ಶ್ರೀ ಎಚ್.ಎನ್. ಶೃಂಗೇಶ್ವರರಿಗೆ ಅಭಿನಂದನೆ.

ಉಡುಪಿ : 32 ವರ್ಷಗಳ ಕಾಲ ನಿಟ್ಟೂರು ಪ್ರೌಢಶಾಲೆಯಲ್ಲಿ ಸಂಸ್ಕøತ ಭಾಷಾ ಶಿಕ್ಷಕರಾಗಿ ನಿವೃತ್ತರಾದ ಶ್ರೀ ಹೆಚ್. ಎನ್. ಶೃಂಗೇಶ್ವರ ಇವರನ್ನು 30-04-2022ರಂದು ಶಾಲಾ ರಜತ ಸಭಾಭವನದಲ್ಲಿ ಕಾಣಿಯೂರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಸನ್ಮಾನಿಸಿ, ಮಾತನಾಡಿದ ಶ್ರೀಗಳು ಶೃಂಗೇಶ್ವರ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠವನ್ನು ಬೋಧಿಸುತ್ತ, ಸಮಾಜಮುಖಿಯಾಗಿ ವಿವಿಧ ಸಂಘ -ಸಂಸ್ಥೆಗಳಲ್ಲಿ ಓರ್ವ ಸಜ್ಜನ, ಮೌನ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದು ಅಭಿನಂದನೀಯವಾದದ್ದು, ನಮ್ಮ ಮಠದಲ್ಲೂ ಸೇವೆ ಸಲ್ಲಿಸಿದ್ದು ಮುಂದೆಯೂ ಸಮಾಜಕ್ಕೆ ಅವರ ಸೇವೆ ಲಭಿಸುವಂತಾಗಲಿ ಎಂದು ಆಶೀರ್ವದಿಸಿದರು. ಶ್ರೀ ಹೆಚ್. ಎನ್. ಶೃಂಗೇಶ್ವರ ಧರ್ಮಪತ್ನಿ ಶ್ರೀಮತಿ ವಾಣಿಶ್ರೀಯವರನ್ನು ಪೂಜ್ಯ ಶ್ರೀಗಳು ಈ ಸಂದರ್ಭದಲ್ಲಿ ಹರಸಿದರು. ಅಧ್ಯಕ್ಷತೆ ವಹಿಸಿದ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಶೃಂಗೇಶ್ವರರ ಮೂರು ದಶಕಗಳ ಸೇವೆಯನ್ನು ಸ್ಮರಿಸುತ್ತಾ ಅಭಿನಂದಿಸಿದರು. ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀ ಮುರಲಿ ಕಡೆಕಾರ್ ಮಾತನಾಡಿ ಶಾಲೆ ಮತ್ತು ಯಕ್ಷಗಾನ ಕಲಾರಂಗದ ಸಾಧನೆಯಲ್ಲಿ ಶೃಂಗೇಶ್ವರರ ಕಾರ್ಯತತ್ಪರತೆಯನ್ನು ಸ್ಮರಿಸುತ್ತಾ ಅಭಿನಂದಿಸಿದರು. ತನ್ನ ಹುಟ್ಟಿದ ಊರು ಶ್ರಂಗೇರಿಯಾದರು, ನನಗೆ ವಿದ್ಯೆ ನೀಡಿ ಉದ್ಯೋಗ ಕಲ್ಪಿಸಿದ ನಾಡು ಉಡುಪಿ. ಅದರಲ್ಲೂ ಪೇಜಾವರ ಮಠ ಮತ್ತು ಸಂಸ್ಕøತ ಕಾಲೇಜಿನಿಂದಾಗಿ ತನ್ನ ಬೆಳವಣಿಗೆಯಾಯಿತೆಂದು ನುಡಿದು, ಶಾಲೆಯ ಸರ್ವರಿಗೆ ಶೃಂಗೇಶ್ವರ್ ಕೃತಜ್ಞತೆ ಸಲ್ಲಿಸಿದರು . ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಪಡುಬಿದ್ರೆ ಶ್ರೀಧರ ಆಚಾರ್ಯ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಅನಸೂಯ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ನಾಗಾನಂದ ವಾಸುದೇವ ಆಚಾರ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್ಚಂದ್ರಾಧರ, ಹಳೆವಿದ್ಯಾರ್ಥಿ ಕೃಷ್ಣಪ್ರಸಾದ್ ಅಭಿನಂದನೆಯ ಮಾತುಗಳನ್ನಾಡಿದರು. ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಎಸ್. ವಿ. ಭಟ್ ಸ್ವಾಗತಿಸಿದರು. ಶಿಕ್ಷಕ ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪೇಜಾವರ ಮಠದ ದಿವಾನರಾದ ಪಿ. ರಘುರಾಮ ಆಚಾರ್ಯ, ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಎಮ್. ಗಂಗಾಧರ ರಾವ್, ಜೊತೆ ಕಾರ್ಯದರ್ಶಿ ಪಿ. ದಿನೇಶ್ ಪೂಜಾರಿ, ನಿವೃತ್ತ ಮುಖ್ಯೋಪಾಧ್ಯಾಯರಾದ ಪಿ. ವೇಣುಗೋಪಾಲ ಆಚಾರ್, ಕೆ. ಸುಬ್ರಹ್ಮಣ್ಯ ಭಟ್, ಭಾಸ್ಕರ ಡಿ. ಸುವರ್ಣ, ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸಿಎ ಪ್ರದೀಪ್ ಜೋಗಿ ಧನ್ಯವಾದ ಸಮರ್ಪಿಸಿದರು.

 
 
 
 
 
 
 
 
 
 
 

Leave a Reply