ಶಿರಿಯಾರ ಶಾಲೆಗೆ ವಿಜ್ಞಾನ ಪ್ರಯೋಗಾಲಯ ಕೊಡುಗೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿಗೆ ರೋಟರಿ ಕ್ಲಬ್ ಸೈಬ್ರಕಟ್ಟೆ ಕೊಡುಗೆಯಾಗಿ ನೀಡಿದ ಸಿ.ವಿ.ರಾಮನ್ ವಿಜ್ಞಾನ ಪ್ರಯೋಗಾಲಯವನ್ನು ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್ ಸನ್ಮಾನ್ಯ ಶ್ರೀ ರಾಮಚಂದ್ರ ಮೂರ್ತಿ ಅವರು ಉದ್ಘಾಟಿಸಿ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿಇಂತಹ ಪ್ರಯೋಗಾಲಯ ಗಳು ಅತೀ ಅಗತ್ಯ. ಆ ನಿಟ್ಟಿನಲ್ಲಿ ರೋಟರಿ ಕ್ಲಬ್ ಸೈಬ್ರಕಟ್ಟೆಯ ಕೊಡುಗೆ ಪ್ರಶಂಸನೀಯ ಎಂದು ತಿಳಿಸುತ್ತಾ ವಿಧ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶುಭ ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೈಬ್ರಕಟ್ಟೆ ರೋಟರಿ ಅಧ್ಯಕ್ಷರಾದ ಶ್ರೀ ಪ್ರಸಾದ್ ಭಟ್ ವಹಿಸಿದ್ದರು.ಅತಿಥಿಗಳಾಗಿ ಅಸಿಸ್ಟೆಂಟ್ ಗವರ್ನರ್ ಪದ್ಮನಾಭ ಕಾಂಚನ್,ವಲಯ ಸೇನಾನಿ ವಿಜಯ ಕುಮಾರ್ ಶೆಟ್ಟಿ,ಸಿ.ಆರ್ .ಪಿ ಚಂದ್ರಶೇಖರ ಮೊಗವೀರ ಹಾಗೂ ರೋಟರಿ ಸದಸ್ಯರು ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕ ರೋಟೇರಿಯನ್ ಶ್ರೀ ಸಾಧು ಸೇರಿಗಾರ್ ಬೆನಗಲ್ ಸ್ವಾಗತಿಸಿ, ವೀಣಾ ಕುಮಾರಿ ವಂದಿಸಿದರು.ಶ್ರೀಮತಿ ವಾಣಿಶ್ರೀ, ಕುಮಾರಿ ದಿವ್ಯಾ, ಕುಮಾರಿ ಸುಪ್ರಿಯ ಸಹಕರಿಸಿದರು.

 
 
 
 
 
 
 
 
 
 
 

Leave a Reply