ದೆಹಲಿಯಲ್ಲಿ ಶೋಭಾಯಮಾನ- ಕೃಷಿ, ರೈತರ ಕಲ್ಯಾಣ ರಾಜ್ಯ ಖಾತೆ ಹೊಣೆ

ದೆಹಲಿ: ಭವನದಲ್ಲಿ ಬುಧವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರಿಗೆ ಪ್ರಧಾನಿ ನರೇಂದ್ರ ಮೋದಿ ರಾತ್ರಿ ಖಾತೆ ಹಂಚಿಕೆ ಮಾಡಿದ್ದಾರೆ.

ಕರ್ನಾಟಕದ ರಾಜೀವ್ ಚಂದ್ರಶೇಖರ್​ ಅವರಿಗೆ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ರಾಜ್ಯ ಸಚಿವರ ಹೊಣೆ ನೀಡಲಾ ಗಿದೆ. ಶೋಭಾ ಕರಂದ್ಲಾಜೆ ಅವರಿಗೆ ಕೃಷಿ ಮತ್ತು ರೈತರ ಯೋಗಕ್ಷೇಮ, ಎ.ನಾರಾಯಣಸ್ವಾಮಿ ಅವರಿಗೆ ಸಾಮಾಜಿಕ ನ್ಯಾಯ ಮತ್ತು ಸ್ವಾವ ಲಂಬನೆ ಇಲಾಖೆ, ಭಗವಂತ ಖೂಬ ಅವರಿಗೆ ನವೀಕರಿಸಬಹುದಾದ ಇಂಧನ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲ ಯದ ರಾಜ್ಯ ಸಚಿವರ ಹೊಣೆ ವಹಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಅಮಿತ್ ಶಾ ಅವರಿಗೆ ಗೃಹ ಖಾತೆ ಜೊತೆ ಸಹಕಾರ ಇಲಾಖೆಯ ಹೊಣೆ ನೀಡಲಾಗಿದೆ.

ಉಳಿದಂತೆ ಇತರ ಸಚಿವರ ಖಾತೆ ಹಂಚಿಕೆ ವಿವರ ಇಂತಿದೆ.

ಮನಸುಖ್ ಮಾಂಡವೀಯಾ- ಆರೋಗ್ಯ, ರಾಸಾಯನಿಕ, ಫಾರ್ಮಾಸೂಟಿಕಲ್ಸ್ ಇಲಾಖೆ.
ಸ್ಮೃತಿ ಇರಾನಿ-ಮಹಿಳಾ ಮತ್ತು ಮಕ್ಕಳ ಕಲ್ಯಾಣ. ಪಿಯೂಷ್ ಗೋಯಲ್‌-ಜವಳಿ, ವಾಣಿಜ್ಯ. ಅಶ್ವಿನಿ ವೈಷ್ಣವ್‌-ರೈಲ್ವೆ, ಐಟಿ ಇಲಾಖೆ. ಧರ್ಮೇಂದ್ರ ಪ್ರಧಾನ್‌-ಶಿಕ್ಷಣ, ಕೌಶಲ್ಯಾಭಿವೃದ್ಧಿ. ಹರ್ದೀಪ್ ಸಿಂಗ್‌ ಪುರಿ-ನಗರಾಭಿವೃದ್ಧಿ, ವಸತಿ, ಪೆಟ್ರೋಲಿಯಂ.

ಜ್ಯೋತಿರಾದಿತ್ಯ ಸಿಂಧಿಯಾ-ನಾಗರಿಕ ವಿಮಾನಯಾನ ಖಾತೆ, ಪುರುಷೋತ್ತಮ್ ರೂಪಾಲಾ-ಡೇರಿ ಮತ್ತು ಮೀನುಗಾರಿಕೆ, ಅನುರಾಗ್‌ ಸಿಂಗ್‌ ಠಾಕೂರ್‌-ಕ್ರೀಡೆ, ಮಾಹಿತಿ ಮತ್ತು ಪ್ರಸಾರ, ಪಶುಪತಿಕುಮಾರ್ ಪಾರಸ್‌-ಆಹಾರ ಸಂಸ್ಕರಣೆ, ಗಿರಿರಾಜ್ ಸಿಂಗ್‌-ಗ್ರಾಮೀಣಾಭಿವೃದ್ಧಿ, ಭೂಪೇಂದ್ರ ಯಾದವ್‌-ಕಾರ್ಮಿಕ, ಪರಿಸರ ಇಲಾಖೆ, ಕಿರಣ್ ರಿಜಿಜು-ಸಂಸ್ಕೃತಿ, ಈಶಾನ್ಯ ಅಭಿವೃದ್ಧಿ, ಪ್ರವಾಸೋ ದ್ಯಮ, ಸರ್ಬಾನಂದ್ ಸೋನಾವಾಲ್- ಬಂದರು, ಹಡಗು, ಆಯುಷ್ ಇಲಾಖೆ.

 
 
 
 
 
 
 
 
 
 
 

Leave a Reply