Janardhan Kodavoor/ Team KaravaliXpress
25.6 C
Udupi
Saturday, December 3, 2022
Sathyanatha Stores Brahmavara

ತೆಂಕನಿಡಿಯೂರು ಕಾಲೇಜಿನಲ್ಲಿ ಆಂಗ್ಲಭಾಷಾ ಕಾರ್ಯಗಾರ

ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಇಲ್ಲಿನ ಐ.ಕ್ಯೂ.ಎ.ಸಿ., ಆಂಗ್ಲಭಾಷಾ ವಿಭಾಗ ಹಾಗೂ ಮಣಿಪಾಲ ವಿ.ವಿ.ಯ ಯುರೋಪಿಯನ್ ಸ್ಟಡಿ ಸೆಂಟರ್ ಸಂಯುಕ್ತ ಆಶ್ರಯದಲ್ಲಿ ಯುರೋಪಿಯನ್ ಲಿಟರೇಚರ್ ಹಾಗೂ ಆಂಗ್ಲ ಸಾಹಿತ್ಯ ಸಿದ್ಧಾಂತಗಳ ಕುರಿತಾದ ಒಂದು ದಿನದ ಕಾರ್ಯಾಗಾರ ನಡೆಸಲಾಯಿತು. ಕಾರ್ಯಾಗಾರಕ್ಕೆ ಚಾಲಕನೆಯಿತ್ತ ಪ್ರಾಂಶುಪಾಲ ಡಾ. ಸುರೇಶ್ ರೈ ಕೆ. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ – ಸ್ನಾತಕೋತ್ತರ ಪದವಿಯಲ್ಲಿ ಅಧ್ಯಯನ ನಡೆಸುವಾಗ ಗಣಮಟ್ಟದ ಇಂತಹ ಕಾರ್ಯಾಗಾರಗಳು ಆಳವಾದ ಜ್ಞಾನಸಂಪದಾನೆಗೆ ಅವಶ್ಯವಾಗಿದ್ದು, ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆಯಿತ್ತರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾವಹಿಸಿದ್ದ ಮಣಿಪಾಲ ವಿ.ವಿ.ಯ ಮಾನವಿಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪ್ರವೀಣ್ ಶೆಟ್ಟಿ, ಯುರೋಪಿಯನ್ ಸ್ಟಡಿ ಸೆಂಟರ್‌ನ ಸಹಾಯಕ ಪ್ರಾಧ್ಯಾಪಕ ಡಾ. ರೀಚಾ ಗುಪ್ತಾ, ಹಿರಿಯಡ್ಕ ಸರಕಾರಿ ಪದವಿ ಪೂರ್ವ ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕ ಶ್ರೀ ಪ್ರತಾಪ್‌ಚಂದ್ರ ತೋನ್ಸೆ ಪ್ಲೇಟೋರಿಂದ ಆರಂಭವಾಗಿ ಸಮಕಾಲೀನ ಇಂಗ್ಲೀಷ್ ಸಾಹಿತ್ಯದ ಸೂಕ್ಷö್ಮತೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಕಾರ್ಯಾಗಾರದ ಸಂಯೋಜಕ ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಶ್ರೀ ಶ್ರೀಧರ್ ಭಟ್ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. ವಿದ್ಯಾರ್ಥಿನಿ ಕು. ದರ್ಶಿನಿ ಶೆಟ್ಟಿ ವಂದಿಸಿದರೆ, ಕು. ರವೀನಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಐ.ಕ್ಯೂ.ಎ.ಸಿ. ಸಂಚಾಲಕಿ ಡಾ. ಮೇವಿ ಮಿರಾಂದ, ಆಂಗ್ಲಭಾಷಾ ಸಹಾಯ ಪ್ರಾಧ್ಯಾಪಕಿ ಡಾ. ಗೀತಾ ಎನ್. ಹಾಗೂ ಉಪನ್ಯಾಸಕಿಯರಾದ ಶ್ರೀಮತಿ ನಮಿತಾ ಆಚಾರ್ಯ, ಶ್ರೀಮತಿ ಶ್ವೇತಾ, ಕು. ಏಂಜೆಲಾ ಜಾನ್, ಬೋಧಕ ವೃಂದದವರು ಹಾಗೂ ಪ್ರಥಮ ಮತ್ತು ದ್ವಿತೀಯ ಆಂಗ್ಲಭಾಷಾ ಸ್ನಾತಕೋತ್ತರ ವಿಭಾಗ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!