು ಜತೆ ಕೋಣಗಳನ್ನು ಮಾತ್ರ ಆಯಾಯ ಕಂಬಳಗಳಲ್ಲಿ ಓಡಿಸುವುದು. 

ಆದರೆ 2 ಜತೆ (ಎ,ಬಿ) ಕೋಣಗಳ ಯಜಮಾನರ ಇಬ್ಬರು ಓಟಗಾರರ ಪೈಕಿ ಒಬ್ಬರಿಗೆ ಗಂಭೀರ ಸ್ವರೂಪದ ಗಾಯದ ಸಮಸ್ಯೆ, ಅಸೌಖ್ಯದ ಕಾರಣ ಅಥವಾ ಅಮೆ, ಕರ, ಸೂತಕಾದಿ ಸಮಸ್ಯೆಗಳು ಎದುರಾದಲ್ಲಿ ಇನ್ನೊಂದು ಜತೆ ಕೋಣಗಳನ್ನು ಹೆಚ್ಚುವರಿಕೆಯಾಗಿ ಓಡಿಸಲು ಅವಕಾಶ ನೀಡುವ ವಿಚಾರ ಸಹಿತ ಕಂಬಳದಲ್ಲಿ ನೀತಿ ನಿಯಮ ರೂಪಿಸುವ ಸಹಿತ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.

ತೀರ್ಪುಗಾರರು ಕಾರ್ಯನಿರ್ವಹಿಸುವ ಸಂದರ್ಭಗಳಲ್ಲಿ ಶಿಸ್ತು ಉಲ್ಲಂಘನೆಯಾದಲ್ಲಿ ಜಿಲ್ಲಾ ಕಂಬಳ ಸಮಿತಿ ಕಾರ್ಯಕಾರು ಸಮಿತಿಯ ಸಭೆಯನ್ನು ಮೂರು ದಿನಗಳಲ್ಲಿ ಕರೆದು, ತಪ್ಪಿತಸ್ಥರ ಬಗ್ಗೆ ತೀರ್ಮಾನ ಕೈಗೊಂಡು ಅಮಾನತಿನಂತಹ ಶಿಕ್ಷೆಗೆ ಒಳಪಡಿಸುವುದು. ಅಮಾನತಿನ ಪ್ರಮಾಣ ಹಾಗೂ ಶಿಕ್ಷೆಯ ಸ್ವರೂಪವನ್ನು ಮುಂದಿನ ಸಭೆಯಲ್ಲಿ ತೀರ್ಮಾನಿಸುವ ಕುರಿತು ಮಾತುಕತೆ ನಡೆಯಿತು. ಕಂಬಳದಲ್ಲಿ ತೀರ್ಪುಗಾರರು ತೀರ್ಪು ನೀಡುವ ಸಂದರ್ಭ ಮಧ್ಯಪಾನವನ್ನು ಮಾಡಿದ್ದರೆ ಅವರಿಗೂ ಕಾನೂನು ಕ್ರಮ ಜರುಗಿಸಬೇಕೆಂಬ ಸಭೆಯಲ್ಲಿ ಕೇಳಿ ಬಂತು.

ಶಿಸ್ತು ಪಾಲನಾ ಸಮಿತಿಯ ಸದಸ್ಯ ಎರ್ಮಾಳ್ ರೋಹಿತ್ ಹೆಗ್ಡೆ, ರೆಂಜಾಳ ಕಾರ್ಯದರ್ಶಿ ಸುರೇಶ್ ಕೆ.ಪೂಜಾರಿ, ರಾಜೀವ್ ಶೆಟ್ಟಿ ಇರ್ವತ್ತೂರು, ಸಾಂಪ್ರಾದಾಯಿಕ ಕಂಬಳದ ಬೈಂದೂರು ವೆಂಕಟ ಪೂಜಾರಿ ಉಪಸ್ಥಿತರಿದ್ದರು. ವಿಜಯಕುಮಾರ್ ಕಂಗಿನ ಮನೆ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply