ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಮಹಿಳಾ ವಿಭಾಗದಿಂದ ಬೃಹತ್ ಪ್ರತಿಭಟನೆ

ಬೆಂಗಳೂರು ನಗರದ್ಯಂತ ಹೆಣ್ಣು ಮಕ್ಕಳನ್ನು ವ್ಯಾಪಾರದ ವಸ್ತುವನ್ನಾಗಿಸಿ ಗ್ರಾಹಕನ ಮುಂದೆ ಅರಬೆತ್ತಲೆಯಾಗಿ ಅಶ್ಲೀಲತೆಯಿಂದ ನಿಲ್ಲಿಸಿ ಕೆಲವು ಕಡೆ ನೃತ್ಯ ಮಾಡಿಸಿ ಗ್ರಾಹಕರು ಹಣವನ್ನು ಹೆಣ್ಣು ಮಕ್ಕಳ ಮೇಲೆ ಎಸೆಯುವುದು ಮತ್ತು ಅವರನ್ನು ಹೆಚ್ಚು ಹಣ ಎಸೆಯುವವದರೊಂದಿಗೆ ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ತಳ್ಳುವಂತ ಕೆಲಸಗಳು ನಗರ ದ್ಯಂತ ಪಬ್ಬು ಮತ್ತು ಲೈವ್ ಬ್ಯಾಂಡ್ ಮತ್ತು ಬಾರ್ ಗಳ ಹೆಸರಿನಲ್ಲಿ ಹೆಚ್ಚಾಗಿ ನಡೆಯುತ್ತಿದ್ದು, ಇದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಮಹಿಳಾ ವಿಭಾಗದಿಂದ ರಾಜ್ಯದ ಹಲವಾರು ಸಂಘಟನೆಗಳ ಸಹಯೋಗದೊಂದಿಗೆ ಇದೆ ತಿಂಗಳ 25ನೇ ತಾರೀಕು ಅನಿರ್ದಿಷ್ಟವಾದಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಮಿಕ ಪರಿಷತ್ತಿನ ಮಹಿಳಾ ವಿಭಾಗದ ರಾಜ್ಯದ್ಯಕ್ಷೆ ಶ್ರೀಮತಿ ಪೂಜಾ ಶೆಟ್ಟಿ ಪತ್ರಿಕೆಗೆ ತಿಳಿಸಿದರು,
ಹೊರ ರಾಜ್ಯದಿಂದ ಹೆಣ್ಣು ಮಕ್ಕಳನ್ನು ಕರೆದುಕೊಂಡು ಬರುವುದಲ್ಲದೆ ನಮ್ಮ ರಾಜ್ಯದ ಹೆಣ್ಣು ಮಕ್ಕಳನ್ನು ಇಂತಹ ಕೃತ್ಯಕ್ಕೆ ಪ್ರಚೋದಿಸಿ ಗ್ರಾಹಕರ ಮುಂಭಾಗ ನೃತ್ಯ ಮಾಡಿಸಿ ಬರುವ ಗ್ರಹಕರನ್ನು ಪ್ರಚೋದಿಸಿ ಅವರ ಮೇಲೆ ಹಣ ಚೆಲ್ಲುವಂತೆ ಮಾಡಿ ಹೆಣ್ಣು ಮಕ್ಕಳ ಗೌರವಕ್ಕೆ ಧಕ್ಕೆ ತರುವಂತ ಕೆಲಸವನ್ನು ಅಲ್ಲದೆ ಅದೆಷ್ಟೋ ಕುಟುಂಬಗಳು ಇವರ ಪ್ರಚೋದನೆಗೆ ಬಲಿಯಾಗಿ ಯುವಶಕ್ತಿಗಳು ಬೀದಿಗೆ ಬೀಳುವುದಲ್ಲದೆ ಸಂಸಾರವನ್ನು ಹಾಳು ಮಾಡಿಕೊಂಡ ಉದಾಹರಣೆಗಳು ಬಹಳಷ್ಟು ಇದ್ದು..
ಲೈವ್ ಬ್ಯಾಂಡ್, ಪಬ್ಬು ಮತ್ತು ಬಾರುಗಳು ಸರ್ಕಾರ ವಿಧಿಸಿದ ಸಮಯವನ್ನು ಮೀರಿ ನಡೆಸುತ್ತಿದ್ದು ಮತ್ತು ಮಾನ್ಯ ನ್ಯಾಯಾಲಯ ಹೊರಡಿಸಿದ ಆದೇಶವನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು ಇದನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಿ ಇಂತಹ ಸಮಾಜಕ್ಕೆ ಮಾರಕ ಆಗುವಂತಹ ಪಬ್ ಮತ್ತು ಲೈವ್ ಬ್ಯಾಂಡ್ಗಳನ್ನು ಬಂದ್ ಮಾಡಿಸಬೇಕೆಂದು ಒತ್ತಾಯಿಸಿ ಅನಿರ್ದಿಷ್ಟವದಿ ಹೋರಾಟಕ್ಕೆ 25ನೇ ತಾರೀಕು ಶನಿವಾರ ಚಾಲನೆ ನೀಡಲಿದ್ದು ಈ ಹೋರಾಟದಲ್ಲಿ ಹಲವಾರು ಮಹಿಳಾ ಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ದಲಿತ ಪರ ಸಂಘಟನೆಗಳು, ರೈತ ಪರ ಸಂಘಟನೆಗಳು, ಚಾಲಕ ಪರ ಮತ್ತು ಕಾರ್ಮಿಕ ಪರ ಸಂಘಟನೆಗಳು ಪಾಲ್ಗೊಳ್ಳಲಿದ್ದು ತಮಟೆ ಚಳುವಳಿ, ಬಿತ್ತಿಪತ್ರ ಚಳುವಳಿ, ಹಾಗೂ ಗೃಹಮಂತ್ರಿಗಳ ಗೃಹ ಕಚೇರಿ ಚಲೋ ಚಳುವಳಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ರಾಜ್ಯ ಅಧ್ಯಕ್ಷ ಡಾ. ರವಿ ಶೆಟ್ಟಿ ಬೈಂದೂರ್ ಪತ್ರಿಕೆಗೆ ತಿಳಿಸಿದರು,
ಕಾರ್ಮಿಕ ಪರಿಷತ್ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಾಲಕರ ವಿಭಾಗದ ರಾಜ್ಯಾಧ್ಯಕ್ಷರಾದ ಮಣಿಕಂಠ ರವರು, ಅಲ್ಪಸಂಖ್ಯಾತರ ವಿಭಾಗದ ರಾಜ್ಯಾಧ್ಯಕ್ಷರಾದ ಜಬೀರ್ ಹತ್ತಾಸ್ ರವರು ರಾಜ್ಯ ಕಾರ್ಯದರ್ಶಿ ಹರೀಶ್ ಶೆಟ್ಟಿ, ರಾಜ್ಯ ವಕ್ತಾರರಾದ ಸ್ವಾಮಿರವರು ಹಾಗೂ ಇನ್ನಿತರರು ಪಾಲ್ಗೊಂಡಿದ್ದರು,

 
 
 
 
 
 
 
 
 
 
 

Leave a Reply