ತೆಂಕನಿಡಿಯೂರು ಕಾಲೇಜಿನಲ್ಲಿ ಕಡಲಾಮೆ ರಕ್ಷಣೆಯ ಮಾಹಿತಿ ಕಾರ್ಯಕ್ರಮ

ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಇಲ್ಲಿನ ಐ.ಕ್ಯೂ.ಎ.ಸಿ. ಹಾಗೂ ಯೂತ್ ರೆಡ್‌ಕ್ರಾಸ್ ಘಟಕ ಮತ್ತು ಕುಂದಾಪುರದ ರೀಫ್‌ವಾಚ್ ಮೆರಿನ್ ಕನರ್ಸವೇಶನ್ ಸಂಸ್ಥೆಯ ಜೊತೆಯಾಗಿ ವಿದ್ಯಾರ್ಥಿಗಳಿಗೆ ಕಡಲಾಮೆಯ ರಕ್ಷಣೆಯ ಕುರಿತಾದ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ರೀಫ್‌ವಾಚ್ ಮೆರಿನ್ ಕನರ್ಸವೇಶನ್ ಸಂಸ್ಥೆಯ ಸ್ವಯಂ ಸೇವಕರಾದ ಶ್ರೀ ವೆಂಕಟೇಶ್ ಹೆಚ್.ಹಾಗೂ ಶ್ರೀ ವಿರಿಲ್ ಸ್ಟೀಫನ್ ವಿದ್ಯಾರ್ಥಿಗಳಿಗೆ ಮಾನವ ಜನಾಂಗದ ಉಳಿವಿಗೆ ಕಡಲಾಮೆಗಳ ಕೊಡುಗೆ, ಕಡಾಮೆಗಳ ಅಳಿವಿಗೆ ಕಾರಣಗಳು, ಕಡಲಾಮೆಗಳ ವಂಶಾಭಿವೃದ್ಧಿ ಮತ್ತು ಕಡಲಾಮೆಗಳ ರಕ್ಷಣೆಯ ಕ್ರಮಗಳ ಕುರಿತಾಗಿ ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡುವುದರ ಜೊತೆಗೆ ಸ್ವಚ್ಚತೆ ಮತ್ತು ಪರಿಸರ ರಕ್ಷಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸುರೇಶ್ ರೈ ಕೆ. ವಹಿಸಿದ್ದರು. ಐ.ಕ್ಯೂ.ಎ.ಸಿ. ಸಂಚಾಲಕರಾದ ಡಾ.ಮೇವಿ ಮಿರಾಂದ, ಯೂತ್ ರೆಡ್‌ಕ್ರಾಸ್ ಸಂಚಾಲಕರಾದ ಶ್ರೀ ಪ್ರಶಾಂತ್ ನೀಲಾವರ, ರೆಡ್‌ಕ್ರಾಸ್ ವಿದ್ಯಾರ್ಥಿ ಪ್ರತಿನಿಧಿ ಶ್ರೀ ನವೀನ್ ಕುಮಾರ್, ಬೋಧಕ/ಬೋಧಕೇತರ ವೃಂದದವರು ಕಾರ್ಯಕ್ರಮದಲ್ಲಿ ಭಾಗಿಯಾದರು.

 
 
 
 
 
 
 
 
 
 
 

Leave a Reply