ಡ್ರಗ್ಸ್ ದಂದೆಯಲ್ಲಿ ರಾ”ಗಿಣಿ” ಅಂದರ್

ಖ್ಯಾತ ನಾಟಿ ಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಾಗಿಣಿ ವಿರುದ್ಧ FIR ದಾಖಲು. ವಿಡಿಯೋ ಕಾನ್ಫರೆನ್ಸ್ ಮೂಲಕ ಜಡ್ಜ್ ಮುಂದೆ ಹಾಜರು ಪಡಿಸಲಿರುವ ಪೊಲೀಸರು. ಒಂದು ವಾರದ ತನಕ ಪೊಲೀಸ್ ಕಸ್ಟಡಿಗೆ ಪಡೆಯುವ ಸಾಧ್ಯತೆ. ರಾತ್ರಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಲಾಗುವುದು. 

ರವಿಶಂಕರ್ ಹೇಳಿರುವ ಮಾಹಿತಿಗೂ.. ರಾಗಿಣಿ ಹೇಳಿರುವ ಮಾಹಿತಿಗೂ ತಾಳೆಯಾಗುತಿಲ್ಲ. ಇನ್ನೂ ಹೆಚ್ಚಿನ ತನಿಖೆಗೆ ರಾಗಿಣಿಯನ್ನು ಒಳಪಡಿಸುವ ಸಾಧ್ಯತೆ ಇದೆ. ಕೋರ್ಟ್ ಗೆ ಹಾಜರು ಪಡಿಸುವ ಮೊದಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು.

ರಾಗಿಣಿ ಮನೆಯಲ್ಲಿ ತಪಾಸಣೆ ಮಾಡುವ ಸಂದರ್ಭದಲ್ಲಿ ಅಪಾರ ಪ್ರಮಾಣದ ಸಿಗರೇಟ್ ದೊರಕಿತ್ತು. ಅದನ್ನು ಪರೀಕ್ಷೆ ಮಾಡುವಾಗ ಅದರಲ್ಲಿ ಗಾಂಜಾ ಪತ್ತೆಯಾಗಿದೆ. ಈ ಕಾರಣದಿಂದ ರಾಗಿಣಿಯನ್ನು ಅರೆಸ್ಟ್ ಮಾಡಲಾಯಿತು.

 
 
 
 
 
 
 

Leave a Reply